/newsfirstlive-kannada/media/media_files/2025/09/17/wife-and-hasband-2025-09-17-07-40-08.jpg)
ಇತ್ತೀಚೆಗೆ ಪತಿ-ಪತ್ನಿ ಮತ್ತು ಪರಸಂಗದ ಕಹಾನಿಗಳು ಹೆಚ್ಚಾಗ್ತಿವೆ. ಅದರಲ್ಲೂ ಪತ್ನಿ, ಪತಿ ಹಾಗೂ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗುವ ಅಥವಾ ಪತಿಯನ್ನೇ ಮುಗಿಸುವ ಪ್ರಸಂಗಗಳು ಅಧಿಕವಾಗಿವೆ. ಇಲ್ಲೂ ಅದೇ ಆಗಿದೆ.
ಬೈಕ್‌ನಲ್ಲಿ ಪ್ರೇಮಿ ಜೊತೆ ಗಂಡನ ಮೃತದೇಹ ಕೊಂಡೊಯ್ದ ಪತ್ನಿ
ಹೆಸರು ನೇಹಾ, ಈಕೆಯ ಪತಿ ಹೆಸರು ನಾಗೇಶ್ವರ ರೌನಿಯಾರ್ ಹಾಗೂ ಪ್ರಿಯಕರ ಹೆಸರು ಜಿತೇಂದ್ರ. ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ಪತ್ನಿಯೇ ತನ್ನ ಪ್ರಿಯಕರನ ಸಹಕಾರದೊಂದಿಗೆ ಪತಿಗೆ ಚಟ್ಟ ಕಟ್ಟಿದ್ದಾಳೆ. ಕೊನೆಗೆ ಅಪಘಾತದಂತೆ ಬಿಂಬಿಸಲು ಮನೆಯಿಂದ 25 ಕಿಲೋಮೀಟರ್ ದೂರದ ಸಿಂಧುರಿಯಾ ನಿಚ್ಲೌಲ್ ರಸ್ತೆಯಲ್ಲಿ ಎಸೆದಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ನಾಗೇಶ್ವರ ಮೃತದೇಹವನ್ನು ರಸ್ತೆಯಲ್ಲಿ ನೋಡಿದ್ದ ಸ್ಥಳೀಯರು ಬೆಚ್ಚಿ ಬಿದ್ದಿದ್ರು. ಬಳಿಕ ನಾಗೇಶ್ವರ್ ತಂದೆ ಕೇಶವ್ ರಾಜ್ ಪೊಲೀಸರಿಗೆ ದೂರು ನೀಡಿದಾಗ ಪತ್ನಿಯೇ ನಾಗೇಶ್ವರನನ್ನು ಮುಗಿಸಿದ್ದು ತನಿಖೆಯಲ್ಲಿ ಬಯಲಾಗಿದ್ದು ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ ಮೃತದೇಹ ಪತ್ತೆಯಾದಾಗ ಎಲ್ಲರ ದೃಷ್ಟಿ ನೆಟ್ಟಿದ್ದೇ ನೇಹಾ ಮತ್ತು ಆಕೆಯ ಪ್ರಿಯಕರ ಜಿತೇಂದ್ರ ಮೇಲೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಂತಕರು ಬಾಯ್ವಿಟ್ಟಿದ್ದಾರೆ.
ಇದನ್ನೂ ಓದಿ:300ಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 35,400 ರೂಪಾಯಿ ಸಂಬಳ
ಕೈ-ಕಾಲು ಕಟ್ಟಿ, ಕತ್ತು ಹಿಸುಕಿ ಕೊಂದ ರಾಕ್ಷಸಿ!
ಅಂದಾಗೆ ನಾಗೇಶ್ವರ್ ಆಗಾಗ ಕೆಲಸಕ್ಕಾಗಿ ನೇಪಾಳಕ್ಕೆ ಭೇಟಿ ನೀಡುತ್ತಿದ್ದ ವೇಳೆ ಅಲ್ಲೇ ನೇಹಾಳ ಪರಿಚಯವಾಗಿ 6 ವರ್ಷಗಳ ಹಿಂದೆ ವಿವಾಹವಾಗಿದ್ರು. ಅವರಿಗೆ ಆದ್ವಿಕ್ ಎಂಬ ಮಗನಿದ್ದಾನೆ. ಆದ್ರೆ ವಿಚಾರಣೆಯ ಸಮಯದಲ್ಲಿ, ನೇಹಾ ತನ್ನ ಊರಿನ ಸಮೀಪದ ಜಿತೇಂದ್ರ ಜೊತೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದನ್ನು ಬಾಯ್ಬಿಟ್ಟಿದ್ದಾಳೆ. ನಾಗೇಶ್ವರ್ ಇದಕ್ಕೆ ವಿರೋಧಿಸಿದಾಗ ನೇಹಾ ಮಗನೊಂದಿಗೆ ಮಹಾರಾಜ್‌ಗಂಜ್ ನಗರದ ಬಾಡಿಗೆ ಮನೆಯಲ್ಲಿ ಜಿತೇಂದ್ರ ಜೊತೆ ವಾಸಿಸಲು ಪ್ರಾರಂಭಿಸಿದಳು.
ಇದನ್ನೂ ಓದಿ:2009ರಲ್ಲಿ ತೀರ್ಥಯಾತ್ರೆ.. ನಾಪತ್ತೆ ಆಗಿದ್ದ ತಂದೆನ ಹುಡುಕಿಕೊಟ್ಟ ಸೋಷಿಯಲ್ ಮೀಡಿಯಾ.. ಹೇಗೆ?
ನಾಗೇಶ್ವರ್ ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ರೂ ಕೇಳಿರಲಿಲ್ಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ ಏನಂದ್ರೆ ಪತಿ ನಾಗೇಶ್ವರ್, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಪತ್ನಿಯನ್ನೇ ಹೊಲಸು ದಂಧೆಗಿಳಿಸಿದ್ದ. ಅಲ್ಲದೇ ಹಲವು ಬಾರಿ ಹಿಂಸೆ ಕೂಡ ನೀಡ್ತಿದ್ದ. ಇದರಿಂದ ಕೋಪಿಸಿಕೊಂಡಿದ್ದ ನೇಹಾ ಸಾಕಷ್ಟು ಬಾರಿ ಜಗಳ ಮಾಡಿ ಕೊನೆಗೆ ಮಗನನ್ನು ಕರೆದುಕೊಂಡು ಪ್ರೇಮಿಯ ಜೊತೆ ವಾಸಿಸೋಕೆ ಶುರು ಮಾಡಿದ್ಲು. ಇಷ್ಟಾದ್ರೂ ಪತಿ ಆಗಾಗ್ಗೆ ಕರೆ ಮಾಡಿ ಪತ್ನಿಗೆ ಹಿಂಸೆ ನೀಡ್ತಿದ್ದ. ಇವನಿಂದ ಶಾಶ್ವತವಾಗಿ ಬಿಡುಗಡೆ ಪಡೆಯಲು ನಾಗೇಶ್ವರ್ಗೆ ಕರೆ ಮಾಡಿ ಕರೆಸಿ ಮದ್ಯಪಾನ ಮಾಡಿಸಿ ಕೊ* ಮಾಡಿದ್ದಾರೆ. ನೇಹಾನೇ ದುಪಟ್ಟಾದಿಂದ ಕಾಲು ಕಟ್ಟಿ, ಕತ್ತು ಹಿಸುಕಿದ್ರೆ ಜಿತೇಂದ್ರ ಹೊಡೆದು ಬಡಿದು ಕೊಂದಿದ್ದಾರೆ. ಬಳಿಕ ನಾಗೇಶ್ವರನ ಬಟ್ಟೆಗಳನ್ನು ತೆಗೆದು ಸ್ನಾನ ಮಾಡಿಸಿ, ಶವವನ್ನು ಬೈಕ್‌ನಲ್ಲಿ ಕೂರಿಸಿ ಘಟನಾ ಸ್ಥಳದಿಂದ 25 ಕಿ.ಮೀ ದೂರದಲ್ಲಿ ವಿಲೇವಾರಿ ಮಾಡಿದ್ದಾರೆ.
ಒಟ್ಟಾರೆ ಪಾಪಿ ಪತಿ ಹಣದಾಸೆಗೆ ಬಿದ್ದು ಮಾಡಬಾರದ ಕೆಲಸ ಮಾಡಿದ್ರೆ ಪತ್ನಿ ಅವನಿಂದ ಮುಕ್ತಿ ಪಡೆಯಲು ಮತ್ತೊಬ್ಬನ ಸಹವಾಸ ಮಾಡಿದ್ದಾಳೆ. ಬಳಿಕ ಪತಿಯಿಂದ ಡಿವೋರ್ಸ್ಗೆ ಅರ್ಜಿ ಹಾಕಿದ್ದು ಅಲ್ಲದೇ ಸಾಯಿಸಿಯೇ ಬಿಟ್ಟಿದ್ದಾಳೆ. ಮಗ ಮಾತ್ರ ಅಮ್ಮನೂ ಇಲ್ಲದೇ ಅಪ್ಪನೂ ಇಲ್ಲದೇ ಅನಾಥವಾಗಿದ್ದಾನೆ.
ಇದನ್ನೂ ಓದಿ:SBI ಬ್ಯಾಂಕ್ನ ಸಿಬ್ಬಂದಿ ಕೈಕಾಲು ಕಟ್ಟಿ ದರೋಡೆ.. 1 ಕೋಟಿ ನಗದು, 13 ಕೆಜಿ ಚಿನ್ನಾಭರಣ ದೋಚಿ ಪರಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ