/newsfirstlive-kannada/media/media_files/2025/08/25/chikkamagalore-case-2025-08-25-17-51-19.jpg)
ಚಿಕ್ಕಮಗಳೂರು: ಬಾಯ್ ಫ್ರೆಂಡ್ಗಾಗಿ ಕಳ್ಳತನ ನಡೆಸಿದ್ದ ಸೊಸೆಯ ಕೃತ್ಯ ಎಲ್ಲಿ ಬೆಳಕಿಗೆ ಬರುತ್ತೋ ಅಂತಾ ಹೆದರಿದ ಸೊಸೆ, ಅತ್ತೆಯನ್ನೇ ಮುಗಿಸಿದ್ದ ಪ್ರಕರಣದ ರಹಸ್ಯವನ್ನು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಬಯಲಿಗೆ ಎಳೆದಿದ್ದಾರೆ.
ಏನಿದು ಪ್ರಕರಣ..?
ಆಗಸ್ಟ್ 10 ರಂದು ಘಟನೆ ನಡೆದಿದ್ದು, ತಡವಾಗಿ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಬಯಲಾದ ಮಾಹಿತಿಯಂತೆ.. ಸೊಸೆ ಅಶ್ವಿನಿ ಆಗಸ್ಟ್ 10 ರಂದು ಅತ್ತೆ ದೇವಿರಮ್ಮಗೆ (75) ಮುದ್ದೆಯಲ್ಲಿ ನಿದ್ರೆ ಮಾತ್ರೆ ನೀಡಿದ್ದಳು. ಇದರಿಂದ ದೇವಿರಮ್ಮಗೆ ವಾಂತಿ ಕಾಣಿಸಿಕೊಂಡಿದೆ. ಹೀಗಿದ್ದೂ ಸುಮ್ಮನಿದ್ದ ಸೊಸೆ, ಮಾರನೇಯ ದಿನ ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ದೇವಿರಮ್ಮ ಮೃತಪಟ್ಟಿರೋ ವಿಚಾರ ದೃಢವಾಗಿದೆ. ಅತ್ತೆ ಮೃತಪಟ್ಟಿದ್ದಕ್ಕೆ ಕಥೆ ಕಟ್ಟಿದ್ದ ಸೊಸೆ ಕುಟುಂಬಸ್ಥರ ಜೊತೆ ಸೇರಿ ಅಂತ್ಯ ಸಂಸ್ಕಾರವನ್ನೂ ಮುಗಿಸಿದ್ದಾಳೆ.
ಇದನ್ನೂ ಓದಿ: ಲಾಡ್ಜ್ಗೆ ಜೊತೆಯಲ್ಲಿ ಬಂದಿದ್ದ ಮಹಿಳೆ ಜೀವ ತೆಗೆದ ಪ್ರಿಯಕರ ಕಿರಾತಕ..
ಕೇಸ್ ಬೆಳಕಿಗೆ ಬಂದಿದ್ದು ಹೇಗೆ..?
ದೇವಿರಮ್ಮಳನ್ನ ಕಳೆದ ಮೂರು ದಿನಗಳ ಹಿಂದೆ ಸಂಬಂಧಿಕರ ಭೇಟಿ ಆಗಿದ್ದರು. ಈ ವೇಳೆ ಆಕೆಯ ಮೈಯಲ್ಲಿ ಚಿನ್ನಾಭರಣ ಇತ್ತು. ಮೃತಪಟ್ಟ ಬಳಿಕ ಚಿನ್ನಾಭರಣ ನಾಪತ್ತೆ ಹಿನ್ನೆಲೆಯಲ್ಲಿ ಅದನ್ನು ಪ್ರಶ್ನೆ ಮಾಡಿದ್ದಾರೆ. ಸೊಸೆಯ ಬಳಿ ಜೋರಾಗಿ ಕೇಳಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.
ಮುಂದೆ ಏನಾಯ್ತು..?
ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಅಜ್ಜಂಪುರ ಪೊಲೀಸರು ಸೊಸೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಾಯ್ ಪ್ರೇಂಡ್ಗಾಗಿ ಮನೆಯವರ ಹಣ ಹಾಗು ಚಿನ್ನಾಭರಣ ಕದ್ದಿರುವುದಾಗಿ ಹೇಳಿಕೆ ನೀಡಿದ್ದಾಳೆ. ಅಶ್ವಿನಿ ಹೇಳಿಕೆ ಆಧಾರದ ಮೇಲೆ ಆಕೆಯ ಪ್ರಿಯಕರ ಆಂಜನೇಯನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಕದ್ದಿರುವ ಚಿನಾಭರಣವನ್ನು ಪೊಲೀಸರು ರಿಕವರಿ ಮಾಡಿದ್ದಾರೆ.
ಇದನ್ನೂ ಓದಿ: ಕತ್ತಲ್ಲಿದ್ದ ಚಿನ್ನದ ಸರ ನೋಡಿ ಪಾಪಿಗಳ ಪ್ಲಾನ್.. EMI ಹಣ ಕಟ್ಟಲು ಸ್ನೇಹಿತೆಯ ಜೀವ ತೆಗೆದ ಜೋಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ