ಅನ್ನದಾತರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಕರ್ನಾಟಕ ಸರ್ಕಾರ..!

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್​​ನ್ಯೂಸ್ ಸಿಕ್ಕಿದೆ. ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ.. 18 ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ (minimum support price) ಕೊಡಲು ತೀರ್ಮಾನ ಮಾಡಿದೆ ಎಂದು ಘೋಷಣೆ ಮಾಡಿದರು.

author-image
Ganesh
cm siddaramaiah

ಸಿಎಂ ಸಿದ್ದರಾಮಯ್ಯ Photograph: (@siddaramaiah)

Advertisment

ಬೆಂಗಳೂರು: ರಾಜ್ಯ ಸರ್ಕಾರದಿಂದ (Karnataka Govt) ರೈತರಿಗೆ ಗುಡ್​​ನ್ಯೂಸ್ ಸಿಕ್ಕಿದೆ. ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ.. ಸಚಿವ ಸಂಪುಟದ ಉಪ ಸಮಿತಿಯು ಒಂದು ನಿರ್ಧಾರ ಮಾಡಿದೆ. ಈ ಬಾರಿ ರೈತರಿಗೆ ಸಿಹಿ ಸುದ್ದಿಕೊಡಬೇಕು ಅಂದುಕೊಂಡಿದ್ದೇವೆ. ಹೀಗಾಗಿ 18 ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ (minimum support price) ಕೊಡಲು ತೀರ್ಮಾನ ಮಾಡಿದೆ ಎಂದು ಘೋಷಣೆ ಮಾಡಿದರು.

ಇದನ್ನೂ ಓದಿ: ರಾತ್ರೋರಾತ್ರಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮ -ಅಸಲಿಗೆ ಆಗಿದ್ದೇನು..?

ರಾಗಿ, ಭತ್ತ, ಜೋಳ, ತೊಗರಿ, ಶೇಂಗಾ, ಹತ್ತಿ ಸೇರಿದಂತೆ ಹದಿನೆಂಟು ಬೆಳೆಗಳಿಗೆ ಸರ್ಕಾರದ ಬೆಂಬಲ ಬೆಲೆ ನೀಡಲಿದೆ. ಸರ್ಕಾರದಿಂದ 15 ಲಕ್ಷ ಮೆಟ್ರಿಕ್​ ಟನ್ ಉತ್ಪನ್ನಕೊಳ್ಳಲು ತೀರ್ಮಾನ ಮಾಡಲಾಗಿದೆ. ಅದರಲ್ಲಿ 6 ಲಕ್ಷ ಮೆಟ್ರಿಕ್ ಟನ್​ ರಾಗಿ ಖರೀದಿಸಲು ತೀರ್ಮಾನ ಮಾಡಲಾಗಿದೆ. ಎಕರೆಗೆ 10 ಕ್ವಿಂಟಾಲ್ ಗರಿಷ್ಟ 50 ಕ್ವಿಂಟಲ್ ಖರೀದಿ ಮಾಡಲಾಗುವುದು. ಕ್ವಿಂಟಾಲ್​ಗೆ 4886 ರೂಪಾಯಿಗೆ ಖರೀದಿ ಮಾಡಲಾಗುವುದು ಎಂದರು.

ಇನ್ನು ಸೆಪ್ಟೆಂಬರ್​ನಿಂದ ರಿಜಿಸ್ಟ್ರೇಷನ್ ಆರಂಭವಾಗಲಿದೆ. 3 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧಾರ ಮಾಡಲಾಗಿದೆ. ಕ್ವಿಂಟಾಲ್​ಗೆ 2369 ರೂಪಾಯಿಗೆ ಖರೀದಿ ಮಾಡ್ತೀವಿ. ಪ್ರತಿ ರೈತರಿಂದ ಗರಿಷ್ಠ 25 ಕ್ಷಿಂಟಾಲ್ ಖರೀದಿ ಮಾಡಲಾಗುವುದು. ಹಾಗೆಯೇ 3 ಲಕ್ಷ ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿಗೆ ನಿರ್ಧಾರ ಮಾಡಲಾಗಿದೆ. ಗರಿಷ್ಟ ಒಬ್ಬ ರೈತರಿಂದ 150 ಕ್ವಿಂಟಲ್ ಖರೀದಿ ಮಾಡಲಾಗುವುದು. ಪ್ರತಿ ಕ್ವಿಂಟಲ್​​ಗೆ 3669 ರೂಪಾಯಿಯಂತೆ ಖರೀದಿಸಲಾಗುವುದು.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಹುಲಿ ಅಸಹಜ ಸಾವು; 7 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆ

ಹಾಗೆಯೇ ಸಿರಿಧಾನ್ಯವನ್ನೂ ಸರ್ಕಾರ ಖರೀದಿ ಮಾಡಲಿದೆ. ನವಣೆ, ಸಾಮೆ, ಹಾರಕ ಮುಂದಾದ ಸಿರಧಾನ್ಯ ಖರೀದಿ ಆಗಲಿದೆ. ಕ್ವಿಂಟಾಲ್​ಗೆ 4886 ರೂಪಾಯಿ ಬೆಂಬಲ ಬೆಲೆ ನೀಡಲಾಗುವುದು. ಇದಕ್ಕೆ 114 ರೂಪಾಯಿ ಉತ್ತೇಜನ ಮೊತ್ತ ಸೇರಿಸಿ ಒಟ್ಟು 5 ಸಾವಿರ ಕೊಡಲಾಗುತ್ತದೆ ಎಂದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Govt CM SIDDARAMAIAH N Cheluvarayaswamy ರೈತರಿಗೆ ಸಿಹಿ ಸುದ್ದಿ
Advertisment