/newsfirstlive-kannada/media/media_files/2025/09/17/kolar-wife-and-mother-in-law-2025-09-17-08-00-15.jpg)
ಕೋಲಾರ: ಅಕ್ರಮ ಸಂಬಂಧ ಬಯಲಾಯ್ತು ಎಂದು ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಕೆಯನ್ನ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ತುಮಲಪಲ್ಲಿಯಲ್ಲಿ ಘಟನೆ ನಡೆದಿದೆ.
ಅತ್ತೆಯ ಕೊಲೆಗೆ ಯತ್ನಿಸಿದ ರೇಖಾ ಮತ್ತು ಆಕೆಯ ಪ್ರಿಯಕರ ಶಶಿಕುಮಾರ್ ಇಬ್ಬರು ಈಗ ಅಂದರ್ ಆಗಿದ್ದಾರೆ. ಆಂಧ್ರ ಪ್ರದೇಶ ಮೂಲದ ರೇಖಾ 7 ವರ್ಷಗಳ ಹಿಂದೆ ಮಂಜುನಾಥ್ ರೆಡ್ಡಿ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದಳು. ಮದುವೆ ಬಳಿಕ ಅದೇ ಗ್ರಾಮದ ಶಶಿಕುಮಾರ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು.
ಇದನ್ನೂ ಓದಿ:ಪ್ರೇಮಿ ಜೊತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ ಹೆಂಡತಿ.. ಕೃತ್ಯದ ಹಿಂದಿದೆ ಭಯಾನಕ ಕಾರಣ..!
ಈ ವಿಚಾರ ಅತ್ತೆ ರೇಣುಕಮ್ಮರಿಗೆ ತಿಳಿದಿದೆ. ಮೊಬೈಲ್ನಲ್ಲಿ ಪ್ರಿಯಕರನೊಂದಿಗೆ ಮಾತಾಡುವುದನ್ನು ಕಂಡು ಮೋಬೈಲ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡ ರೇಖಾ, ಪ್ರಿಯಕರನ ಜೊತೆಗೂಡಿ ರೇಣುಕಮ್ಮರ ಮೇಲೆ ಮಾರಣಾಂತಿಕೆ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಮ್ಮರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಬ್ಬರೂ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಮತ್ತು ರಾಯಲ್ ಪಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:SBI ಬ್ಯಾಂಕ್ನ ಸಿಬ್ಬಂದಿ ಕೈಕಾಲು ಕಟ್ಟಿ ದರೋಡೆ.. 1 ಕೋಟಿ ನಗದು, 13 ಕೆಜಿ ಚಿನ್ನಾಭರಣ ದೋಚಿ ಪರಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ