/newsfirstlive-kannada/media/media_files/2025/09/22/kalaburagi-girl-2025-09-22-09-51-52.jpg)
ಕಲಬುರಗಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ನಲುಗಿ ಹೋಗಿದ್ದಾರೆ. ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಕುಸಿದ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ. ಈ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಹಳೆ ಬಜಾರ್ ಏರಿಯಾದಲ್ಲಿ ನಡೆದಿದೆ.
ಇದನ್ನೂ ಓದಿ:ಈ ಕಾರು ಖರೀದಿಸೋರಿಗೆ ಸೂಪರ್ ಸುದ್ದಿ.. 1.56 ಲಕ್ಷ ರೂಪಾಯಿವರೆಗೆ ಇಳಿಕೆ..!
ಆಗಿದ್ದೇನು?
ನಿರಂತರವಾಗಿ ಸುರಿದ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಹಳೆ ಬಜಾರ್ ಏರಿಯಾದಲ್ಲಿ ಮನೆಯ ಗೋಡೆ ಕುಸಿದಿದೆ. ಈ ದುರಂತದಲ್ಲಿ 17 ವರ್ಷದ ಬಾಲಕಿ ಸಾನಿಯಾ ಸೈಪನಸಾಬ್ ತಾಂಬೋಳಿ ಮೃತಪಟ್ಟಿದ್ದಾಳೆ. ಹಳೆಯದಾದ ಕಲ್ಲಿನ ಮನೆಯ ಒಂದು ಭಾಗದ ಗೋಡೆ ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ.
ನಿರಂತರ ಮಳೆ ಹಿನ್ನೆಲೆ ಗೋಡೆ ತೇವಗೊಂಡು ಬಾಲಕಿ ಮಲಗಿದ್ದ ವೇಳೆ ಕುಸಿದಿದೆ. ಪರಿಣಾಮ ಕಲ್ಲಿನಡಿ ಸಿಲುಕಿ ಬಾಲಕಿ ಸಾನಿಯಾ ಸೈಪನಸಾಬ್ ತಾಂಬೋಳಿ ಮೃತಪಟ್ಟಿದ್ದಾಳೆ. ಇನ್ನುಳಿದ ನಾಲ್ವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಹಿಬೂಬ್, ನಿಶಾದ್, ಆಯಿಷಾ ಮತ್ತು ರಮಜಾನ್ ಬೀ ಗಾಯಗೊಂಡ ಮಕ್ಕಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಇವತ್ತು ಚಾಲನೆ.. ಸ್ಪೆಷಲ್ ವಿಡಿಯೋ ಹಂಚಿಕೊಂಡ ಸಿಎಂ