/newsfirstlive-kannada/media/media_files/2026/02/08/chikkamagaluru-farmer-2-2026-02-08-11-16-48.jpg)
ಚಿಕ್ಕಮಗಳೂರು: ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತನೊಬ್ಬ ಬದುಕಿದ್ದಾಗಲೇ ತನ್ನ ತಿಥಿ ಮತ್ತು ಶ್ರದ್ಧಾಂಜಲಿ ಸಭೆಗೆ ಅಧಿಕಾರಿಗಳಿಗೆ ಆಹ್ವಾನ ನೀಡುವ ಮೂಲಕ ವಿಭಿನ್ನವಾಗಿ ಹಾಗೂ ಆಕ್ರೋಶಭರಿತವಾಗಿ ಪ್ರತಿಭಟಿಸಲು ಮುಂದಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಗಂಧದ ಬೆಳೆಗಾರರಾದ ವಿಶುಕುಮಾರ್ ಎಂಬುವವರೇ ಈ ವಿಚಿತ್ರ ಆಹ್ವಾನ ನೀಡಿದವರು. ರಾಷ್ಟ್ರೀಯ ಹೆದ್ದಾರಿಗಾಗಿ ಇವರ ಜಮೀನು ಮತ್ತು ಜಮೀನಿನಲ್ಲಿದ್ದ ಬೆಲೆಬಾಳುವ ಗಂಧದ ಮರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್​.. 11 ತಿಂಗಳ ಮಗುವನ್ನ ಅನಾಥ ಮಾಡಿ ಜೀವಬಿಟ್ಟ ಸೊಸೆ..!
/filters:format(webp)/newsfirstlive-kannada/media/media_files/2026/02/08/chikkamagaluru-farmer-1-2026-02-08-11-17-01.jpg)
ಆಹ್ವಾನ ಪತ್ರಿಕೆಯಲ್ಲಿ ಏನಿದೆ?
‘ನಾಳೆ (ದಿನಾಂಕ) ಬೆಳಗ್ಗೆ 10 ಗಂಟೆಗೆ ನನ್ನ ಸಂತಾಪ ಸಭೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಊಟದ ವ್ಯವಸ್ಥೆ ಇದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು, ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳು ಹಾಗೂ ವಿಶೇಷ ಭೂಸ್ವಾದೀನ ಅಧಿಕಾರಿಗಳು ತಪ್ಪದೇ ಬರಬೇಕು’ ಎಂದು ವಿಶುಕುಮಾರ್ ಆಹ್ವಾನ ನೀಡಿದ್ದಾರೆ.
ಶ್ರೀಗಂಧಕ್ಕೆ ಬರೀ 420 ರೂ. ಬೆಲೆ!
ಅಧಿಕಾರಿಗಳ ಅವೈಜ್ಞಾನಿಕ ದರ ನಿಗದಿಯೇ ಈ ಆಕ್ರೋಶಕ್ಕೆ ಕಾರಣ. ವಿಶುಕುಮಾರ್ ಅವರ ಪ್ರಕಾರ, ಸ್ವಾಧೀನಪಡಿಸಿಕೊಳ್ಳುತ್ತಿರುವ ಇತರೆ ಮರಗಳಿಗೆ ಉತ್ತಮ ಬೆಲೆ ನೀಡಲಾಗಿದೆ.
- ಒಂದು ಮಾವಿನ ಮರಕ್ಕೆ: 63,000 ರೂ.
- ತೆಂಗಿನ ಮರಕ್ಕೆ: 37,000 ರೂ.
- ನಿಂಬೆ ಗಿಡಕ್ಕೆ: 3,400 ರೂ.
- ಬೇವಿನ ಮರಕ್ಕೆ: 2,200 ರೂ.
/filters:format(webp)/newsfirstlive-kannada/media/media_files/2026/02/08/chikkamagaluru-farmer-2026-02-08-11-17-15.jpg)
ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಅಧಿಕಾರಿಗಳು ನಿಗದಿಪಡಿಸಿರುವುದು ಕೇವಲ 420 ರೂ. ಮಾತ್ರ! ನ್ಯಾಯಾಲಯವು ಶ್ರೀಗಂಧದ ಮರಕ್ಕೆ ಕನಿಷ್ಠ 25,000 ರೂ. ವೈಜ್ಞಾನಿಕ ದರ ನೀಡುವಂತೆ ಸೂಚಿಸಿದ್ದರೂ, ಅಧಿಕಾರಿಗಳು ಅದನ್ನು ಗಾಳಿಗೆ ತೂರಿ ಕೇವಲ 420 ರೂ. ನಿಗದಿ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾರೆ.
ಎಚ್ಚರಿಕೆ
ಅಧಿಕಾರಿಗಳ ಈ ಕಣ್ಣಾಮುಚ್ಚಾಲೆ ಆಟದಿಂದ ರೋಸಿಹೋಗಿರುವ ವಿಶುಕುಮಾರ್, ವಾರದ ಹಿಂದೆಯಷ್ಟೇ ತಮಗೆ ದಯಾಮರಣ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು. ಶಿವಮೊಗ್ಗ ಸಿಸಿಎಫ್ (CCF) ಕಚೇರಿ ಬಳಿ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಈಗ ತಮ್ಮ ತಿಥಿಗೆ ತಾವೇ ಆಹ್ವಾನ ನೀಡುವ ಮೂಲಕ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ಗಣಿ ನಾಡಿನ ಒಡಲಲ್ಲಿ ಅಡಗಿದ ಸಾವಿರಾರು ವರ್ಷಗಳ ಇತಿಹಾಸ.. 5000 ವರ್ಷಗಳ ಹಿಂದಿನ ಮಾನವರ ಪಳೆಯುಳಿಕೆ ಪತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us