/newsfirstlive-kannada/media/media_files/2025/08/22/sujata-bhatt1-2025-08-22-22-11-03.jpg)
ಧರ್ಮಸ್ಥಳ ಪ್ರಕರಣ ಸಂಬಂಧ ಅನನ್ಯಾ ಭಟ್ ನಾಪತ್ತೆ ವಿಚಾರವಾಗಿ ಎಸ್​ಐಟಿ ಅಧಿಕಾರಿಗಳು ತನಿಖೆ ತೀವ್ರಗೊಂಡಿದೆ. ವಿಚಾರಣೆ ವೇಳೆ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕಾಲ್ಪನಿಕ ಸೃಷ್ಟಿ ಎಂದು ಸುಜಾತಾ ಭಟ್ ಒಪ್ಪಿಕೊಂಡಿದ್ದಾರೆ. ಜೊತೆಗೆ ಅನನ್ಯ ಭಟ್ ತಾನು ತೋರಿಸಿದ್ದ ​ ವಾಸಂತಿ ಇನ್ನೂ ಜೀವಂತ ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅನನ್ಯ ಭಟ್​​ ಮಿಸ್ಸಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತ ಭಟ್​​ ಎಸ್​ಐಟಿ ಮುಂದೆ ವಾಸಂತಿ ಸತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನ್ಯೂಸ್​​ಫಸ್ಟ್​ ಜೊತೆ ಮಾಡನಾಡುವಾಗ ಸುಜಾತ ಭಟ್,​​ ವಾಸಂತಿ ಯಾರು ಅನ್ನೋದು ಗೊತ್ತೇ ಇಲ್ಲ ಎಂದಿದ್ದರು. ಆದರೆ ಎಸ್​ಐಟಿ ಅಧಿಕಾರಿಗಳ ಮುಂದೆ ವಾಸಂತಿ ಸತ್ತಿಲ್ಲ ಅಂತ ಹೇಳಿಕೆ ನೀಡಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ವಾಸಂತಿ-ಶ್ರೀವತ್ಸ ಪ್ರೀತಿಸಿ 2007ರಲ್ಲಿ ಮದುವೆಯಾಗಿದ್ದರು. ಮದ್ವೆಯಾದ ಒಂದೇ ತಿಂಗಳಿಗೆ ವಾಸಂತಿ ಕಣ್ಮರೆಯಾಗುತ್ತಾರೆ. ಇದಾಗಿ 20 ದಿನಗಳ ನಂತರ ವಿರಾಜಪೇಟೆಯಲ್ಲಿ ಕೊಳೆತ ಶವ ಪತ್ತೆಯಾಗುತ್ತೆ. ಶವದ ಮೇಲಿದ್ದ ಬಟ್ಟೆ, ಮೃತದೇಹದ ಕೈಯಲ್ಲಿದ್ದ ಮಾರ್ಕ್ ನೋಡಿ, ಇದು ವಾಸಂತಿ ಎಂದು ಅಂದಾಜಿಸಿ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ.
ಅನುಮಾನ ಯಾಕೆ?
ವಾಸಂತಿ ಮೃತದೇಹ ಸಿಕ್ಕಾಗ DNA ಟೆಸ್ಟ್ ಮಾಡಿಲ್ಲ ಯಾಕೆ? ಕೊಳೆತು ಹೋದ ಮೃತ ದೇಹ ಬಟ್ಟೆ ನೋಡಿನೆ ನಿರ್ಧಾರಕ್ಕೆ ಬಂದಿದ್ಯಾಕೆ? ಮದ್ವೆಯಾದ ಒಂದೇ ತಿಂಗಳಿಗೆ ನಿಗೂಢವಾಗಿ ಕಣ್ಮರೆಯಾಗಲು ಕಾರಣ ಏನು? ಎಂಬ ಪ್ರಶ್ನೆ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us