/newsfirstlive-kannada/media/media_files/2025/09/19/kalaburagi-2025-09-19-13-39-21.jpg)
ಕಲಬುರಗಿ: ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 11 ರಂದು ಭಾಗ್ಯಶ್ರೀ (21) ಎಂಬ ಯುವತಿ ಕಾಣೆಯಾಗಿದ್ದಳು. ನಾಪತ್ತೆಯಾಗಿ 7 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಆರೋಪಿ ಬಂಧನ
ಮಳಖೇಡ ಗ್ರಾಮದ ಸುಲಹಳ್ಳಿ ನಿವಾಸಿಯಾಗಿದ್ದ ಭಾಗ್ಯಶ್ರೀ ಪ್ರಕರಣಕ್ಕೆ ಸಂಬಂಧಿಸಿ, ಮಂಜುನಾಥ್ ಎಂಬ ಶಂಕಿತ ಆರೋಪಿಯನ್ನ ಬಂಧಿಸಲಾಗಿದೆ. ಈತನೇ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಜೀವ ತೆಗೆದಿರುವ ಅನುಮಾನ ವ್ಯಕ್ತವಾಗಿದೆ.
ಸೇಡಿ ತೀರಿಸಿಕೊಂಡ್ನಾ ಮಂಜುನಾಥ್..?
ಪ್ರಕರಣದ ಬೆನ್ನ ಹಿಂದೆ ಬಿದ್ದಿರುವ ಪೊಲೀಸರು, ಫ್ಲ್ಯಾಶ್ ಬ್ಯಾಕ್ ಹೋಗಿದ್ದಾರೆ. ಈ ಹಿಂದೆ ಮಂಜುನಾಥ್ ಸಹೋದರ ವಿನೋದ್ ಆ*ಹ*ತ್ಯೆ ಮಾಡಿಕೊಂಡಿದ್ದ. ಸಹೋದರ ದುಡುಕಿನ ನಿರ್ಧಾರಕ್ಕೆ ಭಾಗ್ಯಶ್ರೀ ಅಪ್ಪ ಕಾರಣ ಎಂಬ ಆರೋಪ ಇದೆ. ಆರೋಪಿಯ ಸಹೋದರ ವಿನೋದ್ ಮಳಖೇಡ ಗ್ರಾಮದ ಅಲ್ಟ್ರಾಟೇಕ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.
ಇದನ್ನೂ ಓದಿ:ತೂಗು ಸೇತುವೆ ಮೇಲಿಂದ ಹಾರಿ ಪ್ರಾಣಬಿಟ್ಟ ದೀಪಿಕಾ.. ಅಯ್ಯೋ ಏನಾಯ್ತು..?
ವಿನೋದ್ ಇದೇ ಕಂಪನಿಯಲ್ಲಿ ಖಾಯಂ ಉದ್ಯೋಗದ ಆಕಾಂಕ್ಷಿ ಆಗಿದ್ದ. ಆದರೆ ಈತನಿಗೆ ಖಾಯಂ ಉದ್ಯೋಗ ಸಿಗದಿರಲು ಭಾಗ್ಯಶ್ರೀ ತಂದೆ ಚೆನ್ನವೀರಪ್ಪ ಕಾರಣ ಎಂದು ಆರೋಪಿಸಲಾಗಿದೆ. ವಿನೋದ್ ಉದ್ಯೋಗ ಖಾಯಂ ಆಗದ ಹಿನ್ನೆಲೆಯಲ್ಲಿ ಮನನೊಂದು ಜೀವ ತೆಗೆದುಕೊಂಡಿದ್ದ. ಸಹೋದರ ನಿಧನದಿಂದ ರೊಚ್ಚಿಗೆದ್ದಿದ್ದ ಮಂಜುನಾಥ್ ಸೇಡು ತೀರಿಸಿಕೊಳ್ಳೋದಾಗಿ ವಾರ್ನ್ ಮಾಡಿದ್ದ ಎನ್ನಲಾಗಿದೆ.
ಅಂತೆಯೇ ಸೆಪ್ಟೆಂಬರ್ 11 ರಂದು ಚೆನ್ನವೀರಪ್ಪ ಪುತ್ರಿಯರು ವಾಕಿಂಗ್ ತೇರಳಿದ್ದ ವೇಳೆ ಅಲ್ಲಿಗೆ ಮಂಜುನಾಥ್ ಎಂಟ್ರಿ ಕೊಟ್ಟಿದ್ದ. ಹಾಗಾಗಿ ಮಂಜುನಾಥನೇ ಭಾಗ್ಯಶ್ರೀಯನ್ನ ಕಿಡ್ನಾಪ್ ಮಾಡಿ ಕೃತ್ಯ ನಡೆಸಿದ್ದಾನೆ ಎಂಬ ಶಂಕೆ ಇದೆ. ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ಇದನ್ನೂ ಓದಿ:ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಹಾದಿ ಸುಗಮ, ಪ್ರಶ್ನಿಸಿದ್ದ ಅರ್ಜಿ ಸುಪ್ರೀಂಕೋರ್ಟ್ ನಲ್ಲೂ ವಜಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ