/newsfirstlive-kannada/media/media_files/2025/10/16/chikkamagaluru-tanu-2025-10-16-12-42-19.jpg)
ಚಿಕ್ಕಮಗಳೂರು: ಸಂಸಾರ ಕಲಹಕ್ಕೆ ಗೃಹಿಣಿಯೊಬ್ಬರು ದಾರುಣವಾಗಿ ಜೀವ ಕಳೆದುಕೊಂಡಿದ್ದಾರೆ. ಪಾಪಿ ಪತಿ ಬರ್ಬರವಾಗಿ ಪತ್ನಿಯ ಪ್ರಾಣ ತೆಗೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಕೃತ್ಯ ನಡೆದಿದೆ. ತನು (25) ಗಂಡನಿಂದ ಭೀಕರವಾಗಿ ಕೊ*ಯಾದ ಮಹಿಳೆ. ರಮೇಶ್ ಆರೋಪಿ ಪತಿ.
ಇದನ್ನೂ ಓದಿ: ಪತಿಯಿಂದಲೇ ಜೀವ ಕಳೆದುಕೊಂಡ ಕೃತಿಕಾ ರೆಡ್ಡಿ ಯಾರು? ಆರೋಪಿಯ ಹಿನ್ನಲೆ ಏನು?
7 ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ 6 ವರ್ಷದ ಗಂಡು ಮಗುವಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕಲಹ ಶುರುವಾಗಿತ್ತು. ಇದೇ ಕಾರಣಕ್ಕೆ ತನು ಪತಿಯಿಂದ ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸ ಮಾಡ್ತಿದ್ದಳು ಎನ್ನಲಾಗಿದೆ.
ನಿನ್ನೆ ರಾತ್ರಿ ಕುಡಿದು ಬಂದು ಪತ್ನಿಯನ್ನ ಕ್ರೂರವಾಗಿ ಕೊಚ್ಚಿ ಮುಗಿಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಆಟಕ್ಕಿಂತ ರಾಜಕೀಯವೇ ಹೆಚ್ಚು.. ಶಮಿ ರೊಚ್ಚಿಗೆದ್ದ ಹಿಂದಿನ ಅಸಲಿ ಸತ್ಯ ಇಲ್ಲಿದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ