/newsfirstlive-kannada/media/media_files/2026/02/05/davaanagere-2026-02-05-11-44-02.jpg)
ದಾವಣಗೆರೆ: ಭೌತಿಕ ಸುಖ, ಐಷಾರಾಮಿ ಜೀವನ ಮತ್ತು ಉಜ್ವಲ ವೃತ್ತಿಜೀವನವನ್ನು ಬದಿಗೊತ್ತಿ ಅಧ್ಯಾತ್ಮದ ಹಾದಿ ಹಿಡಿಯುವವರ ಸಾಲಿಗೆ ಈಗ ದಾವಣಗೆರೆಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರು ಸೇರ್ಪಡೆಯಾಗಿದ್ದಾರೆ. ದಾವಣಗೆರೆಯ ಪ್ರತಿಷ್ಠಿತ ಬಿಐಇಟಿ (BIET) ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಂಚಲ್ ಕುಮಾರಿ ಜೈನ ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ.
/filters:format(webp)/newsfirstlive-kannada/media/media_files/2026/02/05/davaanagere-1-2026-02-05-11-44-15.jpg)
ಯಾರು ಈ ಆಂಚಲ್ ಕುಮಾರಿ?
ದಾವಣಗೆರೆಯ ಚೌಕಿಪೇಟೆಯ ನಿವಾಸಿಗಳಾದ ಜೈನ ಸಮುದಾಯದ ಮುಕೇಶ್ ಮತ್ತು ಸುನಿತಾ ಬಾಯಿ ದಂಪತಿಯ ಮೂರನೇ ಪುತ್ರಿ ಆಂಚಲ್ ಕುಮಾರಿ (26). ಮುಕೇಶ್ ಅವರಿಗೆ ಒಟ್ಟು ಮೂವರು ಪುತ್ರಿಯರಿದ್ದು, ಮೊದಲ ಇಬ್ಬರು ಪುತ್ರಿಯರಿಗೆ ಮದುವೆಯಾಗಿದೆ. ಮೂರನೇ ಪುತ್ರಿ ಆಂಚಲ್ ಓದಿನಲ್ಲಿ ಬಹಳ ಮುಂದಿದ್ದರು. ಬಿಐಇಟಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಟಾಪರ್ ವಿದ್ಯಾರ್ಥಿನಿಯಾಗಿದ್ದ ಆಂಚಲ್‌ಗೆ ಕೈತುಂಬಾ ಸಂಬಳ ಬರುವ ಉದ್ಯೋಗ ಹಿಡಿಯುವ ಎಲ್ಲಾ ಅವಕಾಶಗಳಿದ್ದವು.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್: ಟಿಕೆಟ್ ರೇಟ್ ಏರಿಕೆ! ಹೊಸ ದರ ಪಟ್ಟಿ ಇಲ್ಲಿದೆ
/filters:format(webp)/newsfirstlive-kannada/media/media_files/2026/02/05/davaanagere-2-2026-02-05-11-44-27.jpg)
ಸನ್ಯಾಸತ್ವದ ಕಡೆಗೆ ಒಲವು ಮೂಡಿದ್ದು ಹೇಗೆ?
ಕಾಲೇಜು ದಿನಗಳಲ್ಲಿಯೇ ಅಧ್ಯಾತ್ಮದ ಕಡೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಆಂಚಲ್ ಅವರಿಗೆ ಸನ್ಯಾಸಿಗಳ ಜೀವನ ಶೈಲಿ ಬಹಳ ಪ್ರಭಾವ ಬೀರಿತ್ತು. ಜೈನ ಸನ್ಯಾಸಿಗಳ ಮುಖದಲ್ಲಿ ಕಾಣುವ ನಗು ಮತ್ತು ಅವರು ಅನುಭವಿಸುವ ಆಂತರಿಕ ಶಾಂತಿಯೇ ಇವರ ನಿರ್ಧಾರಕ್ಕೆ ಮುಖ್ಯ ಕಾರಣ. "ಸಂಸಾರದ ಲೌಕಿಕ ಸುಖಕ್ಕಿಂತ ಸನ್ಯಾಸತ್ವದಲ್ಲಿ ಸಿಗುವ ಸುಖ ಮತ್ತು ನೆಮ್ಮದಿ ಶ್ರೇಷ್ಠವಾದುದು" ಎಂದು ನಂಬಿರುವ ಆಂಚಲ್, ಆಂತರಿಕ ಖುಷಿಗಾಗಿ ಈ ಕಠಿಣ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2026/02/05/davaanagere-4-2026-02-05-11-44-41.jpg)
ನಾಳೆ ಸೂರತ್‌ನಲ್ಲಿ ದೀಕ್ಷೆ
ತನ್ನ ಹೆತ್ತವರು, ಒಡಹುಟ್ಟಿದವರು ಹಾಗೂ ಕೋಟಿ ಕೋಟಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ತ್ಯಜಿಸಿರುವ ಆಂಚಲ್ ಕುಮಾರಿ, ನಾಳೆ (ಶುಕ್ರವಾರ) ಗುಜರಾತ್‌ನ ಸೂರತ್‌ನಲ್ಲಿ ಅಧಿಕೃತವಾಗಿ ಸನ್ಯಾಸತ್ವದ ದೀಕ್ಷೆ ಪಡೆಯಲಿದ್ದಾರೆ. ಜೈನ ಧರ್ಮದ ಪ್ರಮುಖ ಗುರುಗಳಾದ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರಿಂದ ಆಂಚಲ್ ದೀಕ್ಷೆ ಸ್ವೀಕರಿಸಲಿದ್ದಾರೆ.
/filters:format(webp)/newsfirstlive-kannada/media/media_files/2026/02/05/davaanagere-5-2026-02-05-11-44-54.jpg)
ಇಂಜಿನಿಯರಿಂಗ್ ಟಾಪರ್ ಆಗಿದ್ದ ಯುವತಿಯೊಬ್ಬರು ಲೌಕಿಕ ಜಗತ್ತನ್ನು ತೊರೆದು ಅಧ್ಯಾತ್ಮದ ಕಡೆಗೆ ಮುಖ ಮಾಡಿರುವುದು ದಾವಣಗೆರೆಯಲ್ಲಿ ಭಾರಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಸನ್ಯಾಸತ್ವ ಸ್ವೀಕರಿಸುತ್ತಿರುವ ಆಂಚಲ್ ಅವರ ನಿರ್ಧಾರಕ್ಕೆ ಜೈನ ಸಮುದಾಯ ಗೌರವ ಸೂಚಿಸಿದೆ.
ಇದನ್ನೂ ಓದಿ: ಪತ್ನಿಯನ್ನ ಕೂಡಿಹಾಕಿ ಪತಿ ಪರಾರಿ ಆರೋಪಕ್ಕೆ ಟ್ವಿಸ್ಟ್​.. ಆರೋಪಿ ಗಂಡ ಹೇಳಿದ್ದೇ ಬೇರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us