ಸೀನಿಯರ್ ಮೇಲೆ ವ್ಯಾಮೋಹ.. 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ..?

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.

author-image
Ganesh Kerekuli
belagavi wife case
Advertisment

ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.

ಚೈತಾಲಿ ಗಂಡನ ಸುಪಾರಿಗೆ ಬಲಿಯಾದ ಮಹಿಳೆ. ಪ್ರದೀಪ್ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಪ್ರದೀಪ್ ಸೇರಿ, ಸಾಥ್ ನೀಡಿದ್ದ ಇನ್ನಿಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. 

ಇದನ್ನೂ ಓದಿ:ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​.. ನಿಮ್ಮ ಸೇವೆಗಾಗಿ ಇವತ್ತಿನಿಂದ ಮತ್ತೊಂದು ಟ್ರೈನ್

belagavi wife case (1)

ಸೀನಿಯರ್ ಮೋಹ.. ಪತ್ನಿಗೆ ಚಟ್ಟ!

ಪತಿ ಪ್ರದೀಪ್ ಹಾಗೂ ಮೃತ ಚೈತಾಲಿ ಉಗಾರ್ ಬಿ.ಕೆ.ಗ್ರಾಮದವರು. ಒಂದೇ ಗ್ರಾಮದವರಾದ ಇವರು ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಸಾಕ್ಷಿಯಾಗಿ ಆರು ತಿಂಗಳ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದುಬಂದಿದೆ. 

ಆಗಿದ್ದೇನು..?

ಕಾನೂನು ಪದವಿ ಪಡೆದಿದ್ದ ಪ್ರದೀಪ್ ಕಿರಣಗಿ, ಕಾಗವಾಡ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಪ್ರೇಮ-ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಪ್ರದೀಪ್​​ಗೆ ಲವ್ ಶುರುವಾಗಿತ್ತಂತೆ. ಸೀನಿಯರ್ ಲೇಡಿಯನ್ನ ಬುಟ್ಟಿಗೆ ಹಾಕಿಕೊಳ್ಳಲು ತನಗೆ ಮದುವೆಯೇ ಆಗಿಲ್ಲ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಜೂನಿಯರ್ ಪ್ರದೀಪ್ ಮಾತು ನಂಬಿದ್ದ ಸೀನಿಯರ್​, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವಾಗ ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ:ಪಾ*ಸನ್ ಕೊಡಿ ಎಂದಿದ್ದ ದರ್ಶನ್​ ಬಗ್ಗೆ ನಟ ರಾಜವರ್ಧನ್ ಹೇಳಿದ ಒಳ್ಳೆಯ ಮಾತುಗಳು ಇಲ್ಲಿವೆ

belagavi wife case (2)

ಮಾಡಿದ್ದೇನು..? 

ಪ್ರದೀಪ್ ತನ್ನ ಹೆಂಡತಿಯನ್ನ ಮುಗಿಸಲು ಸ್ನೇಹಿತನ ಸಹಾಯ ಪಡೆದಿದ್ದಾನೆ. ಸ್ನೇಹಿತ ರಾಜೇಂದ್ರ ಜೊತೆ ಮಾತುಕತೆ ನಡೆಸಿ 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ. ಅಂತೆಯೇ ಚೈತಾಲಿಯನ್ನ ಮುಗಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅದು ಫೇಲ್ ಆಗಿತ್ತು. ಮೂರನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿಯ ಜೀವ ತೆಗೆದಿದ್ದರು. 

ಮುಂದೆ ಏನಾಯ್ತು..?

ಆರೋಪಿಗಳಿಬ್ಬರು ಹಾಗೂ ಪ್ರದೀಪ್ ಸೇರಿ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರವೇ ಆಕೆಯನ್ನು ಮುಗಿಸಿ, ಮೃತದೇಹವನ್ನು ಕೆಲ ಹೊತ್ತು ರಸ್ತೆಗೆ ತಂದು ಕಾಲ ಕಳೆದಿದ್ದಾರೆ. ಅದಾದ ನಂತರ ಆರೋಪಿ ಪ್ರದೀಪ್ ಪೊಲೀಸರಿಗೆ ಖುದ್ದು ಕರೆ ಮಾಡಿದ್ದಾನೆ. ಸೆಪ್ಟೆಂಬರ್ 7 ರಂದು ರಾತ್ರಿ 9.30ಕ್ಕೆ ಕರೆ ಮಾಡಿದ ಆತ, ಸರ್​ ರಸ್ತೆಯಲ್ಲಿ ಹೋಗುವಾಗ ಅಪಘಾತ ಆಗಿದೆ. ನನ್ನದೇ ಕಾರಿನಲ್ಲಿ ಹೋಗುವಾಗ ಅಪಘಾತ ಆಗಿದೆ. ಹೆಂಡತಿಗೆ ಗಂಭೀರ ಪೆಟ್ಟು ಬಿದ್ದಿದೆ. ನನಗೂ ಗಾಯವಾಗಿದೆ. ಪತ್ನಿ ಚೈತಾಲಿಯನ್ನು ಕಾಗವಾಡ ತಾಲೂಕು ಆಸ್ಪತ್ರೆಗೆ ದಾಖಲಿಸುತ್ತಿರೋದಾಗಿ ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾಗವಾಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 

ಇದನ್ನೂ ಓದಿ:ಮದ್ದೂರು ಗಣೇಶೋತ್ಸವ ಕೇಸ್​; ವಿಧ್ವಂಸಕ ಸಂಚು ರೂಪಿಸಿದ್ದ ಕ್ರೂರಿ.. ಕಿಡಿ ಹಿಂದಿದ್ದಾನೆ ಮಾಸ್ಟರ್​​ ಮೈಂಡ್​!

belagavi wife case (3)

ಸಿಕ್ಕಿಬಿದ್ದಿದ್ದು ಹೇಗೆ..? 

ಪೊಲೀಸರು ಆಸ್ಪತ್ರೆಗೆ ಹೋದಾಗ ಚೈತಾಲಿ ಅನ್ನೋರು ಯಾರೂ ಇರಲಿಲ್ಲ. ಕೂಡಲೇ ಪೊಲೀಸರು ಪ್ರದೀಪ್​ಗೆ ಕರೆ ಮಾಡಿದ್ದಾರೆ. ಆಗ ಕಾಗವಾಡ ಬದಲು ಮಹಾರಾಷ್ಟ್ರದ ಮೀರಜ್‌‌ ಆಸ್ಪತ್ರೆಗೆ ಚೈತಾಲಿ ‌ಕರೆತಂದಿರುವುದಾಗಿ ಪೊಲೀಸರಿಗೆ ಪ್ರದೀಪ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ‌ಪ್ರದೀಪ್ ನಿವಾಸಕ್ಕೆ  ಕಾಗವಾಡ ಪೊಲೀಸರು ಭೇಟಿ ನೀಡಿದ್ದಾರೆ. ಆಗ ಪ್ರದೀಪ್ ನಿವಾಸದ ಎದುರು ಕಾರು ನಿಂತಿತ್ತು. ಇದರಿಂದ ಪ್ರದೀಪ್ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. 

ಇದರ ನಡುವೆ ಪ್ರದೀಪ್ ಮೀರಜ್ ಪೊಲೀಸರನ್ನ ಭೇಟಿಯಾಗಿ, ಪತ್ನಿ ಅಪಘಾತದಿಂದ ಮೃತರಾಗಿದ್ದು ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆಗ ಮೀರಜ್ ಪೊಲೀಸರು ‌ಕಾಗವಾಡ ಠಾಣೆಯ ‌ಪೊಲೀಸರನ್ನ ಸಂಪರ್ಕಿಸುತ್ತಾರೆ. ಆಗ ನಾವು ಮೀರಜ್‌ಗೆ ಬರ್ತಿದ್ದೇವೆ, ಯಾವುದೇ ‌ದೂರು ದಾಖಲಿಸಿಕೊಳ್ಳದಂತೆ ಮನವಿ ಮಾಡುತ್ತಾರೆ. 

ಮೀರಜ್‌ಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರದೀಪ್​ನ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಪ್ರದೀಪ್​​ಗೆ ಅಪಘಾತದಿಂದ ಯಾವುದೇ ಗಾಯ ಆಗದಿರೋದು ಗೊತ್ತಾಗಿದೆ. ಚೈತಾಲಿ ‌ಮೃತದೇಹ ನೋಡಿದ ಪೊಲೀಸರು ಇದು ಅಪಘಾತವಲ್ಲ, ಕೊ*ಲೆ ಎಂಬುದನ್ನ ಮೇಲ್ನೋಟಕ್ಕೆ ಪತ್ತೆಹಚ್ಚಿಕೊಳ್ತಾರೆ. ತಕ್ಷಣವೇ ಪ್ರದೀಪ್​ನನ್ನ ‌ತೀವ್ರ ವಿಚಾರಣೆ ಮಾಡಿದಾಗ ಕೊ*ಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಸ್ಥಳ ಮಹಜರು ವೇಳೆ ಪ್ರಕರಣಕ್ಕೆ ಸಾಥ್ ನೀಡಿದವರ ಹೆಸರನ್ನೂ ಹೇಳಿದ್ದಾನೆ. ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಶಂಕೆಯಿದ್ದ, ಮೂವರ ಬಂಧನವಾಗಿದೆ. ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ಇದನ್ನೂ ಓದಿ:‘ರಚಿತಾ ರಾಮ್​​ಗೂ ನನಗೂ ಯಾವುದೇ ಸಂಪರ್ಕವಿಲ್ಲ..’ ಒಡವೆ ಗಿಫ್ಟ್​ ಬಗ್ಗೆ ಜಗ್ಗ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

women with lover and husband wife attempt to murder her husband husband cheating
Advertisment