/newsfirstlive-kannada/media/media_files/2025/09/25/davanagere-news-2025-09-25-08-03-40.jpg)
ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಹಿಂದೂ ಸಮುದಾಯದ ಮನೆಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಹಳೆ ದಾವಣಗೆರೆಯಲ್ಲಿ ಅನ್ಯಕೋಮಿನ ಫ್ಲೆಕ್ಸ್ ಬೋರ್ಡ್ ಹಾಕಿದ್ದ ವಿಚಾರವಾಗಿ ಗಲಾಟೆ ನಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ಪೊಲೀಸ್ ಟೀಮ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮನೆಗೆ ಬಾಗಿಲು ಹಾಕಿ ಮಲಗಿದ್ದವರ ಮೇಲೆ ಕಲ್ಲು ತೂರಿದ ಘಟನೆ ನಡೆದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಕಾರ್ಲ್ ಮಾರ್ಕ್ಸ್ ರೋಡ್ ಫಸ್ಟ್ ಮೇನ್ ಫಸ್ಟ್ ಕ್ರಾಸ್‌ನ ಕಸ್ತೂರಮ್ಮ ಮತ್ತು ಚಿತ್ರವೇಲು ಅವರ ಮನೆಗಳ ಮೇಲೆ ಕಲ್ಲು ತೂರಲಾಗಿದೆ.
ಇದನ್ನೂ ಓದಿ:ತುಳಸಿ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಗಳು ಇವೆ?
ಹಲ್ಲೆ ಆರೋಪ
ಇನ್ನು ಕೆಲವರ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಆರೋಪ ಕೂಡ ಕೇಳಿಬಂದಿದೆ. ಇದರಿಂದ ಮೂವರು ಗಾಯಗೊಂಡಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರ ಎದುರೆ ಹಲ್ಲೆ ನಡೆದರೂ ಅವರು ಸುಮ್ಮನಿದ್ದರು. ನಮಗೆ ಅಲ್ಲಿ ಬದುಕಲು ಭಯವಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಮನೆಗಳನ್ನ ಟಾರ್ಗೆಟ್ ಮಾಡಿ ಕಲ್ಲು ತೂರಿದ್ದಕ್ಕೆ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲ್ಯಾಂಡ್ ಜಿಹಾದ್​ಗಾಗಿ ಹಿಂದೂಗಳ ಮನೆ ಟಾರ್ಗೆಟ್ ಮಾಡಿ ಕಲ್ಲು ತೂರಿದ್ದಾರೆ. ತುಷ್ಟಿಕರಣ ರಾಜಕಾರಣದಿಂದ ಈ ರೀತಿಯ ಘಟನೆಗಳು ಆಗ್ತಿವೆ. ಕಲ್ಲು ತೂರಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ನಂತರ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿ.. ಫ್ಲೆಕ್ಸ್ ಕಟ್ಟಿದ ವಿಚಾರಕ್ಕೆ ಎರಡು ಕೋಮಿನವರ ಮಧ್ಯ ವಾಗ್ವಾದ ಆಗಿದೆ. ನಮ್ಮ ಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ, ಪರಿಸ್ಥಿತಿ ಶಾಂತವಾಗಿದೆ. ಕಲ್ಲು ತೂರಿದ ಘಟನೆ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ನಾಳೆ SL ಭೈರಪ್ಪ ಅವರ ಅಂತ್ಯಕ್ರಿಯೆ.. ಅಂತಿಮ ದರ್ಶನಕ್ಕೆ ವ್ಯವಸ್ಥೆ ಹೇಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.