/newsfirstlive-kannada/media/media_files/2025/09/10/mandya-bjp-leaders-2025-09-10-15-09-56.jpg)
ಮದ್ದೂರು ಪಟ್ಟಣದಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಈ ಅದ್ದೂರಿ ಸಾರ್ವಜನಿಕ ಸಭೆ ಹಾಗೂ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಸಾರ್ವಜನಿಕ ಸಭೆಯಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.
ಮದ್ದೂರು ವಡೆಗೆ ಮದ್ದೂರು ಫೇಮಸ್ -ಅಶೋಕ್
ಮೊನ್ನೆ ಹೆಣ್ಮಗಳು ರಸ್ತೆಯಲ್ಲಿ ಕುಳಿತು ಇದು ಮಿನಿ ಪಾಕಿಸ್ತಾನ್ ಅಂತ ಹೇಳಿದ್ರು. ಆ ಕಾರಣಕ್ಕೆ ನಾವು ನಿಮಗೆ ಧೈರ್ಯ ಹೇಳಲು ಬಂದಿದ್ದೇವೆ. ಮದ್ದೂರು ವಡೆಗೆ ಮದ್ದೂರು ಫೇಮಸ್. ಸಿದ್ದರಾಮಯ್ಯ, ಡಿಕೆಶಿ ಈ ಥರ ಮಾಡಿದ್ರೆ ನಿಮ್ಮ ತಲೆ ಮೇಲೆ ಜನ ತಟ್ತಾರೆ. ಮಹಮ್ಮದ್ ಘಜ್ನಿ, ಘೋರಿ ದಾಳಿ ನೋಡಿದ್ದೇವೆ. ಸಿದ್ದರಾಮಯ್ಯ ಬೇಕಿದ್ರೆ ಟೋಪಿ ಹಾಕಂಡು ಓಡಾಡಲಿ. ಏ ಟೋಪಿ ರಾಮಯ್ಯ ಮಂಡ್ಯ ಜನರಿಗೆ ಟೋಪಿ ಹಾಕಬೇಡಿ. ಮಂಡ್ಯದವರು ನಿಮಗೆ ಪಾಠ ಕಲಿಸ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಸೀನಿಯರ್ ಮೇಲೆ ವ್ಯಾಮೋಹ.. 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ..?
ಒಂದು ಧರ್ಮಸ್ಥಳ ಪ್ರಕರಣ ಆಯ್ತು. ಬುರುಡೆ ಬರುಡೆ ಅಂದ್ರು ಬುರುಡೆ ಸಿಕ್ತಾ? ಅಯ್ಯಪ್ಪಸ್ವಾಮಿ ದೇವರೇ ಅಲ್ಲ ಅಂದ್ರು. ಈಗ ಚಾಮುಂಡಿ ತಾಯಿ ವಿಚಾರಕ್ಕೆ ಬಂದಿದ್ದಾರೆ. ಚಾಮುಂಡಿ ಹಿಂದುಗಳದ್ದು. ಡಿಕೆಶಿಗೆ ಈ ಧ್ವನಿ ಕೇಳಿಸಬೇಕು. ಮಂಡ್ಯವನ್ನು ಮಿನಿ ಪಾಕಿಸ್ತಾನ ಮಾಡಲು ಬಿಡಲ್ಲ ಎಂದು ಗುಡುಗಿದರು.
ನಮ್ಮ ಸ್ವಾತಂತ್ರ್ಯಕ್ಕೆ ಅಡಚಣೆ ಮಾಡುತ್ತಿದೆ -ಅಶ್ವಥ್ ನಾರಾಯಣ್
ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನ್ನಾಡಿ.. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಓಲೈಕೆ ರಾಜಕೀಯ ಮಾಡ್ತಿದೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಪೊಲೀಸ್ ಠಾಣೆಯನ್ನು ಸುಡಲು ಹೋದವರು ಈ ಮುಸ್ಲಿಮರು. ಇಂತವರ ಮೇಲೆ ಕೇಸ್ ದಾಖಲು ಮಾಡಲು ಹಿಂಜರಿಯುತ್ತಾರೆ. ಕೇಸ್ ಹಾಕಿದ ಮೇಲೆ ಹಿಂದೆ ತೆಗೆದುಕೊಳ್ತಾರೆ. ಇದು ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರ ಅಲ್ಲ. ಇದು ಜನ ವಿರೋಧಿ ಸರ್ಕಾರ. ನಾಗಮಂಗಲದಲ್ಲಿ ಹೋದ ವರ್ಷ ಗಲಾಟೆ ಮಾಡಿದ್ರು. ಕೆರಗೋಡಿನಲ್ಲಿ ಧ್ವಜ ಹಾರಿಸಲು ಬಿಡಲಿಲ್ಲ. ನಮ್ಮ ಸ್ವಾತಂತ್ರ್ಯಕ್ಕೆ ಅಡಚಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಂಡ್ಯದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಸಂಭ್ರಮ.. ಪೊಲೀಸರಿಂದ ಭದ್ರತೆ
ಕಲ್ಲು ತೂರಿದವರ ಮೇಲೆ ಕಾನೂನು ಕೇಸ್ ಹಾಕುವ ಬದಲು ನಾಟಕ ಆಡುತ್ತಿದೆ. ನೀವು ಅತ್ತಂಗೆ ಆಡು, ನಾವು ಹೊಡೆದ ಹಾಗೆ ಮಾಡ್ತೀವಿ ಅಂತಿದ್ದಾರೆ. ಈ ಸರ್ಕಾರ ದುಷ್ಕರ್ಮಿಗಳ ಮೇಲೆ ಗೂಂಡಾ ಆಕ್ಟ್ ಹಾಕುತ್ತಾರೆ. ಇದನ್ನು ಬಿಟ್ಟು ಬಿಜೆಪಿ, ಜೆಡಿಎಸ್ ನಾಯಕರನ್ನು ಕಿಡಿಗೇಡಿಗಳು ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನಕ್ಕೆ ನಾವು ಹೋಗಬೇಕಾ..? -ಸುಮಲತಾ
ಇನ್ನು ಸುಮಲತಾ ಅಂಬರೀಶ್ ಮಾತನಾಡಿ.. ಈ ಸರ್ಕಾರ ನಮ್ಮ ಜನರನ್ನ ತುಂಬಾ ಕೆಟ್ಟದಾಗಿ ನಡೆಸಿಕೊಳ್ತಿದೆ. ಈಗ ಬರುತ್ತಿರುವ ಒಂದಷ್ಟು ನೊಂದ ಅಭಿಮಾನಿಗಳು ನನಗೆ ಅಡ್ಡ ಬಂದು ಹೇಳಿದರು. ಅಕ್ಕಾ ಅಂಬರೀಶ್ ಅಣ್ಣ ಇರಬೇಕಾಗಿತ್ತು. ಅವರಿದ್ದರೆ ಇದೆಲ್ಲ ಆಗುತ್ತಿರಲಿಲ್ಲ ಎಂದರು. ನಮಗೆ ರಕ್ಷಣೆ ಇರಬೇಕು. ನಾಯಕತ್ವ ಸರಿ ಇದ್ದರೆ ಕಾನೂನು ಸುವ್ಯವಸ್ಥೆ ಸರಿ ಇರುತ್ತದೆ.
ಇದನ್ನೂ ಓದಿ:ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಆರಂಭ, ವಿಜಯೇಂದ್ರ ನೇತೃತ್ವದಲ್ಲಿ ಮೆರವಣಿಗೆ
ಎಲ್ಲಿ ನಾಯಕತ್ವ ಸರಿ ಇರಲ್ವೋ ಆಗ ಇಂಥ ಘಟನೆಗಳು ನಡೆಯುತ್ತವೆ. ಬಿಟ್ಟಿ ಭಾಗ್ಯಗಳಿಂದ ನಾವು ಏನು ಕಲಿತ್ವಿ. ಅದರ ಹಿಂದಿರುವ ದುರುದ್ದೇಶ ಏನು ಅನ್ನೋದು ಗೊತ್ತಾಗಿದೆ ಅಂತಾ ವಾಗ್ದಾಳಿ ನಡೆಸಿರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ನಡೆಸಿದ ಸುಮಲತಾ, ಮೋದಿಯನ್ನ ನೋಡಿಕೊಂಡು ಆಡಳಿತ ಮಾಡೋದ ಕಲಿಯಬೇಕು. ಜಗತ್ತಿನಲ್ಲೇ ಮೂರನೇ ಆರ್ಥಿಕ ದೇಶವನ್ನಾಗಿ ಮಾಡಿದ ಕೀರ್ತಿ ಅವರದ್ದು. ಎಲ್ಲೋ ಇದ್ದ ಭಾರತದ ಆರ್ಥಿಕತೆಯನ್ನ ಮೇಲಕ್ಕೆ ಕೊಂಡೊಯ್ದಿದ್ದಾರೆ. ಹಿಂದೆ ಕಾಶ್ಮೀದಲ್ಲಿ ಅಂದರೆ ನಮ್ಮದೇ ದೇಶದಲ್ಲಿ ಭಾರತದ ಧ್ವಜ ಹಾರಿಸುವಂತಹ ಪರಿಸ್ಥಿತಿ ಇರಲಿಲ್ಲ. ಮೋದಿ ಆಡಳಿತಕ್ಕೆ ಬಂದ ಮೇಲೆ ದೇಶದ ಯಾವುದೇ ಮೂಲೆಯಲ್ಲೂ ದೇಶದ ಧ್ವಜ ಹಾರಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಆದರೆ ನಮ್ಮ ರಾಜ್ಯದಲ್ಲಿ, ನಮ್ಮ ರಾಜ್ಯದ ನಮ್ಮ ಮದ್ದೂರಿನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ನಮ್ಮ ನಾಗಮಂಗಲದಲ್ಲಿ ಹಾಗೆ ಯಾಕೆ ಇಲ್ಲ. ಇಲ್ಲಿ ತಪ್ಪಿಸ್ಥರನ್ನ ತಪ್ಪಿಸುವ ಕೆಲಸ ಆಗ್ತಿದೆ. ಅಮಾಯಕರನ್ನು ಶಿಕ್ಷಿಸುವ ಪ್ರಯತ್ನ ಆಗುತ್ತಿದೆ. ನಮ್ಮ ಹಬ್ಬಗಳ, ಆಚರಣೆ, ನಮ್ಮ ಭಕ್ತಿ, ನಮ್ಮ ಭಾವನೆಗೆ ಅಡ್ಡಿಪಡಿಸುವ ಕೆಲಸ ಆಗ್ತಿದೆ. ನಾವು ಪಾಕಿಸ್ತಾನಕ್ಕೆ ಹೋಗಬೇಕಾ? ಯಾರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಪ್ರಶ್ನೆ ಮಾಡಿದರು.
ವಿಜಯೇಂದ್ರ ಆಕ್ರೋಶ
ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲಾಗ್ತಿದೆ. ಇದರ ಹೊಣೆ ಸರ್ಕಾರ ಹೊರಬೇಕು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು ಹಿಂದೂಗಳು ನೆಮ್ಮದಿಯಿಂದ ಗಣೇಶ ಹಬ್ಬ ಮಾಡೋಕಾಗ್ತಿಲ್ಲ. ಯಾವ ಸ್ಥಿತಿಗೆ ಹಿಂದೂಗಳನ್ನ ಈ ಸರ್ಕಾರ ತಳ್ಳಿರಬಹುದು.. ಭದ್ರಾವತಿ ಶಾಸಕರು ಮುಸ್ಲಿಂ ಆಗಿ ಹುಟ್ಟುವ ಮಾತಾಡಿದ್ದಾರೆ ಮುಂದಿನ ಜನ್ಮದ ಮಾತೇಕೆ. ಸಂಗಮೇಶ್ ಅವರು ಈಗಲೇ ಮತಾಂತರ ಆಗಲಿ ಇವರ ಹೇಳಿಕೆಗಳು ಹಿಂದೂಗಳಿಗೆ ವಿರೋಧ ಉಂಟು ಮಾಡಲು ಪೂರಕ ವಾತಾವರಣ ನಿರ್ಮಿಸಿದೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ ವಿಜಯೇಂದ್ರ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ