/newsfirstlive-kannada/media/media_files/2025/12/06/shimogga-mother-and-son-1-2025-12-06-10-26-52.jpg)
ಇದು ಸಾವಿನ ಸಾನಿಧ್ಯದ ಮನೆಯ ದುರಂತ ಕಥೆ. ಆ ಮನೆಗೆ ಇರೋ ದೋಷವೋ ಅಥವಾ ದುರ್ಬಲ ಮನಸ್ಥಿತಿಯೋ ಸಾಲು ಸಾಲು ಆತ್ಮಹತ್ಯೆ ನಡೆದುಹೋಗಿದೆ. ಒಂದೇ ಮನೆಯಲ್ಲಿ ಈವರೆಗೂ ನಾಲ್ವರು ಈ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆಗಳು ನಡೆದಿರೋ ಮನೆಗೆ ಭಯದ ಕಂಟಕ ಅಂಟಿದೆ. ಸ್ಥಳೀಯರಲ್ಲಿ ಆತಂಕದ ಛಾಯೆ ಆವರಿಸಿದೆ.
ಸಾನಿಧ್ಯ.. ಐಷಾರಾಮಿ ಬಂಗಲೆ.. ಇದರಲ್ಲಿ ಇದ್ದೋರು ಹಣವಂತರು.. ಅಧಿಕಾರವಂತರು. ಆದ್ರೆ, ಇವರ ಹಣೆಬರಹದಲ್ಲಿ ಸಾವು ಹೀಗೆ ಬರುತ್ತೆ ಅಂತ ಊಹಿಸಿರಲಿಲ್ಲವೇನೋ? ತಮ್ಮ ಕೈಯ್ಯಾರೆ ತಾವೇ ಪ್ರಾಣ ತೆಗೆದುಕೊಂಡಿದ್ದಾರೆ. ಈ ಸಾನಿಧ್ಯವೀಗ ಸಾವಿನ ಸಾನಿಧ್ಯವಾಗಿ ಕಳಂಕವನ್ನ ಹೊತ್ತಿದೆ.
ಇದನ್ನೂ ಓದಿ: BBK: ಕಿಚ್ಚು ಹಚ್ಚಿಸಿದ ‘ತೆವಲು’ ಪದ, ಮನೆಗೆ ಹೋಗೋದ್ಯಾರು? ಇವತ್ತು ಸರಿ-ತಪ್ಪುಗಳ ಬಗ್ಗೆ ಕಿಚ್ಚನ ಲೆಕ್ಕಾಚಾರ..!
/filters:format(webp)/newsfirstlive-kannada/media/media_files/2025/12/06/shimogga-mother-and-son-2025-12-06-10-31-53.jpg)
ಒಂದೂವರೆ ವರ್ಷದಲ್ಲಿ ನಾಲ್ವರು ಆತ್ಮಹತ್ಯೆ!
ಶಿವಮೊಗ್ಗದ ಅಶ್ವತ್ ನಗರದ ಸಾನಿಧ್ಯ ನಿವಾಸ.. ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಅವರ ಕುಟುಂಬಕ್ಕೆ ಸೇರಿದ ಭವ್ಯಬಂಗಲೆ.. ಆದ್ರೀಗ ಈ ಮನೆಯ ಬಗ್ಗೆಯೇ ಸುತ್ತ ಮುತ್ತಲ ಜನರಲ್ಲಿ ಭಯವನ್ನ ಹುಟ್ಟಿಸಿದೆ. ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಕುಟುಂಬದ ದುರಂತ ಕಥೆ ಸತ್ಯಕ್ಕೆ ನಿಲುಕದಾಗಿದೆ. ಇಡೀ ಕುಟುಂಬ ನೆಲೆಸಿದ್ದ ʼಸಾನಿಧ್ಯʼ ನಿವಾಸ ಸಾವಿನ ನಿವಾಸವಾಗಿಬಿಟ್ಟಿದೆ. ಇದುವರೆಗೂ ಈ ಮನೆಯಲ್ಲಿ ನಾಲ್ಕು ಸಾವಾಗಿದೆ. ಅದರಲ್ಲೂ ನಾಲ್ವರು ಆತ್ಮಹತ್ಯೆಗೆ ಶರಣಾಗಿರೋದು ಆತಂಕ ಮೂಡಿಸಿದೆ.
ಇದನ್ನೂ ಓದಿ:BBK: ಕಿಚ್ಚು ಹಚ್ಚಿಸಿದ ‘ತೆವಲು’ ಪದ, ಮನೆಗೆ ಹೋಗೋದ್ಯಾರು? ಇವತ್ತು ಸರಿ-ತಪ್ಪುಗಳ ಬಗ್ಗೆ ಕಿಚ್ಚನ ಲೆಕ್ಕಾಚಾರ..!
/filters:format(webp)/newsfirstlive-kannada/media/media_files/2025/12/06/shimogga-mother-and-son-2-2025-12-06-10-32-24.jpg)
ಮನೆಯಲ್ಲಿ ಮೊದಲು ಮನೆಯ ಯಜಮಾನ ಡಾ. ನಾಗರಾಜ್ ಹೊಮ್ಮರಡಿ ಆತ್ಮಹತ್ಯೆಗೆ ಶರಣಾಗಿದ್ರಂತೆ. ಇದಾದ ಬಳಿಕ ಕಳೆದ ಒಂದೂವರೆ ವರ್ಷಗಳ ಹಿಂದಷ್ಟೇ ಅವರ ಪುತ್ರ ಆಕಾಶ್ ಪತ್ನಿ ನವಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ ಮತ್ತು ಅವರ ಪುತ್ರ ಆಕಾಶ್ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಹಿಂದೆ ಈ ಮನೆಯ ಮೂಲ ಮಾಲೀಕರು ಎನ್ನಲಾದ ರಾಜಶೇಖರ್ ಎನ್ನುವವರು ಕೂಡ ಮನೆ ಕಟ್ಟಿದ ಕೆಲವೇ ದಿನಗಳಲ್ಲಿ ಆನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಇದನ್ನೂ ಓದಿ:‘ಟಾರ್ಗೆಟ್-16’ ಬೆನ್ನು ಬಿದ್ದ ಸೆಂಚುರಿ ಸ್ಟಾರ್​ ಕೊಹ್ಲಿ..! ಏನಿದು..?
/filters:format(webp)/newsfirstlive-kannada/media/media_files/2025/12/06/shimogga-mother-and-son-3-2025-12-06-10-32-40.jpg)
ಡಾ.ಜಯಶ್ರೀ ತಮ್ಮ ಮನೆಯ ಕೆಳ ಮಹಡಿಯಲ್ಲಿ ಸೂಸೈಡ್ ಮಾಡಿಕೊಂಡಿದ್ರೆ, ಪುತ್ರ ಆಕಾಶ್ ಮೊದಲ ಮಹಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ತಾಯಿ ಮತ್ತು ಮಗ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅದರಲ್ಲಿ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನ ಆಕಾಶ್‌ರ ಎರಡನೇ ಪತ್ನಿಯ ಹೆಸರಿಗೆ ಬರೆದಿಟ್ಟು ಬಳಿಕ ಈ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ರೀತಿ ಸಾಲು ಸಾಲು ಆತ್ಮಹತ್ಯೆಗೆ ಮನೆ ಕಾರಣವೋ? ಮನಸ್ಥಿತಿ ಕಾರಣವೋ? ಆದ್ರೆ, ಪೊಲೀಸರ ತನಿಖೆಯಿಂದ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ. ಇದೆಲ್ಲದರ ಮಧ್ಯೆ ಈ ಸಾನಿಧ್ಯ ಸಾವಿನ ಸಾನಿಧ್ಯ ಆಗಿರೋದೇಕೆ ಅನ್ನೋದೆ ಎಲ್ಲರಲ್ಲೂ ಕಾಡ್ತಿರೋ ಕಟ್ಟಕಡೆಯ ಪ್ರಶ್ನೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us