ರಾಯಚೂರಲ್ಲಿ ದಾರುಣ ಘಟನೆ.. ಒಂದೇ ಮನೆಯ ಮೂವರು ಯುವತಿಯರು ವಿಷ ಸೇವನೆ

ಒಂದೇ ಮನೆಯ ಮೂವರು ಯುವತಿಯರು ವಿಷ ಸೇವಿಸಿ ಆ*ಹತ್ಯೆಗೆ ಯತ್ನಿಸಿರೋ ಘಟನೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ನಡೆದಿದೆ. ಇವರು ಯಾಕೆ ಈ ನಿರ್ಧಾರ ತಗೊಂಡ್ರು ಅನ್ನೋದು ನಿಗೂಢವಾಗಿದೆ.

author-image
Ganesh Kerekuli
Raichuru (5)
Advertisment

ಒಂದೇ ಮನೆಯ ಮೂವರು ಯುವತಿಯರು ವಿಷ ಸೇವಿಸಿ ಆ*ಹತ್ಯೆಗೆ ಯತ್ನಿಸಿರೋ ಘಟನೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ನಡೆದಿದೆ. ಇವರು ಯಾಕೆ ಈ ನಿರ್ಧಾರ ತಗೊಂಡ್ರು ಅನ್ನೋದು ಕುಟುಂಬಸ್ಥರಿಗೆ ಗೊತ್ತಿಲ್ಲ. 

ರೇಣುಕಾ (17), ತಿಮ್ಮವ್ವ(18) ಹಾಗೂ ಸುನಿತಾ (17) ಆ*ಹತ್ಯೆಗೆ ಯತ್ನಿಸಿದ ಯುವತಿಯರು. ವಿ*ಷ ಸೇವಿಸಿದ ನಂತರ ರೇಣುಕಾ ಬಾವಿಗೆ ಹಾರಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನಿಬ್ಬರನ್ನು ದೇವದುರ್ಗ ಆಸ್ಪತ್ರೆಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ದೇವದುರ್ಗ ಠಾಣೆಯಲ್ಲಿ ಕೇಸ್​ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಶುರು ಮಾಡಿದ್ದಾರೆ. 

ಇದನ್ನೂ ಓದಿ:ವೈರಲ್ ಹುಡುಗಿಗೆ ಬ್ಯಾಡ್​ ಕಾಮೆಂಟ್ಸ್ ಕಾಟ​.. ಏನಂದ್ರು ನಿತ್ಯಶ್ರೀ..?

ತಿಮ್ಮವ್ವಳನ್ನು ಐಸಿಯುಗೆ ವೈದ್ಯರು ದಾಖಲಿಸಿದ್ದಾರೆ. 24 ಗಂಟೆಗಳ ಕಾಲ ಏನು ಹೇಳಲು ಆಗಲ್ಲ ಎಂದಿದ್ದಾರೆ. ಸೇವಿಸಿದ ವಿ*ಷ ಇಡೀ ದೇಹಕ್ಕೆ, ಮೆದುಳಿಗೆ ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುನಿತಾರ ಆರೋಗ್ಯ ಸುಧಾರಿಸಿದ್ದು, ಚೇತರಿಸಿಕೊಳ್ತಿದ್ದಾರೆ. ಸಂಬಂಧಿ ಒಬ್ಬರು ತಿಳಿಸಿದ ಮಾಹಿತಿ ಪ್ರಕಾರ, ಮೂವರು ಕೆಲಸಕ್ಕೆ ಹೋಗಿದ್ದಾರೆ. ಒಂದು ಗಂಟೆ ಸುಮಾರಿಗೆ ವಿ*ಷ ಸೇವನೆ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಕೀಟನಾಶಕ ಸೇವಿಸಿದ್ದಾರೆ ಎಂದು ಹೇಳಲಾಗಿದೆ. ರೇಣುಕಾ ಎಂಬ ಹುಡುಗಿ ಬಾವಿಯಲ್ಲಿ ಬಿದ್ದಿದ್ರೆ, ಸುನಿತಾ ಬಾವಿ ಪಕ್ಕದಲ್ಲಿ ನರಳಾಡುತ್ತಿದ್ದಳು. ತಿಮ್ಮವ್ವ ತಮ್ಮದೇ ಹೊಲದಲ್ಲಿ ಬಿದ್ದಿದ್ದರು ಎಂದು ತಿಮ್ಮವ್ವ ಅಕ್ಕನ ಗಂಡ ರಾಮಣ್ಣ ಹೇಳಿ ಹೇಳಿದ್ದಾರೆ. 

ಇದನ್ನೂ ಓದಿ:ಬೆಂಗಳೂರು ಜನರಿಗೆ ಬಿಗ್ ಶಾಕ್​.. ಇಂದಿನಿಂದ ಮೂರು ದಿನ ಕಾವೇರಿ ನೀರು ಇಲ್ಲ; ಕಾರಣ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Raichur
Advertisment