/newsfirstlive-kannada/media/media_files/2025/08/14/darshan-pavitra-2025-08-14-15-53-42.jpg)
ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಿಗೆ ಜಾಮೀನು ರದ್ದು ಆಗುತ್ತಿದ್ದಂತೆಯೇ ನಾಲ್ವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮೊದಲ ಆರೋಪಿ ಪವಿತ್ರ ಗೌಡ, 12ನೇ ಆರೋಪಿ ಲಕ್ಷ್ಮಣ್, 14ನೇ ಆರೋಪಿ ಪ್ರದೂಷ್ ಹಾಗೂ 11ನೇ ಆರೋಪಿ ನಾಗರಾಜ್ನನ್ನು ಬಂಧಿಸಲಾಗಿದೆ.
ಅರೆಸ್ಟ್ ಆಗಿರುವ ನಾಲ್ವರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈಗಾಗಲೇ ವೈದ್ಯಕೀಯ ಸಿಬ್ಬಂದಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದು, ನಾಲ್ವರು ಆರೋಪಿಗಳ ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ಜಾಮೀನು ರದ್ದತಿಯಿಂದ ಯಾಱರು ಜೈಲು ಪಾಲಾಗಬೇಕು? ಯಾಱರ ಪಾತ್ರ ಏನು?
ರೇಣುಕಾಸ್ವಾಮಿ ಪ್ರಕರಣದಲ್ಲಿ ಈ ನಾಲ್ವರ ಪಾತ್ರ ಏನು ಅಂತಾ ನೋಡೋದಾದರೆ, ಮೊದಲ ಆರೋಪಿ ಪವಿತ್ರ ಗೌಡ. ನಟ ದರ್ಶನ್ ಗೆಳತಿ ಪವಿತ್ರಾಗೌಡ. ಈ ಕೊಲೆ ಕೇಸ್ನ ಎ1 ಆರೋಪಿ. ರೇಣುಕಾಸ್ವಾಮಿ ಕೊಲೆಯಾಗಲು ಮೂಲ ಕಾರಣವೇ ಪವಿತ್ರಾಗೌಡ. ಕೃತ್ಯಕ್ಕೆ ಸಂಚು ರೂಪಿಸಿರುವ ಆರೋಪವಿದೆ. ರೇಣುಕಾಸ್ವಾಮಿಗೆ ಚಪ್ಪಲಿಯಿಂದಲೂ ಪವಿತ್ರಾಗೌಡ ಥಳಿಸಿರುವ ಆರೋಪ ಇದೆ.
12ನೇ ಆರೋಪಿ ಆಗಿರುವ ಲಕ್ಷ್ಮಣ್, ದರ್ಶನ್ ಅವರ ಕಾರು ಚಾಲಕನಾಗಿದ್ದಾನೆ. ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನೆಲೆಸಿದ್ದ ಈತ ಕೃತ್ಯ ನಡೆದ ಸ್ಥಳದಲ್ಲಿದ್ದ. ಕೊಲೆ ಪ್ರಕರಣದಲ್ಲಿ ದರ್ಶನ್ ರಕ್ಷಣೆಗೆ ಮುಂದಾಗಿದ್ದ ಇವನು ದರ್ಶನ್ ಬಚಾವ್ ಮಾಡಲು ನಾಲ್ವರಿಗೆ ಹಣದ ಆಸೆ ತೋರಿಸಿದ್ದಾನೆ ಎಂಬ ಆರೋಪ ಇದೆ.
ಇದನ್ನೂ ಓದಿ: ದರ್ಶನ್ ಜಾಮೀನು ರದ್ದು ಆಗ್ತಿದ್ದಂತೆ ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮೀ..
ಇನ್ನು 14ನೇ ಆರೋಪಿ ಪ್ರದೂಷ್ ಬೆಂಗಳೂರಿನ ಗಿರಿನಗರ ನಿವಾಸಿ. ದರ್ಶನ್ ಅಭಿಮಾನಿ. ಕೊಲೆ ಪ್ರಕರಣದಲ್ಲಿ ದರ್ಶನ್ ರಕ್ಷಣೆ ಮಾಡಲು 30 ಲಕ್ಷ ಪಡೆದಿದ್ದ ಇವನು, ಇತರೆ ನಾಲ್ವರಿಗೆ ನೀಡಿದ್ದ. ಈ ಹಣವನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. 11ನೇ ಆರೋಪಿ ಆಗಿರುವ ನಾಗರಾಜ್, ಮೈಸೂರು ರಾಮಕೃಷ್ಣ ನಗರದ ನಿವಾಸಿ. ಮೈಸೂರು ಸ್ಥಳೀಯ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ. ಕಳೆದ 15 ವರ್ಷಗಳಿಂದ ದರ್ಶನ್ ಜತೆಗೆ ಕೆಲಸ ಮಾಡುತ್ತಿದ್ದ. ದರ್ಶನ್ ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುತ್ತಿದ್ದ. ಮೈಸೂರಿನಲ್ಲಿರುವ ದರ್ಶನ್ ಅವರ ಫಾರಂ ಹೌಸ್‌ನಲ್ಲಿ ಇರುತ್ತಿದ್ದ.
ಇದನ್ನೂ ಓದಿ:ನಟ ದರ್ಶನ್ ಬಂಧನದಿಂದ ಮತ್ತೆ ಜೈಲು ಪಾಲಾಗುವವರೆಗೂ ಬಿ.ದಯಾನಂದ್ ಪಾತ್ರ ಏನ್ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ