ಮಾಸ್ಕ್​ ಮ್ಯಾನ್ ಮಾಸ್ಕ್​ ಬಿಚ್ಚಿಟ್ಟು ಆನೆ ಮಾವುತ ಪ್ರಕರಣದ ಬಗ್ಗೆ ಹೇಳಿದ್ದೇನು..?

ಎಸ್​ಐಟಿ ಅಧಿಕಾರಿಗಳ ಬಿಗಿ ಭದ್ರತೆಯಲ್ಲಿರುವ ಚಿನ್ನಯ್ಯನ ಮೇಲೆ 24 ಗಂಟೆಗೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇದರ ನಡುವೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಹೆಣೆದಿದ್ದ ಬುರುಡೆ ಗ್ಯಾಂಗ್​ನ ಕುತಂತ್ರಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ.

author-image
Ganesh Kerekuli
chinnayya statement
Advertisment

ಎಸ್​ಐಟಿ ಅಧಿಕಾರಿಗಳ ಬಿಗಿ ಭದ್ರತೆಯಲ್ಲಿರುವ ಚಿನ್ನಯ್ಯನ ಮೇಲೆ 24 ಗಂಟೆಗೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇದರ ನಡುವೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಹೆಣೆದಿದ್ದ ಬುರುಡೆ ಗ್ಯಾಂಗ್​ನ ಕುತಂತ್ರಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ.

ಕೋರ್ಟ್​ಗೆ ಬುರುಡೆಯೊಂದಿಗೆ ಹೋಗೋದಕ್ಕೂ ಮೊದಲು ಚಿನ್ನಯ್ಯ ಮಾಸ್ಕ್​ ಧರಿಸದೇ ನೀಡಿದ್ದ ಸಂದರ್ಶನದ ವಿಡಿಯೋ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿದೆ. ಚಿನ್ನಯ್ಯ ಪೊಲೀಸರಿಗೆ ನೀಡಿರುವ ದೂರಿಗೂ, ಸಂದರ್ಶನದಲ್ಲಿ ಕೊಟ್ಟಿರುವ ಹೇಳಿಕೆಗೂ ತಾಳೆಯೇ ಆಗ್ತಿಲ್ಲ. ಇದನ್ನ ನೋಡ್ತಿದ್ರೆ ಸುಳ್ಳಿನ ಮೇಲೆ ಸುಳ್ಳುಗಳನ್ನ ಹೇಳಿದ್ದಾನೆ ಎನ್ನಲಾಗ್ತಿದೆ. 

ಆನೆ ಮಾವುತ ಕೇಸ್​ ಬಗ್ಗೆ ಹೇಳಿದ್ದೇನು..? 

ವೈರಲ್ ಆಗಿರೋ ವಿಡಿಯೋದಲ್ಲಿ ಆನೆ ಮಾವುತನ ಬಗ್ಗೆ ಚಿನ್ನಯ್ಯ ಮಾತನ್ನಾಡಿದ್ದಾನೆ. ‘ಆನೆ ಮಾವುತನ ಬಗ್ಗೆ ಹೇಳಬೇಕು ಅಂದರೆ, ಅಲ್ಲಿದ್ದ ರಾಜೇಂದ್ರ ರೈ ಅನ್ನೋ ವ್ಯಕ್ತಿಗೆ ಆನೆ ಮಾವುತನ ತಂಗಿ ಮೇಲೆ ಕೆಟ್ಟ ದೃಷ್ಟಿ ಇತ್ತು. ಆತ ತೋಟದ ಸುಪ್ರವೈಸರ್​ ಆಗಿದ್ದ. ಆತ ಈಕೆಗಾಗಿ ಹೊಂಚು ಹಾಕಿಕೊಂಡೇ ಇದ್ದ. ಅವರ ಮನೆ ಕಡೆಗೆ ಹೋಗೋದು, ತೋಟದ ಕಡೆ ಸುತ್ತಾಡೋದು ಎಲ್ಲ ಮಾಡ್ತಿದ್ದ’. 

‘ನನ್ನ ಹತ್ತಿರ ಬಗ್ಗೆ ಮಾತನಾಡುವಾಗಲೂ ಸಹ ಆಕೆಯ ಮೇಲೆ ಇರುವ ಕೆಟ್ಟ ಭಾವನೆ ಬಗ್ಗೆ ಹೇಳಿದ್ದ. ಅಂತೆಯೇ ಅವತ್ತು ರಾತ್ರಿ ಆತನೇ ಮುಗಿಸಿದ್ದಾನೆ ಅನ್ನೋದನ್ನ ನನಗೆ ಕನ್ಫರ್ಮ್​ ಆಗಿದೆ. ಯಾಕೆಂದರೆ ಆತ ತುಂಬಾನೇ ಹೊಂಚು ಹಾಕುತ್ತಿದ್ದ’ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾನೆ. 

ಇದನ್ನೂ ಓದಿ:ಧರ್ಮಸ್ಥಳದಲ್ಲಿ ಬುರುಡೆ ಗ್ಯಾಂಗ್​ ಹೆಣೆದ ರಣತಂತ್ರಕ್ಕೆ ಸಿಕ್ಕಿದೆ ಮತ್ತೊಂದು ಸಾಕ್ಷಿ.. ಏನದು?

2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ನಡೆದಿದ್ದ ಆನೆ ಮಾವುತ ಹಾಗೂ ಅವರ ಸಹೋದರಿ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ವಿಶೇಷ ತನಿಖಾ ದಳಕ್ಕೆ (SIT)ಗೆ ದೂರು ಸಲ್ಲಿಕೆ ಆಗಿದೆ. ಆನೆ ಮಾವುತನಾರಾಯಣ ಮತ್ತು ಅವರ ಸಹೋದರಿ ಯಮುನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಆಗ್ರಹಿಸಿ ಅವರ ಮಕ್ಕಳಾದ ಗಣೇಶ್ ಮತ್ತು ಭಾರತಿ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಆಗಸ್ಟ್ 18ರಂದು ದೂರು ನೀಡಿದ್ದಾರೆ. ಅದರ ತನಿಖೆಯನ್ನೂ ಎಸ್​ಐಟಿ ನಡೆಸ್ತಿದೆ.

ಇದನ್ನೂ ಓದಿ: ಮೊದಲ ತಲೆ ಬುರುಡೆಯನ್ನು ತಂದಿದ್ದು ಎಲ್ಲಿಂದ ಎಂಬುದು ಬಹಿರಂಗ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case
Advertisment