/newsfirstlive-kannada/media/media_files/2025/08/31/raichuru-news-1-2025-08-31-14-54-47.jpg)
ರಾಯಚೂರು: ಶೀಲ ಶಂಕಿಸಿ ಪತಿಯಿಂದಲೇ ಪತ್ನಿ ಹತ್ಯೆ ನಡೆದಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ದೇಸಾಯಿ ಭೋಗಾಪುರ ಗ್ರಾಮದಲ್ಲಿ ನಡೆದಿದೆ.
ಗಂಗಮ್ಮ (30) ಪತಿಯಿಂದ ಹತ್ಯೆಯಾದ ಪತ್ನಿ. ಯಲ್ಲಪ್ಪ ಪತ್ನಿಯನ್ನ ಹತ್ಯೆಗೈದ ಆರೋಪಿ. ನಿನ್ನೆ ಪತ್ನಿಯೊಂದಿಗೆ ಕಿರಿಕ್ ತೆಗೆದು ಶೇವಿಂಗ್ ಬ್ಲೇಡ್ನಿಂದ ಪತ್ನಿ ಕತ್ತು ಕೊಯ್ದಿದ್ದಾನೆ. ಗಂಡನ ರಾಕ್ಷಿಸಿ ಕೃತ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್; ಬುರುಡೆ ಇಟ್ಕೊಂಡು ಸುಪ್ರೀಂಗೆ ಹೋಗಿದ್ದ ಫೋಟೋ ರಿವೀಲ್..!
ಮನೆಯ ವಾತಾವರಣ ಗಮನಿಸಿದ್ರೆ, ಕೃತ್ಯಕ್ಕೂ ಮೊದಲು ಪತ್ನಿಯ ಮೇಲೆ ಹಲ್ಲೆ ಮಾಡಿದಂತೆ ಕಾಣ್ತಿದೆ. ಅಡುಗೆ ಮನೆಯಲ್ಲಿ ತಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಲ್ಲದೇ ಅಲ್ಲಲ್ಲಿ ಅನ್ನದ ಅಗಳು ಹರಡಿಕೊಂಡಿದೆ. ಊಟ ಮಾಡುತ್ತಿದ್ದ ವೇಳೆ ಜಗಳ ಆದಂತೆ ಕಾಣ್ತಿದೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಹಾಗೂ ಮಸ್ಕಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ವಾಸಂತಿ ಸಾವಿನ ಸುತ್ತ ಪ್ರಶ್ನೆಗಳ ಹುತ್ತ..! ಅನುಮಾನಗಳು ಏನೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ