/newsfirstlive-kannada/media/media_files/2025/12/18/gadaha-ayushaman-3-2025-12-18-19-05-16.jpg)
ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಮತ್ತೊಂದು ಆಡಿಯೋ ಸಾಕ್ಷ್ಯ ಹೇಳಿದೆ. ಗದಗ ಆಯುಷ್ ಇಲಾಖೆಯ ಔಷಧಿ ಖರೀದಿಯಲ್ಲಿ ಕಮಿಷನ್ ಗೋಲ್​ಮಾಲ್​ ನಡೆದಿರೋದು ಬಯಲಾಗಿದೆ. ಇತ್ತ ಆಯುಷ್ ಲಂಚಾವತಾರಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ಬ್ಲಾಸ್ಟ್ ಆಗಿದೆ..
ಔಷಧಿ ಅಂದ್ರೆ ಜೀವ ಉಳಿಸುವ ಜೀವಾಮೃತ.. ಬಡ ರೋಗಿಗಳ ಪಾಲಿಗೆ ಸಂಜೀವಿನಿ.. ಸದ್ಯ ರಾಜ್ಯದ ಆಯುಷ್​ ಇಲಾಖೆಗೂ ಭ್ರಷ್ಟಾಚಾರದ ಮಸಿ ಮೆತ್ತಿದೆ.. ಔಷಧಿ ಖರೀದಿಸೋದು ರಾಮನ ಲೆಕ್ಕ.. ಆದ್ರೆ ಸರ್ಕಾರಕ್ಕೆ ಲೆಕ್ಕ ಕೊಡುವುದು ಕೃಷ್ಣನ ಲೆಕ್ಕ.. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷಗಳ 63% ಭ್ರಷ್ಟಾಚಾರ ಆರೋಪದ ನಡುವೆ ನಡೆದಿರೋ ಅತಿ ದೊಡ್ಡ ಗೋಲ್​ಮಾಲ್ ಇದು.
ಇದನ್ನೂ ಓದಿ:ಲಂಕೆಯಲ್ಲಿ ರಶ್ಮಿಕಾ ಮಂದಣ್ಣ.. ಗೆಳತಿಯರ ಜೊತೆ ‘ಬ್ಯಾಚುಲರ್ ಪಾರ್ಟಿ’ ಎಂದ ಫ್ಯಾನ್ಸ್..! Photos
/filters:format(webp)/newsfirstlive-kannada/media/media_files/2025/12/18/gadaha-ayushaman-2-2025-12-18-19-05-34.jpg)
ಔಷಧಿ ಖರೀದಿ ಟೆಂಡರ್​​​ನಲ್ಲೂ ಕಮಿಷನ್ ಕರ್ಮಕಾಂಡ!
ಆಯುಷ್ ಇಲಾಖೆಯ ಲಂಚಾವತಾರ ಬಟಾಬಯಲಾಗಿದೆ.. ಗದಗದ ಆಯುಷ್ ಜಿಲ್ಲಾ ಕಚೇರಿಯಲ್ಲಿ 15 ರಿಂದ 20 ಅಲ್ಲ.. 30 ರಿಂದ 55 ಪರ್ಸೆಂಟ್​ವರೆಗೆ ಕಮಿಷನ್ ದಂಧೆ ನಡೆಯುತ್ತಿದೆ..ಇವ್ರು ಜಯಪಾಲ್ ಸಿಂಗ್ ಸೇಮೋರೇಖರ್ ಅಂತ.. ಗದಗ ಆಯುಷ್ ಇಲಾಖೆಯ ಅಧಿಕಾರಿ.. ಇವರ ಮೂಗಿನ ನೆರಳಲ್ಲೇ ಕಡು ಭ್ರಷ್ಟಾಚಾರ ತಾಂಡವ ಆಡ್ತಿದೆ. ಇನ್ನು ಈತನ ಹೆಸರು ಕಲ್ಮೇಶ ಸ್ವಾಮಿ.. ಕಚೇರಿಯಲ್ಲೇ ಇದ್ದುಕೊಂಡು ಕಮಿಷನ್ ಖುದುರಿಸುವ ದಲ್ಲಾಳಿ.. ಮತ್ತೋರ್ವ ಸುಧಾ ಜಾಲಿಹಾಳ್, ಸಹಾಯಕ ಆಡಳಿತಾಧಿಕಾರಿ.. ಇವರೆಲ್ಲಾ ಸೇರಿ ಆಯುಷ್ ಔಷಧಿ ಖರೀದಿಯಲ್ಲಿ ದೊಡ್ಡಮಟ್ಟದ ಕಮಿಷನ್ ದಂಧೆ ನಡೆಸಿರೋದು ಆಡಿಯೋದಲ್ಲಿ ಬಯಲಾಗಿದೆ..
ಭ್ರಷ್ಟಾಚಾರಕ್ಕೆ ದೀರ್ಘಾ ‘ಆಯುಷ್’
ಒಟ್ಟು 90 ಲಕ್ಷ ಮೊತ್ತದ ಔಷಧಿ ಖರೀದಿಯಲ್ಲಿ ಗೋಲ್​ಮಾಲ್ ನಡೆದಿದ್ದು ಆಯುಷ್ ಟೆಂಡರ್​​ನಲ್ಲಿ 6 ಕಂಪನಿಗಳು ಭಾಗಿಯಾಗಿವೆ. ಈ 6 ಕಂಪನಿಗಳ ಪೈಕಿ 2 ಕಂಪನಿಗಳ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ ಆಗಿದೆ. ಔಷಧಿ ಖರೀದಿ ಟೆಂಡರ್​ ಪಾಸ್​ಗೆ 30% ಕಮಿಷನ್​ಗೆ ಬೇಡಿಕೆ ಇಡಲಾಗಿದೆ. ಖರೀದಿಸುವ ಔಷಧಿಯೇ ಬೇರೆ.. ಲ್ಯಾಬ್​ ಟೆಸ್ಟ್ ಗೆ ಕಳುಹಿಸುವ ಸ್ಯಾಂಪಲ್ಸ್ ಬೇರೆ ಆಗಿದೆ. ಲ್ಯಾಬ್ ಸಿಬ್ಬಂದಿಗೂ ಹಣ ಕೊಡುವ ಬಗ್ಗೆ ಆಡಿಯೋದಲ್ಲಿ ಮಾತನ್ನಾಡಿದ್ದಾರೆ..ಕಾರವಾರ, ಹಾಸನ, ಶಿವಮೊಗ್ಗ ಬಿಟ್ಟು ಉಳಿದೆಡೆ ಹೆಚ್ಚು ಕಮಿಷನ್ ನಡೀತಿದೆ. ಎಲ್ಲ ಹಂತದ ಅಧಿಕಾರಿಗಳಿಗೆ ಕಮಿಷನ್ ಕೊಡುವ ಕುರಿತು ಆಡಿಯೋದಲ್ಲಿ ಪ್ರಸ್ತಾಪ ಆಗಿದೆ. ಬಳ್ಳಾರಿ, ಹಾಸನ ಜಿಲ್ಲೆಯ ಪಂಚಕರ್ಮ ಟೇಬಲ್​​ನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು 1 ಲಕ್ಷ ರೂಪಾಯಿ ಟೇಬಲ್ 4.85 ಲಕ್ಷಕ್ಕೆ ಖರೀದಿಸಿದ ಬಗ್ಗೆ ಆಡಿಯೋದಲ್ಲಿ ಮಾತನ್ನಾಡಿರೋದು ಬಯಲಾಗಿದೆ.
ಇದನ್ನೂ ಓದಿ: 1500 ಜನರು ಇರುವ ಹಳ್ಳಿಯಲ್ಲಿ ಕೇವಲ 3 ತಿಂಗಳಲ್ಲಿ 27,000 ಶಿಶುಗಳ ಜನನ -ಬೆಚ್ಚಿಬಿದ್ದ ಮಹಾರಾಷ್ಟ್ರ
/filters:format(webp)/newsfirstlive-kannada/media/media_files/2025/12/18/gadaha-ayushaman-2025-12-18-19-05-48.jpg)
24 ನಿಮಿಷ.. ಕಮಿಷನ್ ಕಮಾಯಿ ಸಂಭಾಷಣೆ!
ಟೆಂಡರ್ ಹಾಕಿದ ದೆಹಲಿ ಮೂಲದ ಕಂಪನಿ ಪ್ರತಿನಿಧಿಯೊಂದಿಗೆ ಗದಗ ಜಿಲ್ಲಾ ಆಯುಷ್ ಅಧಿಕಾರಿ ಜಯಪಾಲ್ ಸಿಂಗ್ ಸೇಮೋರೇಖರ್ ಮಾತನಾಡಿರೋ ಆಡಿಯೋದಲ್ಲಿ ಕಮಿಷನ್ ಕಮಾಯಿ ಮಾತು ಬಯಲಾಗಿದೆ.. ಚೌಕಾಸಿ ಮಾಡಿ ಡೀಲ್ ಖುದುರಿಸಿದ್ದು ಆಡಿಯೋದಲ್ಲಿ ಕಮಿಷನ್ ಕರ್ಮಕಾಂಡ ಪ್ರತಿಫಲಿಸಿದೆ.. ಕಮಿಷನ್ ಕರ್ಮಕಾಂಡಕ್ಕೆ ಆಡಿಯೋ ಪುಷ್ಟಿ ನೀಡಿದೆ..
BJP ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗು
ಆಯುಷ್ ಇಲಾಖೆಯ ಭ್ರಷ್ಟಾಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಬೆಂಕಿಯುಗುಳಿದಿದ್ದಾರೆ... ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ.. ಭ್ರಷ್ಟಾಚಾರದ ಹಣ ಹೈಕಮಾಂಡ್​ಗೆ ಸಂದಾಯ ಆಗ್ತಿದೆ ಅಂತ ಗುಡುಗಿದ್ದಾರೆ. ಒಟ್ಟಾರೆ, ಸರ್ಕಾರದ ವಿರುದ್ಧ ಕಮಿಷನ್ ಬಾಂಬ್ ಸಿಡಿಸಿದ್ದ ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.. ಸದ್ಯ ಆಯುಷ್ ಇಲಾಖೆಯ ಭ್ರಷ್ಟಾಚಾರ ಸರ್ಕಾರಕ್ಕೆ ಮುಜುಗರ ತರಿಸೋದಂತೂ ಗ್ಯಾರಂಟಿ.
ಇದನ್ನೂ ಓದಿ: 28 ಕೋಟಿ ನೀರಿನಲ್ಲಿ ಹೋಮ..! ಯಾವ ಫ್ರಾಂಚೈಸಿ ಹೇಗೆಲ್ಲ ಕೈಸುಟ್ಟುಕೊಂಡಿವೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us