/newsfirstlive-kannada/media/media_files/2025/10/06/hasanambe-2025-10-06-07-37-36.jpg)
ವರ್ಷಕ್ಕೊಮ್ಮೆಯಷ್ಟೇ ಭಕ್ತರಿಗೆ ದರುಶನ ಭಾಗ್ಯ ಕರುಣಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಜಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.
ಹಾಸನದ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲು ಮೂರು ದಿನಗಳಷ್ಟೇ ಬಾಕಿ ಇದೆ. ಅಕ್ಟೋಬರ್ 9 ರಂದು ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬ ದೇಗುಲದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ಹಾಸನಾಂಬೆಯ ದರ್ಶನ ಪಡೆಯೋ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಭಕ್ರತ ನಿಯಂತ್ರಣಕ್ಕೆ ಬೇಕಾದ ಭದ್ರತೆ, 100 ಕ್ಕೂ ಹೆಚ್ಚು ಸಂಚಾರಿ ಶೌಚಾಲಯಗಳ ಅಳವಡಿಕೆ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯ, ಪ್ರಸಾದ ವಿತರಣೆ ಹೀಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಜಿಲ್ಲಾಡಳಿತ ಕೈಗೊಂಡಿದೆ. ಜೊತೆಗೆ ನೂಕು ನುಗ್ಗಲು ತಡೆಯಲು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಲು ತಯಾರಿ ನಡೆಸಿದೆ .
ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನಕ್ಕಿದ್ದ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿ ಗೋಲ್ಡ್ ಪಾಸ್ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಅಲ್ಲದೇ ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ವಾಟ್ಸಾಪ್ ಚಾಟ್ ಬಾಟ್ ಮೂಲಕ ಭಕ್ತರಿಗೆ ಆನ್ಲೈನ್ ನೆರವು ನೀಡಲಾಗುತ್ತಿದೆ. ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಎಐ ತಂತ್ರಜ್ಞಾನ ದ ಮೂಲಕ ಭಕ್ತರಿಗೆ ಅತ್ಯಾಧುನಿಕ ಸೇವೆಯನ್ನೂ ದೇವಾಲಯ ಆಡಳಿತ ಮಂಡಳಿ ಕಲ್ಪಿಸಲಿದೆ.
ಮೊದಲ ಮತ್ತು ಕಡೆಯ ದಿನ ಹೊರತು ಪಡಿಸಿ ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಸಿಗಲಿದೆ. ಬಾಗಿಲು ತೆರೆದ ದಿನ ದೇವಾಲಯದ ಗರ್ಭಗುಡಿ ಶುಚಿತ್ವ ಹಿನ್ನೆಲೆ ಅಕ್ಟೋಬರ್ 9 ರಂದು ಸಾರ್ವಜನಿಕ ದರ್ಶನ ಇರೋದಿಲ್ಲ. ಇನ್ನು, ಮುಂಜಾಗ್ರತೆ ಕ್ರಮವಾಗಿ 100 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನ ಅಳವಡಿಸಲು ಜಿಲ್ಲಾಡಲಿತ ತೀರ್ಮಾನಿಸಿದೆ. ಅ.23 ರಂದು ಬಲಿಪಾಡ್ಯಮಿಯ ಮಾರನೇ ದಿನ ಸಂಪ್ರದಾಯ ಬದ್ಧವಾಗಿ ಹಾಸನಾಂಬೆ ದೇಗುಲದ ಮುಚ್ಚಲಿದೆ.
ದಕ್ಷಿಣ ಭಾರತ ವೈಷ್ಣೋದೇವಿ ಎಂದೇ ಹಾಸನಾಂಬೆ ಪ್ರಖ್ಯಾತಿ. ರಾಜ್ಯ ಮಾತ್ರವಲ್ಲ ದೇಶದ ಮೂಲೆ ಮೂಲೆಯಿಂದಲೂ ತಾಯಿ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಇವತ್ತಿನಿಂದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸ ತಯಾರಿ ಇನ್ನಷ್ಟು ಚುರುಕುಗೊಳ್ಳಲಿದ್ದು, ಈ ಬಾರಿ ಸಿಎಂ ಕೂಡ ಹಾಸನಾಂಬೆ ದರುಶನಕ್ಕೆ ಆಗಮಿಸೋ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್​ಬಾಸ್​ ಶೋನಿಂದ ಹೊರಬಿದ್ದ ಇಬ್ಬರು ಸ್ಪರ್ಧಿಗಳು; ಒಂದೇ ವಾರಕ್ಕೆ ಜರ್ನಿ ಅಂತ್ಯ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ