ವಾಣಿಜ್ಯ ನಗರಿಯಲ್ಲಿ ಸಾಂಸ್ಕೃತಿಕ ರಸದೌತಣ; ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅದ್ದೂರಿ ತೆರೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ "ಅಂತರಾಷ್ಟ್ರೀಯ ಗಾಳಿಪಟ ಉತ್ಸವ" ಮತ್ತು ಸಂಸದರ ಕ್ರೀಡಾ ಮಹೋತ್ಸವ ರಜಾದಿನ ಭಾನುವಾರ ಸಂಗೀತ ರಸದೌತಣ, ಸಹಸ್ರಾರು ಪ್ರೇಕ್ಷಕರ ಕರತಾಡನ ಸಂಭ್ರಮದೊಂದಿಗೆ ಅದ್ದೂರಿ ತೆರೆ ಕಂಡಿತು.

author-image
Ganesh Kerekuli
kite fesivals (1)
Advertisment

ಹುಬ್ಬಳ್ಳಿ:  ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ "ಅಂತರಾಷ್ಟ್ರೀಯ ಗಾಳಿಪಟ ಉತ್ಸವ" ಮತ್ತು ಸಂಸದರ ಕ್ರೀಡಾ ಮಹೋತ್ಸವ ರಜಾದಿನ ಭಾನುವಾರ ಸಂಗೀತ ರಸದೌತಣ, ಸಹಸ್ರಾರು ಪ್ರೇಕ್ಷಕರ ಕರತಾಡನ ಸಂಭ್ರಮದೊಂದಿಗೆ ಅದ್ದೂರಿ ತೆರೆ ಕಂಡಿತು.

ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕ ನಕುಲ್ ಅಭ್ಯಂಕರ್, 'ಮೆಲೋಡಿ ಕಿಂಗ್' ಎಂದೇ ಖ್ಯಾತರಾದ ಬಹುಭಾಷಾ ಗಾಯಕ  ಸೋನು ನಿಗಮ್ ಸುಮಧುರ ಕಂಠಸಿರಿಯ ಲಹರಿ ನೆರೆದಿದ್ದ ಸಂಗೀತಾಭಿಮಾನಿಗಳನ್ನು ಖುಷಿಯಲ್ಲಿ ಕುಣಿಸಿತು.

ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿರುವ, ಜೀ ಕನ್ನಡ `ಸರಿಗಮಪ' ಖ್ಯಾತಿಯ ಪಂಜಾಬ್ ಮೂಲದ ಗಾಯಕ ಜಸ್ಕರನ್ ಸಿಂಗ್, ಪ್ರಸಿದ್ದ ಗಾಯಕಿ ದಿವ್ಯಾ ರಾಮಚಂದ್ರ ತಂಡ ಹರಿಸಿದ ಸಂಗೀತ ಸುಧೆ ಪ್ರೇಕ್ಷಕರಿಗೆ ಸಂಗೀತ ರಸದೌತಣ ಉಣಬಡಿಸಿತು.

kite fesivals

"ಕಾಣದಂತೆ ಮಾಯವಾದನೋ... ನಮ್ಮ ಶಿವ...ಕೈಲಾಸ ಸೇರಿಕೊಂಡನೋ." ಹಾಡಿಗೆ ಕಂಠ ನೀಡಿದ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ತುಸು ಹೊತ್ತು ಗಾಯಕರಾಗಿ ಪ್ರೇಕ್ಷಕರ ರಂಜಿಸಿದರು.

"ಏಳೇಳು ಬೆಟ್ಟ ಹತ್ಕೊಂಡು ಬಂದ.. ಗಿಲ್ಲಕ್ಕೋ.. ಶಿವ ಗಿಲ್ಲಕ್ಕೋ...", 'ಆಕಾಶ ಇಷ್ಟೇ ಯಾಕಿದೆಯೋ....ಈ ಭೂಮಿ ಕಷ್ಟ ಆಗಿದೆಯೋ...ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ...ಗಾಳಿಪಟ...ಗಾಳಿಪಟ..." ಹೀಗೆ ಮನಸಿಗೆ ಮುದ ನೀಡುವ ಹಾಡುಗಳಿಗೆ ಸಚಿವ ಜೋಶಿ ಅವರಿಂದಲೂ ಕಂಠ ಸೇರಿಸಿ ಗಾಯಕರು ರಂಜಿಸಿದರು.

ಹುಬ್ಬಳ್ಳಿಯ ಆಕ್ಸ್ ಫರ್ಡ್ ಕಾಲೇಜ್ ಬಳಿಯ ಮೈದಾನದಲ್ಲಿ ಎರಡೂ ದಿನ ಗಾಳಿಪಟ ಉತ್ಸವ ಮತ್ತು ಕ್ರೀಡಾ ಮಹೋತ್ಸವದ ಕಲರವ ಸ್ಮಾರ್ಟ್ ಸಿಟಿಗೆ ಹೊಸ ಮೆರುಗು ತಂದಿತು. ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಅಪ್ಪಟ ಉತ್ತರ ಕರ್ನಾಟಕದ ಬೆಡಗಿ, ಬಾಲ ಗಾಯಕಿ, ಮಹನ್ಯ ಪಾಟೀಲ ಗಾಯನ ಪ್ರೇಕ್ಷಕರ ಸಂತಸ, ಶಿಳ್ಳೆಗಳಿಗೆ ಪಾರವೇ ಇರಲಿಲ್ಲ. ನೆರೆದಿದ್ದ ಸಾವಿರಾರು ಜನರ ಮನರಂಜಿಸಿತು.

ಇದನ್ನೂ ಓದಿ: ರವೀಂದ್ರ ಭಟ್ಕಳ್ vs ಜೆಪಿ ಪಾಟೀಲ್.. ವೀಕ್ಷಕರ ಮನಗೆದ್ದ ಭಾರ್ಗವಿ L.L.B ಧಾರಾವಾಹಿ..!

kite fesivals (2)

ವಾಣಿಜ್ಯ ನಗರಿಯಲ್ಲಿ ಸತತ ಏಳನೇ ಬಾರಿ ಸಚಿವ ಪ್ರಲ್ಹಾದ ಜೋಶಿ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ’ಅಂತರಾಷ್ಟ್ರೀಯ ಗಾಳಿಪಟ ಉತ್ಸವ-2026' ಕ್ಕೆ ಈ ಬಾರಿ ಹಿಂದೆಂದಿಗಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಆಗಸದಲ್ಲಿ ಕಲರ್ ಕಲರ್  ಗಾಳಿಪಟಗಳನ್ನು ಗಾರಿಬಿಟ್ಟು ಸಹಸ್ರಾರು ಜನರ ಕಣ್ಣರಳಿಸಿದರು. ಈ ಅಂತರಾಷ್ಟಿಯ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶಗಳ ಹಾಗೂ ದೇಶದ ಪ್ರಸಿದ್ದ ಕೈಟ್ ಫ್ಲೆಯರ್ಸ್ ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬರೂ ರಂಗು ರಂಗಿನ, ಗೊಂಬೆ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸಿ ಎಲ್ಲರ ಮನ ಸೆಳೆದರು.

ಗುಜರಾತ್, ಗೋವಾ ಅಹಮಾದಾಬಾದ್ ಗೆ ಸೀಮಿತವಾಗಿದ್ದ ಗಾಳಿಪಟ ಉತ್ಸವ ಉತ್ತರ ಕರ್ನಾಟಕದ ಹೆಬ್ಬಾಗಿಲೂ ಹುಬ್ಬಳ್ಳಿಗೂ ಪರಿಚಯಿಸಿದ ರೂವಾರಿ, ಸಚಿವ ಪ್ರಲ್ಹಾದ ಜೋಶಿ ಅವರೂ ಕುಟುಂಬ ಸಮೇತರಾಗಿ ಮುಗಿಲೆತ್ತರದಲ್ಲಿ ಗಾಳಿಪಟ ಹಾರಿಸಿ ಖುಷಿಪಟ್ಟರು. ಗಾಳಿಪಟ ಉತ್ಸವದ ಮೂಲಕ ಹುಬ್ಬಳ್ಳಿ ಮಹಾನಗರವನ್ನು ಇಡೀ ದೇಶಕ್ಕೆ ಪರಿಚಯಿಸುವ ಕಾರ್ಯ ಮಾಡಿದ ಜೋಶಿ ಅವರ ಕಾರ್ಯಕ್ಕೆ ಇಡೀ ಶಹರವೇ ಇದೀಗ ಕರತಾಡನದ ಗೈಯುತ್ತಿದೆ.

kite fesivals (3)

 ಸಂಸದ ಕ್ರೀಡಾ ಮಹೋತ್ಸವ ಪ್ರಯುಕ್ತ ದೇಶಿ ಕ್ರೀಡೆಗಳಾದ ಯೋಗ, ಮಲ್ಲಕಂಬ, ಗೋಲಿ ಆಟ, ಲಗೋರಿ, ಹಗ್ಗ ಜಗ್ಗಾಟ, ಚಿನ್ನಿ-ದಾಂಡು ಸ್ಪರ್ಧೆ ಸಹ ಕ್ರೀಡಾಳುಗಳ ಮನಸೆಳೆಯಿತು. ಸಚಿವರೂ ಎರಡೂ ದಿನ ಪ್ರತಿ ಆಟದಲ್ಲಿ ತೊಡಗಿ ಪ್ರೇರಣೆ ನೀಡಿದ್ದು ಕ್ರೀಡಾ ಮಹೋತ್ಸವಕ್ಕೆ ವಿಶೇಷ ಮೆರುಗು ತಂದಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಸಂಖ್ಯಾತ ಸಾರ್ವಜನಿಕರು  ಕ್ರೀಡಾ ಮಹೋತ್ಸವ ಹಾಗೂ ಗಾಳಿಪಟ ಉತ್ಸವಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ:2026ರ ಮೊದಲ ರಕ್ತಚಂದ್ರ ಗ್ರಹಣ: ಭಾರತದಲ್ಲಿ ಗೋಚರಿಸಲಿದೆಯೇ ಈ ಅದ್ಭುತ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

kite string
Advertisment