Advertisment

ಕಡು ಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೇಗೇರಿದ್ದ ಬೀಳಗಿ.. ದಕ್ಷ ಅಧಿಕಾರಿಯ ಕಷ್ಟದ ಜರ್ನಿ ಹೇಗಿತ್ತು ..?

ಮಹಾಂತೇಶ ಬೀಳಗಿ‌, ಈ ಹೆಸರು ಕೇಳಿದ್ರೆ ಅದೆಷ್ಟು ಜನರ ಮೈ ರೋಮಾಂಚನಗೊಳ್ಳುತ್ತೆ. ಬಡತನದಲ್ಲಿ ಕಷ್ಟಪಟ್ಟು ಓದಿ ಬೆಳೆದು ದಕ್ಷ ಐಎಎಸ್ ಅಧಿಕಾರಿ ಎನಿಸಿಕೊಂಡಿದ್ದ ಮಹಾಂತೇಶ ಬೀಳಗಿ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕಿಡಾಗಿದ್ದಾರೆ. ಈ ಮೂಲಕ ನಾಡು ಓರ್ವ ದಕ್ಷ ಹಾಗೂ ಸರಳಸಜ್ಜನಿಕೆ ಅಧಿಕಾರಿಯನ್ನ ಕಳೆದುಕೊಂಡಿದೆ.

author-image
Ganesh Kerekuli
Mahantesh bilagi
Advertisment
  • ಬೈಕ್ ಅಪಘಾತ ತಪ್ಪಿಸಲು ಹೋಗಿ ಪಲ್ಟಿಯಾದ ಇನ್ನೋವಾ ಕಾರು
  • ಬೆಳಗಾವಿ ಜಿಲ್ಲೆ ರಾಮದುರ್ಗದ ನಿವಾಸಿ ಮಹಾಂತೇಶ ಬೀಳಗಿ
  • 2012ರ ಕರ್ನಾಟಕ ಕೇಡರ್​ನ ಐಎಎಸ್​ ಅಧಿಕಾರಿಯಾಗಿ ಆಯ್ಕೆ

ಮಹಾಂತೇಶ ಬೀಳಗಿ‌, ಈ ಹೆಸರು ಕೇಳಿದ್ರೆ ಅದೆಷ್ಟು ಜನರ ಮೈ ರೋಮಾಂಚನಗೊಳ್ಳುತ್ತೆ. ಬಡತನದಲ್ಲಿ ಕಷ್ಟಪಟ್ಟು ಓದಿ ಬೆಳೆದು ದಕ್ಷ  ಐಎಎಸ್ ಅಧಿಕಾರಿ ಎನಿಸಿಕೊಂಡಿದ್ದ ಮಹಾಂತೇಶ ಬೀಳಗಿ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕಿಡಾಗಿದ್ದಾರೆ. ಈ ಮೂಲಕ ನಾಡು ಓರ್ವ ದಕ್ಷ ಹಾಗೂ ಸರಳಸಜ್ಜನಿಕೆ ಅಧಿಕಾರಿಯನ್ನ ಕಳೆದುಕೊಂಡಿದೆ.

Advertisment

ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐಎಎಸ್​ ಅಧಿಕಾರಿ ಮಹಾಂತೇಶ ಬೀಳಗಿ ಮತ್ತು ಅವರ ಇಬ್ಬರು ಸಹೋದರರು ದುರ್ಮರಣಕ್ಕಿಡಾಗಿದ್ದಾರೆ. ಕಲಬುರಗಿಯಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಇತ್ತು. ಇದರಲ್ಲಿ ಪಾಲ್ಗೊಳ್ಳಲು ರಾಮದುರ್ಗದಿಂದ ವಿಜಯಪುರ ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಗೌನಹಳ್ಳಿ ಗ್ರಾಮದ ಬಳಿ ಎದುರಿಗೆ ಬಂದ ಬೈಕ್ ಸವಾರನಿಗೆ ಡಿಕ್ಕಿ ತಪ್ಪಿಸಲು ಹೋಗಿ ಕಾರು ಸೇತುವೆ ಮೇಲಿಂದ ಕೆಳಗೆ ಬಿದ್ದು ಹತ್ತಾರು ಬಾರಿ ಪಲ್ಟಿಯಾಗಿದೆ.

ಇದನ್ನೂ ಓದಿ: ವಿಶ್ವಕಪ್ ದಂಡಯಾತ್ರೆಗೆ ಬ್ಲೂ ಪ್ರಿಂಟ್ ರೆಡಿ.. SKY ಪಡೆ ಮುಂದೆ ಬಿಗ್​ ಟಾಸ್ಕ್​..!

ಗಂಭೀರವಾಗಿ ಗಾಯಗೊಂಡಿದ್ದ ಮಹಾತೇಂಶ ಬೀಳಗಿ ಅವರನ್ನ, ಆಸ್ಪತ್ರೆಗೆ ಸಾಗಿಸುವಾಗ ಪ್ರಾಣಬಿಟ್ಟಿದ್ದಾರೆ. ಈ ಅಪಘಾತದಲ್ಲಿ ಅವರ ಸಹೋದರರಾದ  ಶಂಕರ್ ಬೀಳಗಿ, ಈರಣ್ಣ ಬೀಳಗಿ ಕೂಡ ಮೃತಪಟ್ಟಿದ್ದಾರೆ. ಕಾರಿನ ಚಾಲಕ ಹಾಗೂ ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಸುದ್ದಿ ತಿಳಿದು ಕಲಬುರಗಿ ಡಿಸಿ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ರು.  ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಐಎಎಸ್​ ಅಧಿಕಾರಿ ಮಹಾತೇಶ್​ ಬೀಳಗಿ ಅವರ ಬದುಕಿನ ಪಯಣದ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಕಡು ಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೇಗೇರಿದ್ದ ಬೀಳಗಿ, ಜನಮೆಚ್ಚಿದ ಅಧಿಕಾರಿಯಾಗಿದ್ದರು.

Advertisment

ಜನಮೆಚ್ಚಿದ ಅಧಿಕಾರಿ ದುರಂತ ಅಂತ್ಯ

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ 1974ರ ಮಾರ್ಚ್ 27ರಂದು ಮಹಾಂತೇಶ ಬೀಳಗಿ ಜನಿಸಿದ್ರು. ಕಡು ಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೇಗೇರಿದ್ದ ಸಾಧಕ ಇವರು. ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡಿದ್ರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ KAS ಪಾಸ್ ಮಾಡಿದ್ದರು. ಕೆಎಎಸ್​ನಲ್ಲಿ 4ನೇ ಱಂಕ್ ಪಡೆದು ನೇರವಾಗಿ ಎಸಿಯಾಗಿ ಆಯ್ಕೆ ಆಗಿ ಸೇವೆ ಸಲ್ಲಿಸಿದ್ದರು. ಇನ್ನು 2012ರಲ್ಲಿ ಕರ್ನಾಟಕ ಕೇಡರ್​ನ ಐಎಎಸ್​ ಅಧಿಕಾರಿಯಾಗಿ ಆಯ್ಕೆ ಆಗಿ, ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ ಸೇರಿದಂತೆ ರಾಜ್ಯದ ಬೇರೆಡೆ ಸೇವೆ ಸಲ್ಲಿಸಿದ್ದರು. ಪ್ರಸ್ತುತ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇವರು ದಾವಣಗೆರೆ ಡಿಸಿ ಆಗಿದ್ದಾಗ ಹಲವು ಮಹತ್ವದ ಕೆಲಸದ ಮೂಲಕ ಜನರ ಮನಗೆದ್ದಿದ್ದರು. ಕೊರೊನಾ ಕಾಲದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ರು. ಆಕ್ಸಿಜನ್​ ಸಮಸ್ಯೆ ಎದುರಾದಾಗ ದಿಟ್ಟ ಕ್ರಮಕೈಗೊಂಡು ಜನರ ಜೀವ ಕಾಪಾಡಿದ್ರು. ಹೀಗಾಗಿ ಮಹಾತೇಂಶ ಬೀಳಗಿ ದಾವಣಗೆರೆ ಜನರ ನೆಚ್ಚಿನ ಡಿಸಿಯಾಗಿದ್ದರು. ಇನ್ನು ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೂಡ ನೀಡುತ್ತಿದ್ದರು

ಇದನ್ನೂ ಓದಿ: ಕಾರ್ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು : ಸೆಲ್ಪ್ ಆಕ್ಸಿಡೆಂಟ್ ನಿಂದ ಉರುಳಿಬಿದ್ದ ಕಾರ್‌

IAS OFFICER MAHANTHESH BIAGI DEATH

ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ

ಹಿರಿಯ ಐಎಎಸ್​ ಅಧಿಕಾರಿ ಮಹಾಂತೇಶ್​​ ಬೀಳಗಿ ನಿಧನದಿಂದ ಅವರ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ.  ಮಹಾಂತೇಶ್ ನಿವಾಸದ ಎದುರು ಸಂಬಂಧಿಕರು, ಸ್ನೇಹಿತರು, ಆಪ್ತರು, ಹಿತೈಷಿಗಳು ಆಗಮಿಸಿದ್ದು, ಬೀಳಗಿಯವರ ಜೊತೆಗಿನ ಒಡನಾಟ ನೆನೆದು ಭಾವುಕರಾದ್ರು. ಒಟ್ಟಾರೆ ನಾಡು ಕಂಡು ದಕ್ಷ ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದು, ನಿಜಕ್ಕೂ ಆಘಾತ.

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IAS officer Mahantesh Bilagi IAS officer Mahantesh Bilagi
Advertisment
Advertisment
Advertisment