/newsfirstlive-kannada/media/media_files/2026/01/30/chamarajanagara-2026-01-30-16-14-01.jpg)
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದಲ್ಲಿ ಮದುವೆ ಮನೆಯ ಸಂಭ್ರಮದ ನಡುವೆಯೇ ರಕ್ತಪಾತ ನಡೆದಿದೆ. ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ಕಿರಾತಕನೊಬ್ಬ ಚೂರಿಯಿಂದ ಇರಿದಿದ್ದು, ಈ ಘಟನೆಯಿಂದ ಬೆಚ್ಚಿಬಿದ್ದಿರುವ ವರ ರವೀಶ್ ಈಗ ಮದುವೆಯನ್ನೇ ನಿರಾಕರಿಸಿದ್ದಾರೆ. ಪರಿಣಾಮವಾಗಿ ಇಂದು ನಡೆಯಬೇಕಿದ್ದ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ.
ಘಟನೆ ಹಿನ್ನೆಲೆ..
ರವೀಶ್ ಮತ್ತು ನಯನಾ ಎಂಬುವವರ ವಿವಾಹ ಇಂದು ನಿಶ್ಚಯವಾಗಿತ್ತು. ಆದರೆ, ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ವರ ರವೀಶ್ ಅವರನ್ನು ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ರವೀಶ್ ಸದ್ಯ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
15 ದಿನಗಳಿಂದಲೇ ಬರುತ್ತಿತ್ತು ಬೆದರಿಕೆ..
ವರ ರವೀಶ್ ಅವರಿಗೆ ಕಳೆದ 15 ದಿನಗಳಿಂದಲೇ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. "ನಯನಾಳನ್ನು ಮದುವೆಯಾಗಬೇಡ, ಮದುವೆಯಾದರೆ ಸುಮ್ಮನೆ ಬಿಡುವುದಿಲ್ಲ" ಎಂದು ಯಾರೋ ಪರಿಚಿತ ವ್ಯಕ್ತಿ ರವೀಶ್‌ಗೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಈ ಕೃತ್ಯವನ್ನು ನಯನಾಳ ಮಾಜಿ ಪ್ರಿಯಕರನೇ ಎಸಗಿದ್ದಾನೆ ಎಂಬ ಸಂಶಯ ದಟ್ಟವಾಗಿದೆ.
ಮದುವೆ ಬೇಡವೇ ಬೇಡ ಎಂದ ವರ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವೀಶ್ ಅವರನ್ನು ಕಂಡು, ಮದುವೆ ಮಾಡಿಕೊಳ್ಳುವಂತೆ ವಧು ನಯನಾ ಮತ್ತು ಆಕೆಯ ಕುಟುಂಬದವರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ರವೀಶ್ ಮದುವೆಯಾಗಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ರವೀಶ್ ಹೇಳಿದ್ದೇನು?
"ಮದುವೆಯಾಗುವ ಮೊದಲೇ ನನ್ನ ಪ್ರಾಣ ತೆಗೆಯಲು ಸಂಚು ರೂಪಿಸಲಾಗಿದೆ. ಮದುವೆಯಾದ ಮೇಲೆ ನಾನು ಸುಖವಾಗಿ ಬದುಕಲು ಸಾಧ್ಯವೇ ಇಲ್ಲ. ಇಂದು ಚೂರಿ ಇರಿದಿದ್ದಾರೆ, ನಾಳೆ ನನ್ನನ್ನು ಕೊಲೆ ಮಾಡಿದರೆ ಯಾರು ಹೊಣೆ? ನನ್ನ ಪ್ರಾಣ ನನಗೆ ಮುಖ್ಯ," ಎಂದು ರವೀಶ್ ತನ್ನ ಅಳಲು ತೋಡಿಕೊಂಡಿದ್ದು, ಮದುವೆಯನ್ನು ರದ್ದುಗೊಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ ವಜ್ರಮುಷ್ಠಿ ಕಾಳಗದ ರೂವಾರಿ, ಟೈಗರ್ ಬಾಲಾಜಿ ನಿಧನ
/filters:format(webp)/newsfirstlive-kannada/media/media_files/2026/01/30/chamarajanagara-1-2026-01-30-16-16-23.jpg)
ಮದುವೆ ಆಗುವಂತೆ ಕಣ್ಣೀರಿಟ್ಟ ಯುವತಿ.. ಯುವತಿ ನಯನಾ, ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಮದುವೆಯಾಗಲೂ ಯುವಕ ನಿರಾಕರಿಸಿದ್ದು, ಮುಂದೆ ಇದೇ ರೀತಿಯಾದ್ರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾನೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸ್ ತನಿಖೆ ಚುರುಕು
ಇಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದ್ದು, ಎರಡು ಕುಟುಂಬಗಳಲ್ಲೂ ಆತಂಕ ಮನೆಮಾಡಿದೆ. ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಾಜಿ ಪ್ರಿಯಕರನ ಹಳೆ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.
ಇದನ್ನೂ ಓದಿ: ಕಾರ್ಪೋರೇಟ್ ಜಗತ್ತಿನಲ್ಲಿ 40 ರ ವಯಸ್ಸು ಹೊಸ ಲೇ ಆಫ್ ವಯಸ್ಸೇ? 40 ವಯಸ್ಸಿನವರಿಗೆ ಉದ್ಯೋಗ ಬೇಡಿಕೆ ಕುಸಿತ!!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us