ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಒಂದ್ಕಡೆ ಎಸ್​ಐಟಿ ಅಧಿಕಾರಿಗಳಿಂದಲೂ ತೀವ್ರ ವಿಚಾರಣೆ ನಡೀತಿದೆ.. ಮತ್ತೊಂದೆಡೆ ಬಂಗ್ಲೆಗುಡ್ಡದಲ್ಲಿ ಹೆ*ಣಗಳು ಸಿಕ್ಕಿದ್ವು ಅಂತ ಸೌಜನ್ಯ ಮಾವ ವಿಠಲ್​ಗೌಡ ಸ್ಫೋಟಕ ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿಸಿದೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದ ಬಗ್ಗೆ ದೂರು ಕೊಟ್ಟಿದ್ದ ಚಿನ್ನಯ್ಯನನ್ನು ಕರೆದೊಯ್ದು 17 ಸ್ಪಾಟ್​ಗಳಲ್ಲಿ ಎಸ್​ಐಟಿ ಆಪರೇಷನ್ ನಡೆಸಿತ್ತು.. ಆದ್ರೆ, ಯಾವ ಬುರುಡೆಯೂ ಸಿಗದೇ ಸದ್ಯ ಆರೋಪಿ ಚಿನ್ನಯ್ಯ ಶಿವಮೊಗ್ಗ ಜೈಲು ಸೇರಿದ್ದಾಗಿದೆ. ಇದೀಗ ಆ ಸ್ಥಾನದಲ್ಲಿ ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟ ಸೌಜನ್ಯ ಮಾವ ವಿಠಲಗೌಡನನ್ನು ಎಸ್‌ಐಟಿ ತೀವ್ರ ವಿಚಾರಣೆ ನಡೆಸುತ್ತಿದೆ. ವಿಠಲಗೌಡನನ್ನು ಕರೆದೊಯ್ದು ಸ್ಥಳ ಮಹಜರು ಕೂಡ ನಡೆಸಲಾಗಿದೆ.. ವಿಚಾರಣೆ ವೇಳೆಯೇ ಸ್ಫೋಟಕ ಮಾಹಿತಿಗಳು ಬಯಲಾಗಿವೆ.
ಸೌಜನ್ಯ ಮಾವ ವಿಠ್ಠಲ್ ​​ಗೌಡನಿಂದ ಸ್ಫೋಟಕ ಹೇಳಿಕೆ
ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಎಷ್ಟು ಹುಡುಕಿದ್ರೂ ಬುರುಡೆ ಮಾತ್ರ ಸಿಕ್ಕಿರಲಿಲ್ಲ. ಅತ್ತ ಎಸ್​ಐಟಿ ಅಧಿಕಾರಿಗಳಿಂದ ಬುರುಡೆ ಗ್ಯಾಂಗ್​​ನ ತೀವ್ರ ವಿಚಾರಣೆ ನಡೀತಿದೆ.. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಪ್ರದೀಪ್​ಗೌಡ, ವಿಠಲ್​ಗೌಡ ಸೇರಿ ಹಲವರಿಗೆ ವಿಚಾರಣೆಯ ಬಿಸಿ ತಟ್ಟಿದೆ. ನಿನ್ನೆ ಸೌಜನ್ಯ ಮಾವ ವಿಠಲ್​ಗೌಡನನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು ಎಸ್​ಐಟಿ ಸ್ಥಳ ಮಹಜರು ನಡೆಸಿತ್ತು.. ಈ ಬೆನ್ನಲ್ಲೇ ವಿಠಲ್​ಗೌಡನ ವಿಡಿಯೋವೊಂದು ವೈರಲ್ ಆಗಿದ್ದು ಅದ್ರಲ್ಲಿ ವಿಠಲ್​ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾನೆ.. ಬಂಗ್ಲೆಗುಡ್ಡದಲ್ಲಿ ಮಹಜರು ವೇಳೆ ಹೆಣಗಳ ರಾಶಿ ಸಿಕ್ಕಿದೆ ಅಂತ ಹೇಳಿದ್ದಾನೆ.
ಇದನ್ನೂ ಓದಿ:ಅಗಲಿದ ನಿರ್ದೇಶಕ ಎಸ್ ಎಸ್ ಡೇವಿಡ್ ಗೆ ಸ್ನೇಹಿತರಿಂದ ಶ್ರದ್ಧಾಂಜಲಿ ಜೊತೆ ಅನ್ನಂಸಂತರ್ಪಣೆ
ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಡೌಟೇ ಇಲ್ಲ ಅಂತ ವಿಠಲ್​ಗೌಡ ಹೇಳಿದ್ದಾನೆ. ಚಿನ್ನಯ್ಯ, ತಾನ್ಸಿ, ರಂಗ, ಸುಬ್ರಹ್ಮಣ್ಯ ಎಲ್ಲರೂ ಹೇಳಿದ್ದಾರೆ, ಅವರ ಮಾಹಿತಿ ಪ್ರಕಾರ ನಾನು ಮೃತದೇಹ ತೋರಿಸುವೆ, ಮಧ್ಯರಾತ್ರಿ 1 ಗಂಟೆಗೆ ಕರೆದರೂ ತನಿಖೆಗೆ ಬರುತ್ತೇನೆ ಅಂತ ಎಂದಿದ್ದಾನೆ.
ಒಟ್ಟಾರೆ, ಚಿನ್ನಯ್ಯನನ್ನು ಕರೆದೊಯ್ದು ಎಸ್​ಐಟಿ ಅಧಿಕಾರಿಗಳು ತಳಾತಳ ಹುಡುಕಿದ್ರೂ ಬುರುಡೆಗಳು ಮಾತ್ರ ಸಿಕ್ಕಿರಲಿಲ್ಲ. ವಿಠಲ್​ಗೌಡ ಹೇಳಿಕೆಯಿಂದ ಎಸ್​ಐಟಿ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ಚಿನ್ನಯ್ಯನಂತೆ ವಿಠಲ್​ಗೌಡನನ್ನು ಕೂಡ ಕರೆದೊಯ್ದು ಎಸ್​​ಐಟಿ ಮತ್ತೊಮ್ಮೆ ಬುರುಡೆ ಆಪರೇಷನ್ ನಡೆಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us