ದರ್ಶನ್​ಗೆ ಮತ್ತೆ ಟೆನ್ಷನ್.. ಇವತ್ತು ಕೋರ್ಟ್​ನಲ್ಲಿ ವಾದ-ಪ್ರತಿವಾದ ಹೇಗಿತ್ತು?

ದರ್ಶನ್​​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ವಿಚಾರ ಸದ್ಯ ಕುತೂಹಲ ಮೂಡಿಸಿದೆ. 64ನೇ ಸೆಷನ್​ ಕೋರ್ಟ್​ನಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್​ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೀತು. ಆದ್ರೆ ವಿಚಾರಣೆ ಮುಂದೂಡಿಕೆ ಆಗಿರುವ ಕಾರಣ, ನಾಳೆ ಸಂಜೆವರೆಗೂ ಪರಪ್ಪನ ಅಗ್ರಹಾರದಲ್ಲೇ ದಾಸ ವಾಸ್ತವ್ಯ ಮಾಡಲಿದ್ದಾರೆ.

author-image
Ganesh Kerekuli
Darshan case (1)
Advertisment

ನಟ ದರ್ಶನ್​​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ವಿಚಾರ ಸದ್ಯ ಕುತೂಹಲ ಮೂಡಿಸಿದೆ. ಇವತ್ತು 64ನೇ ಸೆಷನ್​ ಕೋರ್ಟ್​ನಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್​ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೀತು. ಆದ್ರೆ ವಿಚಾರಣೆ ಮುಂದೂಡಿಕೆ ಆಗಿರುವ ಕಾರಣ, ನಾಳೆ ಸಂಜೆವರೆಗೂ ಪರಪ್ಪನ ಅಗ್ರಹಾರದಲ್ಲೇ ದಾಸ ವಾಸ್ತವ್ಯ ಮಾಡಲಿದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್​ ವಿಚಾರದಲ್ಲಿ ದರ್ಶನ್​ಗೆ ಹೆಚ್ಚಿದ ಟೆನ್ಷನ್​

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದ್ರೆ ದರ್ಶನ್​ನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ 64ನೇ ಸೆಷನ್​ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ಇವತ್ತು ನಟ ದರ್ಶನ್​ ಬಳ್ಳಾರಿ ಶಿಫ್ಟ್​ ವಿಚಾರವಾಗಿ ವಾದ- ಪ್ರತಿವಾದ ನಡೆದಿದ್ದು, ಪರಪ್ಪನ ಅಗ್ರಹಾರದ ಪಂಜರದಲ್ಲಿರುವ ದಾಸನಿಗೆ ಟೆನ್ಷನ್​ ಹೆಚ್ಚಾಗಿದೆ.
ಎಸ್​ಪಿಪಿ ಪ್ರಸನ್ನ ಕುಮಾರ್​ ವಾದ ಮಂಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ರು. 

ಪ್ರಸನ್ನ ಕುಮಾರ್ ವಾದ

 ಸುಪ್ರೀಂ ಕೋರ್ಟ್​ ಜಾಮೀನು ರದ್ದು ಮಾಡುವಾಗ ಆರೋಪಿಯೂ ಪ್ರಭಾವಿ. ಈ ಹಿಂದೆ ಜೈಲಿನ ರೂಲ್ಸ್ ಉಲ್ಲಂಘನೆ ಮಾಡಿರೋದನ್ನ ಉಲ್ಲೇಖಿಸಿದೆ. ಜೊತೆಗೆ ಈ ಹಿಂದೆ ರಾಜಾತಿಥ್ಯ ಸಂಬಂಧ ಕೇಸ್ ದಾಖಲಾಗಿದೆ. ಆರೋಪಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸಮಾಜದಲ್ಲಿ ರೋಲ್ ಮಾಡಲ್ ಆಗಿರಬೇಕು. ಇಂತಹ ವ್ಯಕ್ತಿ ಕೊಲೆಯಂಥ ಗಂಭೀರ ಆರೋಪದಲ್ಲಿ ಭಾಗಿಯಾಗಿದ್ದಾನೆ. ಆರೋಪಿಗೆ ರಾಜಾತಿಥ್ಯ ನೀಡಿದರೆ ಜೈಲು ಅಧಿಕಾರಿಯನ್ನ ಅಮಾನತು ಮಾಡಲಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ಆಡಳಿತಾತ್ಮಕ ದೃಷ್ಟಿಯಿಂದ ಸ್ಥಳಾಂತರಕ್ಕೆ ಮನವಿ ಮಾಡಲಾಗಿದೆ. ಚಾರ್ಜ್ ಫ್ರೇಮ್ ಸೇರಿದಂತೆ ವಿಚಾರಣೆಯನ್ನ ವಿಸಿ ಮೂಲಕ ಮಾಡಬಹುದು. ಇದಕ್ಕೆ ಬಿಎನ್​ಎಸ್​ನಲ್ಲಿ ಅವಕಾಶವಿದೆ. ಜೈಲು ಮ್ಯಾನ್ಯೂಯಲ್ 507 ಪ್ರಕಾರ ವಿಸಿ ಮೂಲಕ ಭೇಟಿಗೆ ಅವಕಾಶ ಇದೆ. ಹೀಗಾಗಿ ಐದು ಆರೋಪಿಗಳನ್ನ ಈ ಹಿಂದಿನ ಜೈಲುಗಳಿಗೆ ಶಿಫ್ಟ್ ಮಾಡಲು ಆದೇಶ ನೀಡಿ ಮೈ ಲಾರ್ಡ್. 

ಇದನ್ನೂ ಓದಿ:ನೆಸ್ಲೆ ಕಂಪನಿ ಸಿಇಓಗೆ ಸೀಕ್ರೆಟ್ ಅಫೇರ್ ಕಾರಣದಿಂದ ಕಂಪನಿಯಿಂದಲೇ ಗೇಟ್ ಪಾಸ್‌!

actor darshan pavithra photos



ನಟ ದರ್ಶನ್ ಸೇರಿ ಐವರು ಬೇರೆ ಜೈಲಿಗೆ ಶಿಫ್ಟ್ ಕೋರಿ ಅರ್ಜಿ ಜೊತೆಗೆ ಜೈಲಿನಲ್ಲಿ ಕನಿಷ್ಠ ಸವಲತ್ತು ಕೋರಿ ದರ್ಶನ್ ಪರ ವಕೀಲರ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೂಡ ನಡೀತು. ಈ ವೇಳೆ ದರ್ಶನ್​ ಪರ ವಕೀಲರು ಜೈಲು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ರು.

ರಂಗನಾಥ್ ರೆಡ್ಡಿ, ಜಗದೀಶ್​ ಪರ ವಕೀಲರು

ಜೈಲು ಅಧಿಕಾರಿಗಳು ಕನಿಷ್ಠ ಸೌಲಭ್ಯ ನೀಡಬೇಕು. ಬಟ್ಟೆ, ಆಹಾರ, ಹಾಸಿಗೆ, ದಿಂಬುಗಳು ಸೇರಿ ಬೆಸಿಕ್ ಸೌಲಭ್ಯಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ಇದೆ. ಸುಪ್ರೀಂ ಕೋರ್ಟ್​ ಒಬ್ಬ ಆರೋಪಿಗೆ ಸೆಲೆಬ್ರಿಟಿ ಸ್ಟೇಟಸ್ ನೋಡಬಾರದು ಎಂದು ಹೇಳಿದೆ. ಆದ್ರೆ ಕನಿಷ್ಟ ಸೌಲಭ್ಯಗಳನ್ನು ನೀಡಬಾರದೆಂದು ಹೇಳಿಲ್ಲ. ಸ್ವೆಟರ್, ಬೆಡ್​ಶೀಟ್​ ಕೂಡ ಕೊಡಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನೆ ಮಾಡಿದರು. 
ನ್ಯಾಯಾಧೀಶರು: ನೀವು ಮನವಿಯನ್ನ ಸಲ್ಲಿಸಿದ್ದೀರಾ? 

ದರ್ಶನ್​ ಪರ ವಕೀಲ

ಮೌಖಿಕವಾಗಿ ಮನವಿ ಮಾಡಲಾಗಿದೆ. ಜೈಲಿನಲ್ಲಿ ಶೂ ಹಾಕಿಕೊಂಡು ಹೋದರೆ ಶೂ ಬಿಚ್ಚಿಸುತ್ತಾರೆ. ಊಟವನ್ನು ಬಿಸಾಕುವ ಕೆಲಸ ಮಾಡ್ತಾರೆ. ಕಾಂಡಿಮೆಂಟ್ಸ್‌​ ಹಣ ನೀಡಲು ಬಿಡ್ತಿಲ್ಲ.. ಕಾನೂನಿನ ಪ್ರಕಾರ ಏನು ಕೊಡಬೇಕು ಅದನ್ನ ಕೊಡಿ ಅಂತ ಕೇಳ್ತಿದ್ದೇವೆ. ಅದು ಕೊಡ್ಲಿಲ್ಲ ಅಂದ್ರೆ ನಾವು ಕಾನೂನು ಮುಖಾಂತರ ಪಡೆಯುತ್ತೇವೆ. ಮೈ ಲಾರ್ಡ್​.

ಇದನ್ನೂ ಓದಿ:ಪವಿತ್ರಗೌಡ ಜಾಮೀನು ಅರ್ಜಿ ವಜಾ! ಮುಂದಿನ ಆಯ್ಕೆ ಏನೇನು..?

Darshan in jail

ಎರಡೂ ಕಡೆಯ ವಾದ-ಪ್ರತಿವಾದವನ್ನು ಆಲಿಸಿದ 64ನೇ ಸೆಷನ್ಸ್ ಕೋರ್ಟ್ ವಿಚಾರಣೆಯನ್ನು ಮಧ್ಯಾಹ್ನ ಮುಂದೂಡಿಕೆ ಮಾಡ್ತು. ಮಧ್ಯಾಹ್ನ ವಿಚಾರಣೆ ಪುನಾರಂಭವಾದಾಗ. ದರ್ಶನ್​ ಪರ ವಕೀಲರು, ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಿದ್ರು.

ಸಂದೇಶ್ ಚೌಟ, ದರ್ಶನ್ ಪರ ವಕೀಲ

ಈ ಪ್ರಕರಣದಲ್ಲಿ 272 ಸಾಕ್ಷಿಗಳಿದ್ದಾವೆ. ಸುಪ್ರೀಂ ಕೋರ್ಟ್ ಕೂಡ ತ್ವರಿತಗತಿ ವಿಚಾರಣೆಗೆ ಸೂಚಿಸಿದೆ. ವಿಡಿಯೋ ಕಾನ್ಪರೆನ್ಸ್​ನಲ್ಲಿ ವಿಚಾರಣೆಗೆ ಹಾಜರಾಗುವುದು ಸೂಕ್ತ ಅಲ್ಲ. ತಮ್ಮ ವಕೀಲರಿಗೆ ಮಾತನಾಡುವ ಅಗತ್ಯ ಇರುತ್ತೆ. ಅದು ವಿಸಿ ಮೂಲಕ ಮಾಡುವುದು ಸಾಧ್ಯವಿಲ್ಲ. ದರ್ಶನ್​ರನ್ನು ಬಳ್ಳಾರಿಗೆ ಶಿಪ್ಟ್ ಮಾಡಲು ಯಾವುದೇ ಕಾರಣ ಇಲ್ಲ. ಬೆಂಗಳೂರಿನಿಂದ 310  ಕಿ.ಮೀ ದೂರ ಇದ್ದು, ಪ್ರತಿದಿನ ಬಂದು ಹೋಗಲು ಸಾಧ್ಯವಿಲ್ಲ. ಹೀಗಾಗಿ ಬಳ್ಳಾರಿಗೆ ಶಿಫ್ಟ್ ಮಾಡಬಾರದು ಮೈ ಲಾರ್ಡ್​.  ಎರಡೂ ಕಡೆಯ ವಾದ-ಪ್ರತಿವಾದವನ್ನು ಆಲಿಸಿದ 64ನೇ ಸೆಷನ್​ ಕೋರ್ಟ್​.. ವಿಚಾರಣೆಯನ್ನು ನಾಳೆ ಸಂಜೆ 4 ಗಂಟೆಗೆ ಮುಂದೂಡಿಕೆ ಮಾಡ್ತು. 

ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ನಟ ದರ್ಶನ್​ಗೆ ತಾತ್ಕಾಲಿಕ ರಿಲೀಫ್​ ನೀಡಿರುವ ಸೆಷನ್​ ಕೋರ್ಟ್​.. ಬೇಲ್​ ನಿರೀಕ್ಷೆಯಲ್ಲಿದ್ದ ಮೊದಲ ಆರೋಪಿ ಪವಿತ್ರಾಗೌಡಗೆ ಶಾಕ್​ ಕೊಟ್ಟಿದೆ. ಮಹಿಳೆ ಹಾಗೂ ಸಿಂಗಲ್ ಪೇರೆಂಟ್ ಆಗಿರುವುದರಿಂದ ಮಗಳ ಆರೈಕೆ ಮಾಡಬೇಕಿದೆ ಎಂಬ ಕಾರಣ ನೀಡಿ ಪವಿತ್ರಾ ಗೌಡ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪವಿತ್ರಾ ಗೌಡ ಅವರ ಮನವಿಯನ್ನ ಪರಿಗಣಿಸದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ದರ್ಶನ್​ ಆಪ್ತೆಗೆ ಜೈಲುವಾಸ ಮುಂದುವರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Darshan in jail Actor Darshan Pavitra Gowda Pavitra Gowda tattoo
Advertisment