/newsfirstlive-kannada/media/media_files/2025/09/10/mandya-ganesha-3-2025-09-10-11-52-39.jpg)
ಮಂಡ್ಯ: ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನಲೆ ಮದ್ದೂರಿನ ಬಿಜೆಪಿ ಕಚೇರಿ ಬಳಿಗೆ ಗಣೇಶ ಮೂರ್ತಿಗಳು ಆಗಮಿಸುತ್ತಿವೆ. ತಾಲೂಕಿನ ವಿವಿಧೆಡೆ ಪ್ರತಿಷ್ಠಾಪನೆಗೊಂಡಿರುವ ಗಣಪತಿ ಮೂರ್ತಿಗಳು ತಮಟೆ ವಾದ್ಯಗಳೊಂದಿಗೆ ಭರ್ಜರಿಯಾಗಿ ಎಂಟ್ರಿ ಕೊಡ್ತಿವೆ. ಗಣೇಶ ಮೂರ್ತಿಗಳು ಬರುತ್ತಿದ್ದಂತೆ ಡಿಜೆ ಹಾಕಿ ಸಂಭ್ರಮಿಸಿದ ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜೈ ಶ್ರೀರಾಮ್ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದನ್ನೂ ಓದಿ:ಸಿನೀಯರ್ ಮೇಲೆ ವ್ಯಾಮೋಹ.. 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ..?
ಬಿಜೆಪಿ ಸತ್ಯಶೋಧನ ಸಮಿತಿ ಎಂಟ್ರಿ..!
ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನಲೆ ಮದ್ದೂರಿಗೆ ಬಿಜೆಪಿ ಸತ್ಯಶೋಧನ ಸಮಿತಿ ಆಗಮಿಸಿದೆ. ಬಿಜೆಪಿ ವಕ್ತಾರ ನಾರಾಯಣಗೌಡ ನೇತೃತ್ವದ ಬಿಜೆಪಿ ಸತ್ಯಶೋಧನ ಸಮಿತಿ ಮದ್ದೂರಿಗೆ ಆಗಮಿಸಿದೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ವಕ್ತಾರ ವೆಂಕಟೇಶ್ ದೊಡ್ಡೇರಿ, ಸ್ಥಳೀಯ ಮುಖಂಡ ಸ್ವಾಮಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ನೇತೃತ್ವದಲ್ಲಿ ತಂಡ ಮದ್ದೂರಿಗೆ ಆಗಮಿಸಿದ್ದು, ಕಲ್ಲು ತೂರಾಟದಿಂದ ಗಾಯಗೊಂಡರ ಮನೆ ಹಾಗೂ ಲಾಠಿಚಾರ್ಜ್ ನಿಂದ ಗಾಯಗೊಂಡವರ ಮನೆಗೆ ಭೇಟಿ ನೀಡಲಿದೆ.
ಇದನ್ನೂ ಓದಿ:ಹೊರಟ್ಟಿ vs ಖಾದರ್.. ಇಬ್ಬರ ಮಧ್ಯೆ ಆಗಿದ್ದೇನು?
ವಿಜಯೇಂದ್ರ ಆಕ್ರೋಶ
ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲಾಗ್ತಿದೆ. ಇದರ ಹೊಣೆ ಸರ್ಕಾರ ಹೊರಬೇಕು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು ಹಿಂದೂಗಳು ನೆಮ್ಮದಿಯಿಂದ ಗಣೇಶ ಹಬ್ಬ ಮಾಡೋಕಾಗ್ತಿಲ್ಲ. ಯಾವ ಸ್ಥಿತಿಗೆ ಹಿಂದೂಗಳನ್ನ ಈ ಸರ್ಕಾರ ತಳ್ಳಿರಬಹುದು. ಭದ್ರಾವತಿ ಶಾಸಕರು ಮುಸ್ಲಿಂ ಆಗಿ ಹುಟ್ಟುವ ಮಾತಾಡಿದ್ದಾರೆ. ಮುಂದಿನ ಜನ್ಮದ ಮಾತೇಕೇ..? ಸಂಗಮೇಶ್ ಅವರು ಈಗಲೇ ಮತಾಂತರ ಆಗಲಿ ಇವರ ಹೇಳಿಕೆಗಳು ಹಿಂದೂಗಳಿಗೆ ವಿರೋಧ ಉಂಟು ಮಾಡಲು ಪೂರಕ ವಾತಾವರಣ ನಿರ್ಮಿಸಿದೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಬೀಸೋ ದೊಣ್ಣೆಯಿಂದ ದರ್ಶನ್ ಜಸ್ಟ್ ಮಿಸ್.. ಇವತ್ತು ಏನೆಲ್ಲ ಆಗುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ