ಚಿತ್ರದುರ್ಗದಲ್ಲಿ ಬಸ್ ಘೋರ ದುರಂತ.. ಬದುಕಿ ಬಂದ ಚಾಲಕ ಮತ್ತು ಕ್ಲೀನರ್ ಹೇಳಿದ್ದೇನು..?

ಚಿತ್ರದುರ್ಗದ ಹಿರಿಯೂರು ಬಳಿ ಬಸ್​​ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕರಾಳ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

author-image
Ganesh Kerekuli
Chitradurga bus accident
Advertisment

ಚಿತ್ರದುರ್ಗದ ಹಿರಿಯೂರು ಬಳಿ ಬಸ್​​ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕರಾಳ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ನಾಲ್ವರು ಹಾಗೂ ಲಾರಿ ಚಾಲಕ ಸೇರಿ ಒಟ್ಟು ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಈ ದುರಂತದಲ್ಲಿ ಸೀಬರ್ಡ್​ ಬಸ್ ಚಾಲಕ ಮೊಹ್ಮದ್ ರಫೀಕ್ ಬದುಕುಳಿದಿದ್ದಾರೆ. ಇದೀಗ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಫೀಕ್, ನಾನು ಬಸ್ ಚಾಲನೆ ಮಾಡುವಾಗ ವೇಗವಾಗಿ ಲಾರಿ ಬಂತು. ಅದನ್ನ ತಪ್ಪಿಸಲು ನಾನು ಹೋದಾಗ ಪಕ್ಕದಲ್ಲಿ ಇನ್ನೊಂದು ಬಸ್ ಬಂತು. ಲಾರಿಯವನ ಡಿಸೇಲ್ ಟ್ಯಾಂಕ್​ಗೆ ಬಂದು ಗುದ್ದಿದ್ದಾನೆ. ನನಗೆ ಆ ಕ್ಷಣದಲ್ಲಿ ಏನು ಆಯ್ತು ಅಂತ ಗೊತ್ತಾಗಲಿಲ್ಲ ಎಂದಿದ್ದಾರೆ. 

ಇದನ್ನೂ ಓದಿ: ಹಿರಿಯೂರಿನಲ್ಲಿ ಬಸ್ ದುರಂತ ಹೇಗಾಯಿತು? ಕಂಪ್ಲೀಟ್​ ಮಾಹಿತಿ ನೀಡಿದ ಐಜಿಪಿ ರವಿಕಾಂತೇಗೌಡ

chitradurga-district-between-hiriyuru---sira-seabird-bus-accident_Massive-bus-tragedy_bus-cleaner
ಬಸ್ ಕ್ಲೀನರ್ ಮೊಹ್ಮದ್ ಸಲೀಂ

ಬಸ್ ಕ್ಲೀನರ್ ಮೊಹಮ್ಮದ್ ಸಲೀಂ ಪ್ರತಿಕ್ರಿಯೆ

ಅಫಘಾತವಾದ ಸೀಬರ್ಡ್ ಬಸ್ ನ ಕ್ಲೀನರ್ ಮೊಹಮ್ಮದ್ ಸಲೀಂ ಪ್ರತಿಕ್ರಿಯಿಸಿ.. ನಾನು ಮಲಗಿದ್ದೆ, ಬಸ್ ಅಪಘಾತವಾದ ರಭಸಕ್ಕೆ ಗ್ಲಾಸ್ ಒಡೆದು ಹೊರಗೆ ಬಿದ್ದಿದ್ದೆ. ಏನಾಗಿದೆ ಅಂತ ಗೊತ್ತಾಗಲಿಲ್ಲ. ನನಗೆ ಕೈಗೆ ಅಷ್ಟೇ ಗಾಯವಾಗಿದೆ. ಅಪಘಾತದಲ್ಲಿ ನಾನು ಬಸ್​ನಿಂದ ಹೊರಗೆ ಬಿದ್ದಿದ್ದೆ ಎಂದು ಮೊಹಮ್ಮದ್ ಸಲೀಂ ಹೇಳಿದ್ದಾರೆ. 

ಇದನ್ನೂ ಓದಿ: Bus tragedy Updates LIVE : ಶಿರಾ-ಹಿರಿಯೂರು ಹೆದ್ದಾರಿಯಲ್ಲಿ ಭೀಕರ ಬಸ್ ದುರಂತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chitradurga bus tragedy bus accidnet ಹಿರಿಯೂರು ಬಸ್ ದುರಂತ
Advertisment