Advertisment

ಲೋಕಾ ಇನ್ಸ್‌ಪೆಕ್ಟರ್ ಸಜೀವ ದಹನ ಕೇಸ್​.. ಕುಟುಂಬಸ್ಥರ ನೋಡಲು ಬರ್ತಿದ್ದ ಸಾಲಿಮಠ

ರಸ್ತೆ ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಸಾವಿನ ಘಟನೆ ಮಾಸುವೇ ಧಾರವಾಡದಲ್ಲಿ ಮತ್ತೊಂದು ದುರಂತ ನಡೆದು ಹೋಗಿದೆ. ಕುಟುಂಬದವರನ್ನ ನೋಡ್ಬೇಕು ಅಂತಾ ಹೊರಟಿದ್ದ ಇನ್ಸ್‌ಪೆಕ್ಟರ್‌ ಬೆಂಕಿಯಾಟಕ್ಕೆ ಅರ್ಧ ದಾರಿಯಲ್ಲೇ ಉಸಿರು ಚೆಲ್ಲಿದ್ದಾರೆ.

author-image
Ganesh Kerekuli
inspector salimatha
Advertisment

ರಸ್ತೆ ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಸಾವಿನ ಘಟನೆ ಮಾಸುವೇ ಧಾರವಾಡದಲ್ಲಿ ಮತ್ತೊಂದು ದುರಂತ ನಡೆದು ಹೋಗಿದೆ. ಕುಟುಂಬದವರನ್ನ ನೋಡ್ಬೇಕು ಅಂತಾ ಹೊರಟಿದ್ದ ಇನ್ಸ್‌ಪೆಕ್ಟರ್‌ ಬೆಂಕಿಯಾಟಕ್ಕೆ ಅರ್ಧ ದಾರಿಯಲ್ಲೇ ಉಸಿರು ಚೆಲ್ಲಿದ್ದಾರೆ.

Advertisment

inspector salimatha (3)

ಬೆಂಕಿಯ ಕೆನ್ನಾಲಿಗೆಗೆ ಇನ್ಸ್‌ಪೆಕ್ಟರ್ ಸಜೀವ ದಹನ

ನಿಜಕ್ಕೂ ಈ ದೃಶ್ಯ ಭೀಕರವಾಗಿದೆ.. ಬೆಂಕಿ ಆರ್ಭಟ ಅದೇಗ್ ಇದೆ ಅಂದ್ರೆ ಜನರು ಹತ್ರ ಹೋಗಿ ಕಾರಿಯೊಳಗೆ ಸಿಲುಕಿದ್ದ ವ್ಯಕ್ತಿನಾ ಉಳಿಸೋಕೆ ಆಗ್ಲೇ ಇಲ್ಲ.. ಆಗ್ನಿಶಾಮಕ ಸಿಬ್ಬಂದಿ.. ಆ್ಯಂಬುಲೆನ್ಸ್‌ ಫೋನ್ ಮಾಡಿ ಬೆಂಕಿ ಬಿದ್ದಿದೆ ಬನ್ರಿ ಅನ್ನೋದ್ರೊಳಗೆ ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾಗ್ಬಿಟ್ಟಿದ್ದಾರೆ. ಇಂತಹ ದುರಂತ ನಡೆದಿರೋದು ಧಾರವಾಡ ಜಿಲ್ಲೆಯಲ್ಲಿ.

ಇದನ್ನೂ ಓದಿ: BBK: ಕಿಚ್ಚು ಹಚ್ಚಿಸಿದ ‘ತೆವಲು’ ಪದ, ಮನೆಗೆ ಹೋಗೋದ್ಯಾರು? ಇವತ್ತು ಸರಿ-ತಪ್ಪುಗಳ ಬಗ್ಗೆ ಕಿಚ್ಚನ ಲೆಕ್ಕಾಚಾರ..!

inspector salimatha (2)

ಬೆಂಕಿಗೆ ಸಿಲುಕಿ ಇನ್ಸ್‌ಪೆಕ್ಟರ್ ಸಾಲಿಮಠ ಸಜೀವ ದಹನ

ಕಾರೊಂದು ಡಿವೈಡರ್​ಗೆ ಡಿಕ್ಕಿಯಾಗಿ ಬಳಿಕ ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನವಾಗಿದ್ದಾರೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಆಗಿದ್ದ ಪಂಚಾಕ್ಷರಿ ಸಾಲಿಮಠ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. 

Advertisment

ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ ನಾಲ್ವರು ಆತ್ಮಹತ್ಯೆ.. ಇದು ಸಾವಿನ ‘ಸಾನಿಧ್ಯ’ ಮನೆಯ ದುರಂತ ಕಥೆ..!

inspector salimatha (1)

PS ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡ್ತಿದ್ರು. ಗದಗಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುಲು ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ. ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಕಾರಿನ ಡೋರ್‌ ಲಾಕ್ ತೆಗೆದು ಹೊರಬರಲಾರದೇ ಇನ್ಸ್‌ಪೆಕ್ಟರ್‌ ಕಾರಿನೊಳಗೆ ಬೆಂದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಂಡು ನೋಡುತ್ತಿದ್ದಂತೆಯೇ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ರು. ಆದ್ರೆ ಬೆಂಕಿ ನಂದಿಸುವಷ್ಟರಲ್ಲಿ ಇನ್ಸ್​ಪೆಕ್ಟರ್​ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.

ಕುಟುಂಬವನ್ನ ಭೇಟಿಯಾಗ್ಬೇಕು ಅಂತಾ ಖುಷಿ ಖುಷಿ ಪಂಚಾಕ್ಷರಿ ಸಾಲಿಮಠ ಹೊರಟಿದ್ರೆ.. ವಿಧಿ ಅವರನ್ನ ಅರ್ಧ ಹಾದಿಯಲ್ಲೇ ಬಲಿಪಡೆದಿದ್ದು ನಿಜಕ್ಕೂ ದುರಂತ. 

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

panchakshari salimath
Advertisment
Advertisment
Advertisment