/newsfirstlive-kannada/media/media_files/2025/11/07/farmers-protest-2025-11-07-18-31-30.jpg)
ರಾಜ್ಯದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬುಗೆ 3,300 ರೂಪಾಯಿ ನೀಡಲು ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರಣಿ ಸಭೆಗಳ ಬಳಿಕ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಸರ್ಕಾರದ ನಿರ್ಧಾರ ಬೆನ್ನಲ್ಲೇ ರೈತ ಮುಖಂಡ ಚುನ್ನಪ್ಪ ಪೂಜಾರಿ ನ್ಯೂಸ್​ಫಸ್ಟ್​​ಗೆ ಪ್ರತಿಕ್ರಿಯಿಸಿದರು. ಸರ್ಕಾರದಿಂದ 3300ರೂ ಬೆಲೆ ಘೋಷಣೆಯಾಗಿದೆ. ನಾಳೆ 10 ಗಂಟೆಗೆ ರೈತ ಮುಖಂಡರ ಸಭೆ ಕರೆದು ತೀರ್ಮಾನ ಮಾಡ್ತೀವಿ. ಸರ್ಕಾರ ನಿರ್ಧಾರವನ್ನು ನಾನೇ ಒಬ್ಬನೇ ತೀರ್ಮಾನ ಮಾಡಲು ಆಗಲ್ಲ. ಬೆಳಗಾವಿ, ಬಾಗಲಕೋಟೆ ಮುಖಂಡರ ಸಭೆ ಮಾಡ್ತಿವಿ. ಗುರ್ಲಾಪುರದ ಹೋರಾಟದ ವೇದಿಕೆಯಲ್ಲಿ ತೀರ್ಮಾನ ಮಾಡ್ತೀವಿ. ನಾವೇ ಚರ್ಚೆ ಮಾಡಿ ಸರ್ಕಾರಕ್ಕೆ ಒಂದು ಸಂದೇಶ ಕೊಡ್ತಿವಿ ಎಂದಿದ್ದಾರೆ.
ಇದನ್ನೂ ಓದಿ: BREAKING NEWS : ಪ್ರತಿ ಟನ್ ಕಬ್ಬುಗೆ 3,300 ರೂಪಾಯಿ ಬೆಲೆ ನೀಡಲು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ: ರೈತರು ಒಪ್ಪುತ್ತಾರಾ?
/filters:format(webp)/newsfirstlive-kannada/media/media_files/2025/11/07/sugar-cane-farmers-cm-meeting-successful02-2025-11-07-18-17-01.jpg)
ಇನ್ನು, ಬೆಳಗಾವಿ ಜಿಲ್ಲೆಯ ಮೂಡಲಗಿ ಗ್ರಾಮದಲ್ಲಿ ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ನಡೆಯುತ್ತಿತ್ತು. ಸರ್ಕಾರದ ಘೋಷಣೆ ಬೆನ್ನಲ್ಲೇ ಪ್ರತಿಭಟನೆ ಅಂತ್ಯಗೊಂಡಿದೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಬೆನ್ನಲ್ಲೇ, ರೈತರು ಕುಣಿದು ಕುಪ್ಪಳಿಸಿದ್ದಾರೆ. ಸರ್ಕಾರ 3,300 ಬೆಂಬಲ ಬೆಲೆ ನೀಡಿರೋರು ನಮಗೆ ಖುಷಿ ತಂದಿದೆ ಎಂದು ಶಶಿಕಾಂತ ಪಡಸಲಗಿ ಹೇಳಿದ್ದಾರೆ.
ಪ್ರತಿ ಟನ್ ಕಬ್ಬುಗೆ 3,300 ರೂಪಾಯಿ ಬೆಲೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ. ಸಿಎಂ ತೀರ್ಮಾನವನ್ನು ಪ್ರತಿಭಟನೆ ನಡೆಸುತ್ತಿದ್ದ ರೈತರು ಸ್ವಾಗತಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಬೆಲೆ ಹೆಚ್ಚಳದ ತೀರ್ಮಾನವನ್ನು ರೈತರು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಪ್ರತಿ ಟನ್‌ಗೆ 3,300 ರೂಪಾಯಿ ಬೆಲೆ ನೀಡುವ ತೀರ್ಮಾನ ಸಂತಸ ತಂದಿದೆ ಎಂದು ರೈತ ಹೋರಾಟಗಾರ ಶಶಿಕಾಂತ್ ಪಡಸಲಗಿ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us