/newsfirstlive-kannada/media/media_files/2026/01/04/yash-mother-2026-01-04-11-23-25.jpg)
ರಾಕಿಂಗ್​ ಸ್ಟಾರ್​ ಯಶ್​ ತಾಯಿ ಪುಷ್ಪ ವಿರುದ್ಧ ಕೇಳಿಬಂದಿದ್ದ ಆರೋಪಕ್ಕೆ ಟ್ವಿಸ್ಟ್​ ಸಿಕ್ಕಿದೆ. ಕೋರ್ಟ್​ನಿಂದ ಆರ್ಡರ್ ಪಡೆದು ಕಾಂಪೌಂಡ್ ಒಡೆದ GPA ಹೋಲ್ಡರ್ ದೇವರಾಜ್ ವಿರುದ್ಧ ಯಶ್ ತಾಯಿ ಪುಷ್ಪ ಪರವಾಗಿ ದುರ್ಗಾಪ್ರಸಾದ್ ದೂರು ನೀಡಿದ್ದಾರೆ. ದುರ್ಗಾಪ್ರಸಾದ್ ಯಶ್ ತಾಯಿಯ ಸಂಬಂಧಿ ಎನ್ನಲಾಗಿದೆ.
ಏನಿದು ಪ್ರಕರಣ?
ವಿದ್ಯಾನಗರದ ಸತ್ಯಮಂಗಲ ಬಡಾವಣೆಯಲ್ಲಿ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆ ಇದೆ. ಹಲವು ವರ್ಷಗಳ ಹಿಂದೆ ಈ ಮನೆಯನ್ನ ಖರೀದಿಸಲಾಗಿದೆ ಅಂತ ಹೇಳಲಾಗಿದೆ. ಆಗಾಗ ಯಶ್ ಮತ್ತು ಅವರ ತಾಯಿ ಪುಷ್ಪಾ ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಇತ್ತೀಚೆಗೆ 50*100 ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಇದೆ. ಒತ್ತುವರಿ ಜಾಗದಲ್ಲಿ ಕಾಂಪೌಂಡ್ ಜೊತೆ ಶೌಚಾಲಯ ಸೇರಿದಂತೆ ಸಣ್ಣಪುಟ್ಟ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನ ಮೈಸೂರು ಮೂಲದ ಲಕ್ಷ್ಮಮ್ಮ ಹಾಗೂ ಜಿಪಿಎ ಹೋಲ್ಡರ್ ದೇವರಾಜು ಮಾಡಿದ್ದರು.
ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾಂಪೌಂಡ್​ ತೆರವು ಮಾಡಿಸಿದ್ದ GPA ಹೋಲ್ಡರ್ ದೇವರಾಜು ವಿರುದ್ಧ ಯಶ್​ ತಾಯಿ ಪುಷ್ಪ ಪರವಾಗಿ ಅವರ ಸಂಬಂಧಿ ದುರ್ಗಾಪ್ರಸಾದ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದು ಪಾಟೀಲ್, ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಕೈ ಕೈ ಮಿಲಾಯಿಸಿ ಜಗಳ!
/filters:format(webp)/newsfirstlive-kannada/media/media_files/2026/01/05/yash-mother-2026-01-05-16-48-18.jpg)
ದೂರಿನಲ್ಲಿ ಏನಿದೆ?
ಕಾಂಪೌಂಡ್​ ತೆರವುಗೊಳಿಸಲಾದ ಜಾಗದಲ್ಲಿ ದೇವರಾಜ್ ಹಾಗೂ ಲಕ್ಷ್ಮಮ್ಮ ಎಂಬುವರ ಜಾಗವೇ ಇಲ್ಲ. ದಾಖಲೆ ಸಮೇತ ಬಂದು ಕಾಂಪೌಂಡ್​​ ಒಡೆದು ಹಾಕಿಲ್ಲ. ನಾನು ಇಲ್ಲದ ವೇಳೆ ಬಂದು ಏಕಾಏಕಿ ಒಡೆದು ಹಾಕಿದ್ದಾರೆ.ಇದರಿಂದ ಲಕ್ಷಾಂತರ ನಷ್ಟ ಆಗಿದೆ ಎಂದ ಯಶ್ ತಾಯಿ ಪುಷ್ಪರವರ ಸಂಬಂಧಿ ದುರ್ಗಾಪ್ರಸಾದ್ ದೂರು ನೀಡಿದ್ದಾರೆ. ಈ ಕೃತ್ಯದ ಹಿಂದೆ ಪಿಡಿಓ ನಟರಾಜ್ ಇದ್ದಾರೆ.
ಅವ್ರು ಮತ್ತು ದೇವರಾಜ್ ಈ ಜಾಗ ಕೇಳ್ತಿದ್ರು. ಐದು ವರ್ಷದಿಂದ ಕಂದಾಯ ಕಟ್ಟಲಾಗಿದೆ, ಗಿರೀಶ್ ಎಂಬುವರಿಂದ ಜಾಗ ಖರೀದಿಸಲಾಗಿದೆ ಎಂಬ ಮಾಹಿತಿ ನನಗಿದೆ.ಪುಷ್ಪ ಅವರ ಹಾಸನ ಜಮೀನುಗಳನ್ನ ನಾನೇ ನೋಡಿಕೊಳ್ಳೋದು. ಹಾಸನದ ಮನೆಯಲ್ಲಿ ನಾನೆ ಇರುವುದು ನಾನು ಜಮೀನಿಗೆ ಹೋದ ಸಂದರ್ಭದಲ್ಲಿ ಹೊಡೆದು ಹಾಕಿದ್ದಾರೆ. ಪುಷ್ಪ ಅವ್ರಿಗೆ ಯಾವುದೇ ನೊಟೀಸ್ ನೀಡಿಲ್ಲ. ಅವ್ರಿಗೆ ಬರೋ ಪತ್ರಗಳನ್ನ ನಾನೇ ಕಲೆಕ್ಟ್​ ಮಾಡಿನ ಕೊಡೋದು.ದೇವರಾಜ್ ಕಡೆಯಿಂದ ನೊಟೀಸ್ ಗೋಡೆಗೆ ಅಂಟಿಸಿದ ಮೇಲೆಯೇ ನಾವು ಕೂಡ ಕೋರ್ಟ್ ಮೆಟ್ಟಿಲೇರಿದ್ದೇವೆ. ದೇವರಾಜ್ ಪುಷ್ಪ ಅವರಿಗೆ ಸೇರಿದ ಸ್ವತ್ತನ್ನ ಅನಧಿಕೃತವಾಗಿ JCB ನುಗ್ಗಿಸಿ ಒಡೆದು ಹಾಕಿದ್ದಾರೆ.ಸತ್ಯಮಂಗಲ ಪಂಚಾಯತ್ ಪಿಡಿಒ ನಟರಾಜ್ ವಿರುದ್ಧವೂ ಪುಷ್ಪ ಅವರ ಸಂಬಂಧಿ ದುರ್ಗಾಪ್ರಸಾದ್ ಬಡಾವಣೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ ಫೈರಿಂಗ್ ಕೇಸ್ : ಎಲ್ಲ 26 ಆರೋಪಿಗಳಿಗೆ ನ್ಯಾಯಾಂಗ ಬಂಧನ, ಇಂದು ಪತ್ತೆಯಾಯ್ತು ಬುಲೆಟ್!
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us