/newsfirstlive-kannada/media/media_files/2025/12/04/shimogga-marriage-1-2025-12-04-09-11-30.jpg)
ಎಲ್ಲರ ಬಾಳಲ್ಲೂ ಮದುವೆ ಅನ್ನೋದು ಸಂಭ್ರಮದ ದಿನ. ಈ ದಿನಕ್ಕಾಗಿ ವರ್ಷಾನುಗಟ್ಟಲೇ ಕನಸು ಕಂಡಿರುತ್ತಾರೆ. ಆ ಒಂದು ದಿನಕ್ಕಾಗಿ ಗಂಡು-ಹೆಣ್ಣು ಕನಸಿನ ಸರಮಾಲೆಯನ್ನೇ ಕಟ್ಟಿಕೊಂಡಿರುತ್ತಾರೆ. ಆದ್ರೆ ಜವರಾಯನ ಆಟದ ಮುಂದೆ ಯಾವುದು ಶಾಶ್ವತ ಅಲ್ಲ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮದುವೆ ಆಗಿ 24 ಗಂಟೆ ಕಳೆಯುವ ಮೊದಲೇ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.
ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಎಂದು ಹೇಳುತ್ತಾರೆ. ಇನ್ನು ಎಲ್ಲರೂ ಬಾಳಲ್ಲಿ ಬರುವ ಒಂದು ಸಂಭ್ರಮದ ಕ್ಷಣ ಆ ಕ್ಷಣಕ್ಕಾಗಿ ಕಾದಿರತ್ತಾರೆ. ಅದರಲ್ಲೂ ಹಸೆಮಣೆಗೇರಿ ತಾಳಿ ಕಟ್ಟುವ ಕ್ಷಣಕ್ಕಾಗಿ ವಧು-ವರ ಕಾತುರದಿಂದ ಕಾಯುತ್ತಿರುತ್ತಾರೆ. ಆದ್ರೆ, ಮದುವೆಯ ದಿನವೇ ಇಲ್ಲಿ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: ಸುಜಲಾಂ ಭಾರತ್.. ಜಲ ಸಂರಕ್ಷಣೆಯತ್ತ ದಿಟ್ಟ ಹೆಜ್ಜೆಯಿಟ್ಟ ಕೇಂದ್ರ..!
/filters:format(webp)/newsfirstlive-kannada/media/media_files/2025/12/04/shimogga-marriage-2025-12-04-09-13-35.jpg)
ವರನಿಗೆ ಹೃದಯಾಘಾತ!
ಶಿವಮೊಗ್ಗದ ಭದ್ರಾವತಿಯ ಹನುಮಂತಪುರ ಮೂಲದ ಹೊಸಕೊಪ್ಪ ನಿವಾಸಿ ರಮೇಶ್ ಮದುವೆಯಾಗಿ 24 ಗಂಟೆ ಕಳೆಯುವ ಒಳಗೆ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ಮದುವೆಯಾದ ಸಂಭ್ರಮದಲ್ಲೇ ಬಾರದಲೋಕಕ್ಕೆ ಪಯಣಿಸಿದ್ದಾನೆ. ಮದುವೆ ಮನೆ ಈಗ ಸಾವಿನ ಮನೆಯಾಗಿ ಎಲ್ಲೆಲ್ಲೂ ದುಃಖ ಮಡುಗಟ್ಟಿದೆ.
ತಾಳಿ ಕಟ್ಟಿ 24 ಗಂಟೆ.. ವರ ಸಾವು!
ಶಿವಮೊಗ್ಗದ ಭದ್ರಾವತಿಯ ಹನುಮಂತಪುರ ನಿವಾಸಿ ಮೃತ ರಮೇಶ್‌ಗೆ ಹರಪನಹಳ್ಳಿಯ ಬಂಡಿ ಮೂಲದ ಯುವತಿ ಜೊತೆ ನವೆಂಬರ್ 30ರಂದು ಶಿವಮೊಗ್ಗದಲ್ಲಿ ವಿವಾಹ ನೆರವೇರಿರುತ್ತೆ. ಮದುವೆ ಬಳಿಕ ಆರತಕ್ಷತೆಗಾಗಿ ಮೃತ ರಮೇಶ್ ಬಂಡ್ರಿಗೆ ತೆರಳಿರುತ್ತಾರೆ. ಈ ವೇಳೆ ದೇವಸ್ಥಾನದಿಂದ ಮನೆವರಿಗೂ ವಧು-ವರರ ಮೆರವಣಿಗೆ ನಡೆದಿರುತ್ತೆ. ನವ ದಂಪತಿ ದೇವರ ದರ್ಶನ ಪಡೆಯಲು ಹೋಗ್ತಿರ್ತಾರೆ. ಇನ್ನೇನು ದೇವರಿಗೆ ಕೈ ಮುಗಿದು ವಾಪಸ್ ಮನೆಗೆ ತೆರಳುವಾಗ ರಮೇಶ್ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತದೆ. ಆದ್ರೆ, ಅಷ್ಟರಲ್ಲೇ ಹೃದಯಾಘಾತದಿಂದ ರಮೇಶ್ ದಾರುಣ ಅಂತ್ಯಕಂಡಿದ್ದಾನೆ.
ಇದನ್ನೂ ಓದಿ:‘ಹೈಕಮಾಂಡ್ ಭೇಟಿ ಮಾಡಲ್ಲ’ ಎಂದ ಡಿಕೆಶಿ.. ನಿಗೂಢ ದೆಹಲಿ ದಂಡಯಾತ್ರೆ..!
ಮೃತ ರಮೇಶ್ ಲಗೇಜ್ ಆಟೋ ಒಂದನ್ನ ಓಡಿಸುತ್ತಾ ಒಂದಿಷ್ಟು ದುಡಿಮೆ ಮಾಡ್ತಾ ಇರ್ತಾರೆ. ಯಾವುದೇ ಚಟಗಳಿಗೆ ಬಲಿಯಾಗದೆ ಆತ ಜೀವನವನ್ನು ನಡೆಸುತ್ತಿರುತ್ತಿದ್ನಂತೆ. ಅಂದುಕೊಂಡಂತೆ ಮದುವೆ ಸುಸೂತ್ರವಾಗಿ ನಡೆದಿದೆ. ಆದ್ರೆ ಹಸಿ ಮೈಯಲ್ಲೇ ಇದ್ದಂತಹ ರಮೇಶ್​ಗೆ ಯಮ ಹೆಚ್ಚು ಹೊತ್ತು ಇರಲು ಬಿಟ್ಟಿಲ್ಲ. ಮದುವೆಯಾದ ಮಾರನೇ ದಿನವೇ ಸಾವಿನ ಮನೆಯ ಕದತಟ್ಟಿದ್ದಾನೆ. ಇದು ಕುಟುಂಬಸ್ಥರನ್ನ ದಿಗ್ಬ್ರಮೆಗೊಳಿಸಿದೆ.
ವೈವಾಹಿಕ ಜೀವನದಲ್ಲಿ ನೂರಾರು ಕನಸುಗಳನ್ನು ಕಂಡು ಉತ್ತಮ ಜೀವನ ನಡೆಸಲು ಅಣಿಯಾಗಿದ್ದ ರಮೇಶ್ ಎಲ್ಲರನ್ನ ಬಿಟ್ಟು ಅಗಲಿದ್ದಾನೆ. ರಮೇಶ್ ಜೊತೆ ಹಸೆಮಣೆ ಏರಿದ ನವ ವಧು 24 ಗಂಟೆಯಲ್ಲೇ ಪತಿಯನ್ನ ಕಳೆದುಕೊಂಡು ಕಂಗಾಲಾಗಿದ್ದಾಳೆ. ಆಕೆಯ ಮುಂದಿನ ಜೀವನವನ್ನ ಹೇಗೆ ಅನ್ನೋದೇ ಎರಡು ಕುಟುಂಬಗಳನ್ನ ಮತ್ತಷ್ಟು ಘಾಸಿಗೊಳಿಸಿರೋ ಸಂಗತಿ.
ಇದನ್ನೂ ಓದಿ: ಇಂದು ಭಾರತಕ್ಕೆ ಪುಟಿನ್ ಆಗಮನ.. ಇಂದ್ರಲೋಕದಂತಿದೆ ರಷ್ಯಾ ಅಧ್ಯಕ್ಷ ತಂಗುವ ಹೋಟೆಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us