Advertisment

ಪ್ರವಾಸಕ್ಕೆ ಗಂಡ ಒಪ್ಪಲಿಲ್ಲ ಅಂತಾ ಪ್ರಾಣಬಿಟ್ಟ ಪತ್ನಿ.. ಅಪ್ಪ ಮತ್ತು ತಮ್ಮನ ವಿರುದ್ಧ ಮಗಳು ಸ್ಫೋಟಕ ಆರೋಪ

ಪ್ರವಾಸಕ್ಕೆ ಹೋಗುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಉಂಟಾದ ಜಗಳ ಗೃಹಿಣಿಯೊಬ್ಬರ ದುರಂತ ಅಂತ್ಯವಾದ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ. ಮೃತ ಮಹಿಳೆಯ ಮಗಳು, ತನ್ನ ತಂದೆ ಮತ್ತು ಸಹೋದರನೇ ಕೊ* ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

author-image
Ganesh Kerekuli
mysuru husband and wife
Advertisment

ಮೈಸೂರು: ಪ್ರವಾಸಕ್ಕೆ ಹೋಗುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಉಂಟಾದ ಜಗಳ ಗೃಹಿಣಿಯೊಬ್ಬರ ದುರಂತ ಅಂತ್ಯವಾದ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ. ಮೃತ ಮಹಿಳೆಯ ಮಗಳು, ತನ್ನ ತಂದೆ ಮತ್ತು ಸಹೋದರನೇ ಕೊ* ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

Advertisment

ಬೆಂಗಳೂರು ಮೂಲದ ಸಂಧ್ಯಾ (46) ಮೃತ ದುರ್ದೈವಿ. ಇವರು 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಎಂಬುವವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ಇಲ್ಲದಿದ್ರೆ 200% ಟ್ಯಾಕ್ಸ್ ಹಾಕ್ತಿದ್ದೆ- ಟ್ರಂಪ್ ಮತ್ತೆ ಹುಚ್ಚುಚ್ಚು ಹೇಳಿಕೆ

ಘಟನೆಯ ವಿವರ

ಸಂಧ್ಯಾ ಮತ್ತು ರಂಗನಾಥ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳು ಸೃಷ್ಟಿ ವಿದೇಶದಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಮಗ ಕೌಶಿಕ್ (17) ತಂದೆ-ತಾಯಿ ಜೊತೆ ಮೈಸೂರಿನಲ್ಲಿ ವಾಸವಾಗಿದ್ದ. ನಿನ್ನೆ (ಬುಧವಾರ) ರಾತ್ರಿ ಪ್ರವಾಸಕ್ಕೆ (Trip) ಹೋಗುವ ವಿಚಾರದಲ್ಲಿ ಪತಿ-ಪತ್ನಿ ನಡುವೆ ಜಗಳವಾಗಿದೆ. ಜಗಳದ ನಂತರ ಪತಿ ರಂಗನಾಥ್ ಮತ್ತು ಮಗ ಮನೆಯಿಂದ ಹೊರಹೋಗಿದ್ದಾರೆ. ಅವರು ವಾಪಸ್ ಬರುವಷ್ಟರಲ್ಲಿ ಸಂಧ್ಯಾ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ. 

Advertisment

ತಂದೆ-ತಮ್ಮನ ವಿರುದ್ಧ ಮಗಳ ಕಿಡಿ

ತಾಯಿಯ ಸಾ*ನ ಸುದ್ದಿ ತಿಳಿದು ವಿದೇಶದಿಂದ ಬಂದಿರುವ ಮಗಳು ಸೃಷ್ಟಿ, ತಂದೆ ರಂಗನಾಥ್ ಮತ್ತು ತಮ್ಮನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ತಾಯಿಯ ನಿಧನಕ್ಕೆ ನನ್ನ ತಂದೆ ಹಾಗೂ ಸಹೋದರನೇ ಕಾರಣ. ತಂದೆ ಪ್ರತಿನಿತ್ಯ ತಾಯಿಯನ್ನು ಅನುಮಾನದಿಂದ ನೋಡುತ್ತಿದ್ದರು. ಹಣ, ಹಣ ಎಂದು ಕಿರುಕುಳ ನೀಡುತ್ತಿದ್ದರು. ನನ್ನ ಸಹೋದರ ಕೂಡ ತಂದೆಯ ಮಾತು ಕೇಳಿಕೊಂಡು ಕೆಟ್ಟ ಬುದ್ಧಿ ಕಲಿತಿದ್ದಾನೆ. ತಾಯಿಗೆ ಹಿಂಸೆ ನೀಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ಇಲ್ಲದಿದ್ರೆ 200% ಟ್ಯಾಕ್ಸ್ ಹಾಕ್ತಿದ್ದೆ- ಟ್ರಂಪ್ ಮತ್ತೆ ಹುಚ್ಚುಚ್ಚು ಹೇಳಿಕೆ

mysuru husband and wife (2)

ನನ್ನ ತಾಯಿಯ ಅಂತ್ಯಸಂಸ್ಕಾರವನ್ನು ತಂದೆಯಾಗಲಿ, ತಮ್ಮನಾಗಲಿ ಮಾಡಬಾರದು. ನನ್ನ ಮಾವನೇ (ತಾಯಿಯ ಸಹೋದರ) ಅಂತ್ಯಕ್ರಿಯೆ ನೆರವೇರಿಸಬೇಕು ಎಂದಿದ್ದಾರೆ. 

Advertisment

ಪತಿ ರಂಗನಾಥ್ ಸ್ಪಷ್ಟನೆ ಏನು?

ಮಗಳ ಆರೋಪವನ್ನು ತಳ್ಳಿಹಾಕಿರುವ ಪತಿ ರಂಗನಾಥ್, ನಾನು ಪತ್ನಿಯನ್ನು ಕೊ* ಮಾಡಿಲ್ಲ. ಪ್ರವಾಸದ ವಿಚಾರಕ್ಕೆ ಗಲಾಟೆಯಾಗಿದ್ದು ನಿಜ. ಆದರೆ ನಾನು ಆಕೆಯನ್ನು ಕೊ*ದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಡೆನ್ಮಾರ್ಕ್ ಸೇರಿದಂತೆ ಹಲವು ಕಡೆ ಪ್ರವಾಸಕ್ಕೆ ನಾನೇ ಕಳುಹಿಸಿಕೊಟ್ಟಿದ್ದೆ. ಬುಧವಾರವೂ ಪ್ರವಾಸದ ವಿಚಾರಕ್ಕೆ ಜಗಳವಾಯಿತು. ನಾನು ಹೊರಗೆ ಹೋಗಿ ಬರುವಷ್ಟರಲ್ಲಿ ಆಕೆ ಹಾಗೆ ಮಾಡಿಕೊಂಡಿದ್ದಾಳೆ. 

ಇದನ್ನೂ ಓದಿ: ಜೆಫ್ರಿ ಎಫಿಸ್ಟೈನ್ ಫೈಲ್ಸ್ ಎಫೆಕ್ಟ್‌ - ಇಂಗ್ಲೆಂಡ್‌ನ ಮಾಜಿ ಯುವರಾಜ ಆಂಡ್ರ್ಯೂ ಬಂಧನ, ಬಿಡುಗಡೆ

mysuru husband and wife (1)

ಒಂದುೂವರೆ ವರ್ಷದ ಹಿಂದೆ ವಾಟ್ಸಾಪ್ ಕಾಲ್ ವಿಚಾರಕ್ಕೆ ಗಲಾಟೆ ಆಗಿತ್ತು. ಆದರೆ ನಾನು ನನ್ನ ಶೇ.90 ರಷ್ಟು ಆಸ್ತಿಯನ್ನು ಹೆಂಡತಿಯ ಹೆಸರಿಗೇ ಮಾಡಿದ್ದೇನೆ. ಮಗಳು ಯಾರದ್ದೋ ಮಾತು ಕೇಳಿ, ಅಲ್ಲಿಂದಲೇ ಹೀಗೆ ಮಾತನಾಡುತ್ತಿದ್ದಾಳೆ. ಅವಳಿಗೆ ಇಲ್ಲಿನ ವಾಸ್ತವ ಗೊತ್ತಿಲ್ಲ. ಹಿಂದೂ ಸಂಪ್ರದಾಯದಂತೆ ಮಗನೇ ಅಂತ್ಯಕ್ರಿಯೆ ಮಾಡಬೇಕು. ಎಫ್‌ಎಸ್‌ಎಲ್ (FSL) ವರದಿ ಬರಲಿ, ಸತ್ಯ ತಿಳಿಯುತ್ತದೆ ಎಂದು ರಂಗನಾಥ್ ಹೇಳಿದ್ದಾರೆ.

Advertisment

ಮಗ ಕೌಶಿಕ್ ಹೇಳಿದ್ದೇನು?

ಘಟನೆಯ ಪ್ರತ್ಯಕ್ಷದರ್ಶಿ ಎನ್ನಲಾದ ಮಗ ಕೌಶಿಕ್, ತಂದೆಯ ಪರ ಬ್ಯಾಟ್ ಬೀಸಿದ್ದಾನೆ. ನನ್ನ ತಂದೆ ಕೊಲೆ ಮಾಡಿಲ್ಲ. ಅಕ್ಕ ಸುಮ್ಮನೆ ಆರೋಪ ಮಾಡುತ್ತಿದ್ದಾಳೆ. ಅಮ್ಮ ಪ್ರವಾಸಕ್ಕೆ ಹೋಗಬೇಕು ಎಂದಾಗ, ನನಗೆ ಎಕ್ಸಾಮ್ ಇದೆ, ಈಗ ಬೇಡ ಎಂದು ಅಪ್ಪ ಹೇಳಿದ್ದರು. ಇಷ್ಟಕ್ಕೇ ಕೋಪಗೊಂಡು ಅಮ್ಮ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮೊದಲು ಶ* ನೋಡಿದ್ದೇ ನಾನು ಎಂದಿದ್ದಾನೆ. ಸದ್ಯ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ನಂದಿನಿ ಉತ್ಪನ್ನಗಳ ವಿರುದ್ಧ ಅಪಪ್ರಚಾರ- ವೈದ್ಯೆ ಶರಣ್ಯ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysore news Mysore
Advertisment
Advertisment
Advertisment