/newsfirstlive-kannada/media/media_files/2025/09/21/mysore-dasara-1-2025-09-21-10-59-40.jpg)
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಯದುವಂಶದ ಖಾಸಗಿ ದರ್ಬಾರ್​​ಗೂ ಕ್ಷಣಗಣನೆ ಆರಂಭವಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್​ಗೆ ಭರದ ಸಿದ್ಧತೆ ನಡೆದಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಿದ್ದಾರೆ. ಅರಮನೆಯಲ್ಲಿ ಏನೆಲ್ಲ ನಡೆಯಲಿದೆ ಅನ್ನೋದ್ರ ವಿವರ ಹೀಗಿದೆ..
ಇದನ್ನೂ ಓದಿ:ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ.. ಪ್ರಸಿದ್ಧ ಬೇಲೂರಿನಲ್ಲಿ ನೀಚತನ
ಅರಮನೆಯಲ್ಲಿ ಖಾಸಗಿ ದರ್ಬಾರ್
- ಸೆಪ್ಟೆಂಬರ್ 22 ರಂದು (ನಾಳೆ) ದಸರಾ ಉದ್ಘಾಟನೆಯ ದಿನದಂದು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ.
- ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನೆರವೇರಿಸಲಿದ್ದಾರೆ
- ಸಿಂಹಾಸನವನ್ನ ಅರಮನೆಯ ಸ್ಟ್ರಾಂಗ್ ರೂಮ್​ನಿಂದ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ
- ಸೆಪ್ಟೆಂಬರ್ 22 ರಂದು ಬೆಳಗ್ಗೆ 5:30 ರಿಂದ 5: 45 ರೊಳಗೆ ಸಿಂಹಾಸನ ಜೋಡಣೆ ನಡೆಯಲಿದೆ.
- ಸೆಪ್ಟೆಂಬರ್ 22 ರಂದು ಬೆಳಗ್ಗೆ 9:55 ರಿಂದ 10 : 15ರೊಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್​ ಅವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ನಡೆಯಲಿದೆ
- ಸೆಪ್ಟೆಂಬರ್ ಬೆಳಗ್ಗೆ 11: 35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿಕ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಕಳಸ ಹೊತ್ತು ಮಹಿಳೆಯರು ಬರುತ್ತಾರೆ
- ಮಂಗಳವಾದ್ಯದೊಂದಿಗೆ ಸವಾರ್ ತೊಟ್ಟಿಯ ಬಳಿ ಪೂಜಾ ಕಂಕೈರ್ಯಗಳು ನೆರವೇರಲಿವೆ
- ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12: 42 ರಿಂದ 12:58ರೊಳಗೆ ರತ್ನ ಖಚಿತ ಸಿಂಹಾಸನ ಅಲಂಕರಿಸಲಿದ್ದಾರೆ
- ಸೆಪ್ಟೆಂಬರ್ 22 ರಂದು ಮಧ್ಯಾಹ್ನ 2:05ರೊಳಗೆ ಚಾಮುಂಡೇಶ್ವರಿ ಅಮ್ಮನವರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ವಿಜಯ ಯಾತ್ರೆ ನಡೆಯಲಿದೆ
- ಸೆಪ್ಟೆಂಬರ್ 23 ರಿಂದ 29ರವರೆಗೆ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ.
- ಸೆಪ್ಟೆಂಬರ್ 29 ರಂದು ಬೆಳಗ್ಗೆ 10: 10 ರಿಂದ 10:30 ರೊಳಗೆ ಒಡೆಯರ್ ಇಂದ ಸರಸ್ವತಿ ಪೂಜೆ ನಡೆಯಲಿದೆ
- ಸೆಪ್ಟೆಂಬರ್ 29 ರಂದು ರಾತ್ರಿ ಖಾಸಗಿ ದರ್ಬಾರ್ ಕೊನೆಕೊಳ್ಳಲಿದೆ, ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನಡೆಯಲಿದೆ.
- ಆಯುಧ ಪೂಜೆಯ ದಿನದಂದು ಬೆಳಿಗ್ಗೆ 6 ಗಂಟೆಗೆ ಚಂಡಿ ಹೋಮ ಆರಂಭ ಆಗಲಿದೆ
- ಬೆಳಗ್ಗೆ 7: 30 ರಿಂದ 7: 42 ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸ ಆಯುಧಗಳನ್ನ ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನದ ಕಳುಹಿಸಿ ಪೂಜೆ ನಡೆಯಲಿದೆ.
- 8 ರಿಂದ 8: 40 ರ ಒಳಗೆ ಕತ್ತಿ ಹಾಗೂ ಖಾಸ ಆಯುಧಗಳನ್ನ ಕಲ್ಯಾಣ ಮಂಟಪಕ್ಕೆ ಕರೆದಂತೆ ಪೂಜೆ
10: 35 ಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ - ಅಂದಿನ ಸಂಜೆ ಸಿಂಹ ಹಾಗೂ ಯದುವೀರ್ ತ್ರಿಷಿಕಾ ಕುಮಾರಿ ಒಡೆಯರ್ ಕಂಕಣ ವಿಸರ್ಜನೆ ನಡೆಯಲಿದೆ
- ಅಕ್ಟೋಬರ್ 2 ರಂದು 10 ಗಂಟೆಗೆ ವಿಜಯ ದಶಮಿ ಪೂಜೆ ಪೂಜೆ ನಡೆಯಲಿದೆ
- ಅಕ್ಟೋಬರ್ 10:55 ರಿಂದ ವಿಜಯಯಾತ್ರೆ ಆರಂಭವಾಗಲಿದೆ
- ಎಲ್ಲಾ ಪೂಜೆ ಬಳಿಕ ಜಂಬೂಸವಾರಿಗೆ ಚಾಲನೆ ಸಿಗಲಿದೆ
ಇದನ್ನೂ ಓದಿ:ಇವತ್ತು ವಿಶ್ವಶಾಂತಿ ದಿನ.. ಹಿಂಸೆಯಿಂದಾದ ಗಾಯ ಗುಣಪಡಿಸಲು ಗುರುದೇವರಿಂದ ಅವಿಶ್ರಾಂತ ಶ್ರಮ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ