ಬುರುಡೆ ಚೆನ್ನನ ತಿಮರೋಡಿ ಮನೆಗೆ ಕರೆ ತಂದ SIT; ಅಲ್ಲಿ ಸೀಜ್ ಮಾಡಿದ ವಸ್ತು ಏನು ಗೊತ್ತಾ..?

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸ್ತಿರುವ SIT ಅಧಿಕಾರಿಗಳು ಇವತ್ತು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಆರೋಪಿ ಚೆನ್ನ ಕೊಟ್ಟ ಮಾಹಿತಿ ಆಧರಿಸಿ ಎಸ್​ಐಟಿ ಅಧಿಕಾರಿಗಳು ಆತನಿಗೆ ಆಶ್ರಯ ಕೊಟ್ಟ ಮಹೇಶ್​​ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸ್ತಿದ್ದಾರೆ.

author-image
Ganesh Kerekuli
Dharmasthala chennayya
Advertisment

ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸ್ತಿರುವ SIT ಅಧಿಕಾರಿಗಳು ಇವತ್ತು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಆರೋಪಿ ಚೆನ್ನ ಕೊಟ್ಟ ಮಾಹಿತಿ ಆಧರಿಸಿ ಎಸ್​ಐಟಿ ಅಧಿಕಾರಿಗಳು ಆತನಿಗೆ ಆಶ್ರಯ ಕೊಟ್ಟ ಮಹೇಶ್​​ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸ್ತಿದ್ದಾರೆ. 

ಚೆನ್ನನಿಗೆ ಆಶ್ರಯ ಕೊಟ್ಟವರ ಮನೆ ಶೋಧಕ್ಕೆ ಎಸ್​ಐಟಿ ಅಧಿಕಾರಿಗಳು ಈಗಾಗಲೇ ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದಿದ್ದರು. ಅಂತೆಯೇ ಮನೆಯಲ್ಲಿ ಮೊಬೈಲ್,ಕ್ಯಾಮರಾ, ಬಟ್ಟೆ ಸೇರಿದಂತೆ ಚಿನ್ನಯ್ಯನಿಗೆ ಸೇರಿದ ವಸ್ತುಗಳನ್ನ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ:ಫುಡ್, ಟೆಕ್ಸ್ ಟೈಲ್ಸ್, ಸಿಮೆಂಟ್ ಮೇಲಿನ ಜಿಎಸ್‌ಟಿ ಇಳಿಕೆ ನಿಶ್ಚಿತ, ಎಸಿ, ಟಿವಿ ಬೆಲೆ ಕೂಡ ಇಳಿಕೆ ಗ್ಯಾರಂಟಿ

ಎಸ್​ಐಟಿ ಅಧಿಕಾರಿಗಳು ಚೆನ್ನನಿಗೆ ಸೇರಿದ ಒಂದು Andriod ಮೊಬೈಲ್​ನನ್ನು ವಶಕ್ಕೆ ಪಡೆದಿದ್ದಾರೆ. ದೂರುದಾರ ಚೆನ್ನನನ್ನು ಇರಿಸಲಾಗಿದ್ದ ರೂಮ್​ನಲ್ಲಿ SIT ಶೋಧ ನಡೆಸಿದ್ದು, ಚೆನ್ನನ ವಸ್ತುಗಳನ್ನು SIT ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. SIT ಅಧಿಕಾರಿಗಳು ಮಹೇಶ್ ಶೆಟ್ಡಿ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಕೂಡಾ ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಮಹೇಶ್​ ಶೆಟ್ಟಿ ಇಲ್ಲ ಎನ್ನಲಾಗ್ತಿದ್ದು ಮನೆಯಲ್ಲಿ ಪತ್ನಿ ಮತ್ತು ಪುತ್ರಿ ಮಾತ್ರ ಇರುವ ಮಾಹಿತಿ ಲಭ್ಯವಾಗಿದೆ. 

ಈ ವೇಳೆ ಎಸ್​ಐಟಿ ಅಧಿಕಾರಿಗಳು ಚೆನ್ನನ ಕುರಿತ ತಿಮರೋಡಿ ಮನೆಯವರನ್ನೂ ವಿಚಾರಣೆ ನಡೆಸಿದ್ದಾರೆ. ಎಷ್ಟು ದಿನಗಳ ಮೊದಲು ಚಿನ್ನಯ್ಯ ನಿಮ್ಮ ಮನೆಗೆ ಬಂದಿದ್ದ? ಚಿನ್ನಯ್ಯನ ಜೊತೆಯಲ್ಲಿ ಇನ್ನೂ ಯಾಱರು ಮನೆಗೆ ಬರ್ತಿದ್ರು? ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. 

ಇದನ್ನೂ ಓದಿ: KL ರಾಹುಲ್, ಪ್ರಸಿದ್ಧ್​ ಕೃಷ್ಣ, ಸಿರಾಜ್​​ಗೆ 2 ತಿಂಗಳು ಸುದೀರ್ಘ ವಿಶ್ರಾಂತಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chenna Dharmasthala Dharmasthala case dharmasthala
Advertisment