/newsfirstlive-kannada/media/post_attachments/wp-content/uploads/2023/07/school-1-2.jpg)
ಜ್ಞಾನ ದೇಗುಲವಿದು.. ಕೈ ಮುಗಿದು ಒಳಗೆ ಬಾ.. ಇದು ಪ್ರತಿ ಸರ್ಕಾರಿ ಶಾಲೆಗಳ ಎದುರು ಕಂಡು ಬರುವ ನಾಮಫಲಕ.. ಬಡಜನರ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿರೋ ಸರ್ಕಾರಿ ಶಾಲೆಗಳು ಈಗಾಗಲೇ ಸೊರಗುತ್ತಿವೆ.. ಮೂಲ ಸೌಕರ್ಯಗಳನ್ನು ಉನ್ನತೀಕರಿಸಿ ಮಕ್ಕಳು ಸರ್ಕಾರಿ ಶಾಲೆಯತ್ತ ಮುಖಮಾಡುವಂತೆ ಮಾಡುವ ಬದಲು ಸರ್ಕಾರ ಅದರ ಬೇರನ್ನೇ ಕಡಿಯುವ ಹೆಜ್ಜೆ ಇರಿಸಿದೆ..
ಇದನ್ನೂ ಓದಿ: ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್​ ಅಸ್ತು.. ಷರತ್ತುಬದ್ಧ ಅನುಮತಿ
ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಹತ್ತಿರದ ಪಬ್ಲಿಕ್ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ಗುಣಮಟ್ಟದ ಕಲಿಕೆ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಆಂದೋಲನಕ್ಕೆ ಕೈ ಹಾಕಿದೆ. ಒಂದಲ್ಲ.. ಎರಡಲ್ಲ ಬರೋಬ್ಬರಿ 25 ಸಾವಿರದ 683ಕ್ಕೂ ಹೆಚ್ಚು ಸಣ್ಣಪುಟ್ಟ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ನಿರ್ಧರಿಸಿದೆ.. ಕರ್ನಾಟಕ ಪಬ್ಲಿಕ್ ಸ್ಕೂಲುಗಳಿಗೆ ವಿಲೀನದ ಹೆಸರಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ..
ಸರ್ಕಾರಿ ಶಾಲೆಗಳಿಗೆ ಬೀಗ!?
- 5 ಕಿ.ಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಬೀಗ
- KPS ಶಾಲೆಗೆ ಸೇರ್ಪಡೆಗೆ ಸೂಚನೆ ನೀಡಿದ ಶಿಕ್ಷಣ ಇಲಾಖೆ
- 1-12ನೇ ಕ್ಲಾಸ್​ವರೆಗಿನ 1,200 ಮಕ್ಕಳಿಗೆ ಒಟ್ಟಿಗೆ ತರಗತಿ
- 80 ಮಕ್ಕಳಿರುವ ಶಾಲೆಗಳನ್ನ ಮುಚ್ಚಿ KPS ಶಾಲೆಗೆ ಸೇರ್ಪಡೆ
- KPS ಶಾಲೆಗೆ ಹೋಗಲು ಮಕ್ಕಳಿಗೆ ಸರ್ಕಾರವೇ ಬಸ್ ವ್ಯವಸ್ಥೆ
- ರಾಜ್ಯದಲ್ಲಿ 46,000 ಸರ್ಕಾರಿ ಶಾಲೆಗಳು, 309 KPS ಶಾಲೆಗಳಿವೆ
- ಕಲ್ಯಾಣ ಕರ್ನಾಟಕ 200, ಉಳಿದೆಡೆ 500 KPSಗಳಿಗೆ ಸೇರ್ಪಡೆ
- 25 ಸಾವಿರ ಶಾಲೆಗಳಲ್ಲಿ 474 ಶಾಲೆಗಳನ್ನೇ ಉನ್ನತೀಕರಿಸಿ KPS
ಸರ್ಕಾರದ ಕೆಪಿಎಸ್ ಪ್ರಯೋಗಕ್ಕೆ ಭಾರಿ ವಿರೋಧ!
25 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.. ಬಡ ಹಾಗೂ ಕೂಲಿ ಕಾರ್ಮಿಕ ಮಕ್ಕಳ ಶಿಕ್ಷಣದ ಹಕ್ಕು ಕಸಿದು ಕೊಂಡಂತಾಗುತ್ತೆ ಅಂತ ಶಿಕ್ಷಣ ಹಕ್ಕು ಸಮನ್ವಯ ಸಮಿತಿ ಸದಸ್ಯ ಲೋಕೇಶ್ ತಾಳಿಕಟ್ಟೆ ಕಳವಳ ಹೊರಹಾಕಿದ್ದಾರೆ.. ಹಳ್ಳಿ ಶಾಲೆಗಳು ಬಂದ್ ಆದ್ರೆ ಮಕ್ಕಳು ಶಾಲೆ ಬಿಡುವ ಸಾಧ್ಯತೆ ಹೆಚ್ಚು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಭಾರೀ ಮುಖಭಂಗ, ತಮಿಳುನಾಡು ಅರ್ಜಿ ತಿರಸ್ಕೃತ
ಒಟ್ಟಾರೆ 25 ಸಾವಿರ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿದ್ದು ರಾಜ್ಯದ ಶೇ. 60ರಷ್ಟು ಸರ್ಕಾರಿ ಶಾಲೆಗಳು ಕಣ್ಮರೆಯಾಗಲಿವೆ.. ಸರ್ಕಾರದ ಈ ನಿರ್ಧಾರ ಯಾವ ರೀತಿಯ ಪರಿಣಾಮ ಬೀರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us