/newsfirstlive-kannada/media/media_files/2025/12/25/chitradurga-accident-2025-12-25-10-11-49.jpg)
ಚಿತ್ರದುರ್ಗ: ಹಿರಿಯೂರಿನಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಒಟ್ಟು ಐವರು ಪ್ರಾಣ ಕಳೆದುಕೊಂಡಿದ್ದಾರೆ. ಬಸ್ಸಿನಲ್ಲಿದ್ದ ನಾಲ್ವರು ಹಾಗೂ ಲಾರಿ ಚಾಲಕ ದುರಂತ ಅಂತ್ಯ ಕಂಡಿದ್ದಾರೆ.
ಬಸ್ಸಿನಲ್ಲಿದ್ದ 33 ಮಂದಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಗಾಯಾಳುಗಳನ್ನು ಹೊರತುಪಡಿಸಿ, ಕೆಲವರ ಸುಳಿವು ಸಿಕ್ಕಿಲ್ಲ. ಬಿಂದು, ಮಾನಸ, ನವ್ಯ, ನಸ್ರತ್ ಹುನ್ನಿಸಾ, ಸೈಯದ್ ಜಮೀರ್, ರಶ್ಮಿ ಇವರ ಸುಳಿವು ಸಿಕ್ಕಿಲ್ಲ.
ಅವರಲ್ಲಿ ರಶ್ಮಿ ಅನ್ನೋರು ಯಾರು ಅಂತಾ ನೋಡೋದಾದ್ರೆ, ರಶ್ಮಿ ಮೂಲತಃ ಭಟ್ಕಳದವರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಸೋಮವಾರದವರಿಗೂ ರಜೆ ಹಾಕಿದ್ದರು. ಹೀಗಾಗಿ ಊರಿಗೆ ಹೋಗುತ್ತಿದ್ದರು.
ಇದನ್ನೂ ಓದಿ: Bus tragedy: ಪವಾಡದ ರೀತಿ ಬಜಾವ್ ಆದ 40 ಶಾಲಾ ಮಕ್ಕಳು
/filters:format(webp)/newsfirstlive-kannada/media/media_files/2025/12/25/chitradurga-bus-accident-2-2025-12-25-08-42-38.jpg)
ತನ್ನ ಇಬ್ಬರು ಸ್ನೇಹಿತೆಯರ ಜೊತೆ ಗೋಕರ್ಣಕ್ಕೆ ರಶ್ಮಿ ಹೋಗ್ತಿದ್ದರು. ಗೋಕರ್ಣ ಟ್ರಿಪ್ ಬಳಿಕ ಭಟ್ಕಳಕ್ಕೆ ಹೋಗಲಿದ್ದರು. ಮಾಹಿತಿಗಳ ಪ್ರಕಾರ, ಕಂಪನಿಯಲ್ಲಿ ನಾಲ್ಕು ದಿನಗಳ ರಜೆ ಕೇಳಿದ್ದರು. ಆದ್ರೆ ನಾಲ್ಕು ದಿನಗಳ ರಜೆ ನೀಡಲು ಸಾಧ್ಯವಿಲ್ಲ ಎಂದು ಟೀಂ ಮ್ಯಾನೇಜರ್ ಹೇಳಿದ್ದರಂತೆ. ಆದ್ರೂ ರಜೆ ಬೇಕೇಬೇಕು ಎಂದು ರಶ್ಮಿ ಪಡೆದುಕೊಂಡು ಗೋಕರ್ಣದತ್ತ ಹೊರಟಿದ್ದರು.
ಸದ್ಯ ರಶ್ಮಿ ಜೊತೆ ಇದ್ದ ಇಬ್ಬರು ಸ್ನೇಹಿತೆಯರು ಸೇಫ್ ಆಗಿದ್ದಾರೆ. ರಶ್ಮಿ ಅವರ ಸುಳಿವು ಸಿಕ್ಕಿಲ್ಲ. ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿದೆ. ಸುಳಿವು ಸಿಗದಿರೋರು ಸುಟ್ಟು ಕರಕಲಾಗಿರೋ ಅನುಮಾನ ಇದೆ.
ಇದನ್ನೂ ಓದಿ:Bus tragedy Updates LIVE : ಶಿರಾ-ಹಿರಿಯೂರು ಹೆದ್ದಾರಿಯಲ್ಲಿ ಭೀಕರ ಬಸ್ ದುರಂತ, ಪ್ರಧಾನಿ ಮೋದಿ ಸಂತಾಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us