/newsfirstlive-kannada/media/media_files/2025/10/02/abhimanyu-2025-10-02-15-03-03.jpg)
ಅರ್ಜುನನ ಬಳಿಕ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ವಿಶ್ವ ದರ್ಶನ ಮಾಡುವ ಸೌಭಾಗ್ಯ ಅಭಿಮನ್ಯುವಿಗೆ ಸಿಕ್ಕಿದೆ. ಅಂದಿನಿಂದ ಅಭಿಮನ್ಯು 5 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರುಗನ್ನು ಹೆಚ್ಚಿಸುತ್ತಾ ಬಂದಿದ್ದಾನೆ. ಇಂದು 6ನೇ ಬಾರಿಗೆ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಈತನ ಗಜ ಗಾಂಭೀರ್ಯ ಕಾಣಲು ವಿಶ್ವವೇ ಕಾದುಕುಳಿತಿದೆ. ಆದರೆ ಅದಕ್ಕೂ ಮುನ್ನ ಅಭಿಮನ್ಯು ಸಿಕ್ಕಿದ್ದೆಲ್ಲಿ? ಆತನ ಸಾಧನೆಗಳೇನೇನು? ತಿಳಿಯೋಣ ಬನ್ನಿ.
ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ
ಅಭಿಮನ್ಯುವನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಆ ಬಳಿಕ ಮತ್ತಿಗೋಡು ಶಿಬಿರದಲ್ಲಿ ಅಭಿಮನ್ಯುವನ್ನು ಪಳಗಿಸಲಾಯಿತು. ಸದ್ಯ ಅಭಿಮನ್ಯುವಿಗೆ 59 ವರ್ಷ.
ಇದನ್ನೂ ಓದಿ: ಮೈಸೂರಿನ ಜಂಬೂಸವಾರಿಯ ಅಂಬಾರಿಯೂ 750 ಕೆಜಿ ಚಿನ್ನದಿಂದ ಮಾಡಿಲ್ಲ! ಅಂಬಾರಿಯಲ್ಲಿ ಇರೋ ಚಿನ್ನ ಎಷ್ಟು ಗೊತ್ತಾ?
ಅಭಿಮನ್ಯು ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಎತ್ತಿದ ಕೈ. ಸುಮಾರು 140 ರಿಂದ 150 ಕಾಡಾನೆಗಳನ್ನು ಸೆರೆ ಹಿಡಿಯಲು ಸಹಾಯ ಮಾಡಿದ್ದಾನೆ. 40 ರಿಂದ 50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ.
ಅಭಿಮನ್ಯು 2012ರಿಂದ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತ ಬಂದಿದೆ. 2015ರಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಎಳೆಯಿತು. ಅಲ್ಲಿಂದ ಅಂಬಾರಿ ಹೊರುವ ಎಲ್ಲ ಲಕ್ಷಣವ ಅಭಿಮನ್ಯುವಿನಲ್ಲಿ ಕಾಣಿಸಿತು.
ಇದನ್ನೂ ಓದಿ: ಅಂಬಾರಿ ಹೊರಲು ಅಭಿಮನ್ಯು ರೆಡಿ.. ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ಪರಿಚಯ ಇಲ್ಲಿದೆ..!
ಅಭಿಮನ್ಯು 2020ರಿಂದ ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. 2.74 ಮೀಟರ್ ಎತ್ತರ ಇರುವ ಅಭಿಮನ್ಯು ಆನೆ, 4700-5000 ಕೆ.ಜಿ.ಗೂ ಹೆಚ್ಚಿನ ತೂಕವಿದೆ. ನಾಡಿಗೆ ಬಂದಿದ್ದ 30ಕ್ಕೂ ಹೆಚ್ಚು ಹುಲಿಗಳನ್ನು ಹಿಡಿಯುವಲ್ಲಿ ಅಭಿಮನ್ಯು ಯಶಸ್ವಿಯಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ