/newsfirstlive-kannada/media/media_files/2026/01/29/raichuru-pregnant-1-2026-01-29-10-42-54.jpg)
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಹೆತ್ತ ಮಗಳಂತಿರಬೇಕಾದ ಸೊಸೆಯನ್ನ ಮಾವನೊಬ್ಬ ಅತ್ಯಂತ ಭೀಕರವಾಗಿ ಮುಗಿಸಿದ್ದಾನೆ.
ಘಟನೆ ವಿವರ..
ಮೃತ ದುರ್ದೈವಿಯನ್ನು ರೇಖಾ (25) ಎಂದು ಗುರುತಿಸಲಾಗಿದೆ. ಈಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚೆಗೆ ತವರು ಮನೆಗೆ ಬಂದಿದ್ದಳು. ರೇಖಾ ಅವರ ಮಾವ ಸಿದ್ದಪ್ಪ (50) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಸಿದ್ದಪ್ಪ ಸೊಸೆಯ ಜೊತೆಗಿನ ಕೌಟುಂಬಿಕ ಕಲಹವನ್ನು ಮನಸ್ಸಿನಲ್ಲಿಟ್ಟುಕೊಂಡು, ಆಕೆಯನ್ನು ಮುಗಿಸಲು ಸಂಚು ರೂಪಿಸಿ ಸಿರವಾರ ತಾಲೂಕಿನ ಅಣಗಿ ಗ್ರಾಮದ ಆಕೆಯ ತವರು ಮನೆಗೆ ತೆರಳಿದ್ದಾನೆ.
ಟಿವಿ ನೋಡುತ್ತಿದ್ದಾಗ ನುಗ್ಗಿದ ಹಂತಕ
ಮನೆಯಲ್ಲಿ ರೇಖಾ ಒಬ್ಬಳೇ ಇರುವುದನ್ನು ಗಮನಿಸಿದ ಸಿದ್ದಪ್ಪ, ಒಳ ನುಗ್ಗಿ ರೇಖಾ ಟಿವಿ ನೋಡುತ್ತಾ ಮಲಗಿದ್ದ ವೇಳೆ ಹರಿತವಾದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದಾನೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ರೇಖಾ, ಪ್ರಾಣ ಉಳಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದ್ದಾಳೆ. ರಕ್ತದ ಮಡುವಿನಲ್ಲಿಯೇ ಮನೆಯಿಂದ ಹೊರಗೆ ಓಡಿಬಂದ ರೇಖಾ, ರಸ್ತೆಯಲ್ಲಿ ನರಳಾಡಿ ಕೊನೆಯುಸಿರೆಳೆದಿದ್ದಾರೆ. ಆಕೆಯ ಈ ಆರ್ತನಾದ ಮತ್ತು ಕೊನೆಯ ಕ್ಷಣದ ಹೋರಾಟ ನೆರೆಹೊರೆಯವರ ಕರುಳು ಹಿಂಡುವಂತಿತ್ತು.
ಇದನ್ನೂ ಓದಿ:ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್..!
/filters:format(webp)/newsfirstlive-kannada/media/media_files/2026/01/29/raichuru-pregnant-2-2026-01-29-10-43-09.jpg)
ಪೊಲೀಸರ ಕಾರ್ಯಾಚರಣೆ - ಆರೋಪಿ ವಶಕ್ಕೆ
ಸೊಸೆಯನ್ನು ಕೊಂದ ನಂತರ ಮಾವ ಸಿದ್ದಪ್ಪ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಮಾಹಿತಿ ತಿಳಿದ ತಕ್ಷಣ ಕವಿತಾಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿ ಸಿದ್ದಪ್ಪನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಗರ್ಭಿಣಿ ಎಂಬ ಕರುಣೆಯೂ ಇಲ್ಲದ ಮಾವ
ನಾಲ್ಕು ತಿಂಗಳ ಗರ್ಭಿಣಿ ಎಂಬ ಕನಿಷ್ಠ ಮಾನವೀಯತೆಯೂ ಇಲ್ಲದೆ ಸಿದ್ದಪ್ಪ ಇಂತಹ ಘೋರ ಕೃತ್ಯ ಎಸಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಜೀವದ ಜೊತೆಗೆ ಹುಟ್ಟಲಿರುವ ಮಗುವನ್ನೂ ಕೊಂದ ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸದ್ಯ ಕವಿತಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸಿದ್ದಪ್ಪನ ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹಕ್ಕೆ ಬಲಿಯಾದ ರೇಖಾ ಅವರ ಸಾವು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
ಇದನ್ನೂ ಓದಿ:ಅಲೋಕ್ ಕುಮಾರ್ ಎಂಟ್ರಿ, ಅಧಿಕಾರಿಗಳ ಕಳ್ಳಾಟ ಬಯಲು.. ದರ್ಶನ್ ವಿಚಾರದಲ್ಲಿ ಮತ್ತೇನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us