/newsfirstlive-kannada/media/media_files/2025/08/14/renukaswamy-case-jagga-arrest-2025-08-14-18-47-49.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು ರದ್ದು ಹಿನ್ನೆಲೆಯಲ್ಲಿ ಚಿತ್ರದುರ್ಗದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಆಟೋ ಚಾಲಕ ಜಗ್ಗ ಅಲಿಯಾಸ್ ಜಗದೀಶ್ ಹಾಗೂ ಅನು ಅಲಿಯಾಸ್ ಅನುಕುಮಾರ್ ಬಂಧಿತ ಆರೋಪಿಗಳು.
ಜಗ್ಗನ ಮಹಾವೀರ ನಗರ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಿಹಿ ನೀರು ಹೊಂಡದ ರಸ್ತೆ ಬಳಿಯಿರುವ ಅನುಕುಮಾರ್ ಮನೆಯಲ್ಲಿ ಅನು ಬಂಧನ ಆಗಿದೆ. ಇಬ್ಬರು ಆರೋಪಿಗಳನ್ನ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿ ಪಾಳ್ಯ ಠಾಣೆ ಪಿಎಸ್ಐ ರಘು ನೇತೃತ್ವದಲ್ಲಿ ಆರೋಪಿಗಳ ಬಂಧನವಾಗಿದೆ.
ಇದನ್ನೂ ಓದಿ: ಪವಿತ್ರ ಗೌಡ ಸೇರಿ ಒಟ್ಟು ನಾಲ್ವರು ಅರೆಸ್ಟ್.. ಅನ್ನಪೂರ್ಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳು
ಇತ್ತ ಬಂಧನ ಆಗುತ್ತಿದ್ದಂತೆಯೇ ಜಗದೀಶ್ ಕುಟುಂಬಸ್ಥರು ಕಣ್ಣೀರು ಇಟ್ಟಿದ್ದಾರೆ. ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಕಣ್ಣೀರು ಇಡುತ್ತ ಜಗ್ಗ ಮನೆಯಿಂದ ಹೊರಗೆ ಬಂದಿದ್ದಾರೆ. ನಂತರ ಆತನ ತಾಯಿ ಜೋರಾಗಿ ಅತ್ತಿದ್ದಾರೆ. ಬಂಧಿಸಿರುವ ಆರೋಪಿಗಳನ್ನು ಬೆಂಗಳೂರಿನತ್ತ ಕರೆದುಕೊಂಡು ಬರಲಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಆರೋಪಿಗಳಾದ ದರ್ಶನ್, ಪವಿತ್ರ ಗೌಡ, ಪ್ರದೂಷ್, ಲಕ್ಷ್ಮಣ್, ನಾಗರಾಜನನ್ನ ಬಂಧಿಸಲಾಗಿದೆ.
ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರೆ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ನಟ ದರ್ಶನ್, ಪವಿತ್ರಾ ಗೌಡ ಹಾಗೂ 7 ಆರೋಪಿಗಳ ಜಾಮೀನು ಅನ್ನು ರದ್ದು ಮಾಡಿದೆ.
ಇದನ್ನೂ ಓದಿ:Breaking ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಮತ್ತೆ ಅರೆಸ್ಟ್
ಇವತ್ತು ಸುಪ್ರೀಂ ಕೋರ್ಟ್ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್, ಪವಿತ್ರಾಗೌಡ ಹಾಗೂ 7 ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರದ ಅರ್ಜಿಯ ಆದೇಶ ಹೊರ ಬಿದ್ದಿದೆ. ಹೈಕೋರ್ಟ್ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಹಾಗೂ ನ್ಯಾಯಾಮೂರ್ತಿ ಮಹಾದೇವನ್ ಪೀಠ ತೀರ್ಪು ನೀಡಿದೆ. ಜಾಮೀನು ರದ್ದು ಹಿನ್ನೆಲೆಯಲ್ಲಿ ಆರೋಪಿಗಳಾದ ದರ್ಶನ್, ಪವಿತ್ರ ಗೌಡ, ಪ್ರದೂಷ್, ನಾಗರಾಜ್, ಲಕ್ಷ್ಮಣ್, ಅನುಕುಮಾರ್ ಹಾಗೂ ಜಗದೀಶ್ ಮತ್ತೆ ಜೈಲು ಸೇರಬೇಕಾಗಿದೆ.
ಇದನ್ನೂ ಓದಿ: ‘ಹೇಗಿದ್ದೀರಾ ಸರ್ ವಿಲಿಯಂ..’ ಅರೆಸ್ಟ್ ವೇಳೆ ದರ್ಶನ್ ಏನ್ಮಾಡಿದರು? ಬಂಧನ ಪ್ರಕ್ರಿಯೆ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ