/newsfirstlive-kannada/media/media_files/2026/02/05/kamalakara-bhat-case-2026-02-05-14-31-27.jpg)
ಶಿವಮೊಗ್ಗ: ಜ್ಯೋತಿಷಿ ಕಮಲಾಕರ್ ಗುರೂಜಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಈ ನಡುವೆ ಮಹೇಶ್ ಎಂಬುವವರ ಪುತ್ರಿ ನೀಡಿರುವ ಹೇಳಿಕೆ ಇಡೀ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ನೀಡಿದೆ. ತನ್ನ ತಾಯಿ ಮತ್ತು ಕಮಲಾಕರ್ ಭಟ್​​​ನ ಅಕ್ರಮ ಸಂಬಂಧ ಹಾಗೂ ಕಿರುಕುಳವೇ ರಕ್ತಪಾತಕ್ಕೆ ಕಾರಣ ಎಂಬ ಗಂಭೀರ ಸಂಗತಿಯನ್ನು ಮಗಳು ಬಯಲು ಮಾಡಿದ್ದಾಳೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಗಳು, ‘ನಾವು ಮೊದಲಿನಿಂದ ಸಿದ್ದಾಪುರದಲ್ಲಿದ್ದೆವು. 9 ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದೆವು. ಇಲ್ಲಿ ನನ್ನ ತಾಯಿಗೆ ಕಮಲಾಕರ್ ಭಟ್ ಎಂಬ ಗುರೂಜಿ ಪರಿಚಯವಾಯಿತು. ಆತ ಶಿವಮೊಗ್ಗದಲ್ಲಿ ನನಗೆ ಕಾಲ್ ಸೆಂಟರ್ ಕೆಲಸ ಕೊಡಿಸಿದ್ದ. ಆದರೆ ಅಮ್ಮ ಇಲ್ಲದ ಸಮಯದಲ್ಲಿ ಆತ ನನಗೆ ತುಂಬಾ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಅಮ್ಮನಿಗೆ ಹೇಳಿದರೂ ಆಕೆ ಗುರೂಜಿಯ ಪರವಾಗಿಯೇ ಇದ್ದಳು. ಮೊನ್ನೆ ಒಂದು ದಿನ ‘ನೀನು ನಿನ್ನ ಅಪ್ಪನ ಜೊತೆ ಹೋಗು, ಇಲ್ಲದಿದ್ದರೆ ವಿಷ ಹಾಕಿ ಮುಗಿಸುತ್ತೇನೆ ಎಂದು ಅಮ್ಮನೇ ನನಗೆ ಬೆದರಿಕೆ ಹಾಕಿದ್ದಳು’ ಎಂದು ಕಣ್ಣೀರಿಟ್ಟಿದ್ದಾಳೆ.
ಮುದ್ದು, ಬಂಗಾರ ಎನ್ನುತ್ತಿದ್ದ ಗುರೂಜಿ
‘ಮೇ 30 ರಂದು ಅಮ್ಮನ ಹುಟ್ಟುಹಬ್ಬದ ದಿನ ಸುಮ ಎಂಬುವವರ ಮೂಲಕ ಗುರೂಜಿ ಪರಿಚಯವಾಗಿದ್ದರು. ಅಂದಿನಿಂದ ಅಮ್ಮ ಮತ್ತು ಗುರೂಜಿ ಒಂದೇ ರೂಮ್‌ನಲ್ಲಿ ಇರುತ್ತಿದ್ದರು. ಗುರೂಜಿ ನನ್ನ ತಾಯಿಯನ್ನು ‘ಚಿನ್ನ’, ‘ಬಂಗಾರ’, ‘ಮುದ್ದು’ ಎಂದು ಕರೆಯುತ್ತಿದ್ದ. ನಮ್ಮಿಬ್ಬರ ಮಧ್ಯೆ ಜಗಳ ತಂದಿಡುತ್ತಿದ್ದ. ಇದನ್ನು ಸಹಿಸದೇ ನಾನು ಆತ್ಮ*ತ್ಯೆಗೆ ಪ್ರಯತ್ನಿಸಿದ್ದೆ. ನನ್ನ ತಂದೆಯನ್ನೂ ಮುಗಿಸಲು ಇವರಿಬ್ಬರು ಸೇರಿ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಹಿಂದಿ ಮಾತನಾಡುವ ಐವರು ಹಂತಕರಿಗೆ ಸುಪಾರಿ ಕೊಟ್ಟಿದ್ದರು ಎಂದು ಮಗಳು ಹೇಳಿಕೆ ನೀಡಿದ್ದಾಳೆ.
ಇದನ್ನೂ ಓದಿ: ಕಮಲಾಕರ್ ಭಟ್ ಕೇಸ್​: ಬಿಕೆ ಹರಿಪ್ರಸಾದ್ vs ಸುರೇಶ್ ಕುಮಾರ್..!
/filters:format(webp)/newsfirstlive-kannada/media/media_files/2026/02/03/astrologer-kamalakar-bhar-arrested-in-murder-case-2026-02-03-17-28-19.jpg)
ದೊಡ್ಡಪ್ಪನ ಮುಗಿಸಿದ್ದು ಮಾಡಿದ್ದು ಇವರೇ!
‘ನನಗೆ ಜೀವ ಭಯ ಶುರುವಾದಾಗ ಅಪ್ಪನಿಗೆ ಫೋನ್ ಮಾಡಿ ನನ್ನನ್ನು ಕರೆದುಕೊಂಡು ಹೋಗಿ ಎಂದು ಕೇಳಿಕೊಂಡೆ. ಆಗ ಗಲಾಟೆ ನಡೆದಿದೆ. ಈ ವೇಳೆ ಐವರು ಹಂತಕರು ಚಾಕು-ಚೂರಿ ಹಿಡಿದು ಬಂದು ಅಪ್ಪ, ದೊಡ್ಡಪ್ಪ ಹಾಗೂ ಪಕ್ಕದ ಮನೆಯವರ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ನನ್ನ ದೊಡ್ಡಪ್ಪ (ವಸಂತ್ ನಾಯ್ಕ್) ಸ್ಥಳದಲ್ಲೇ ಪ್ರಾಣಬಿಟ್ಟರು. ಅಮ್ಮ ಮತ್ತು ಗುರೂಜಿ ಸೇರಿಯೇ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಈ ಪ್ರಕರಣದಲ್ಲಿ ನನ್ನ ಅಜ್ಜನ ಪಾತ್ರ ಏನೂ ಇಲ್ಲ. ಅವರು ಅಂಗವಿಕಲರು, ಅವರಿಗೆ ಏನೂ ತಿಳಿಯದು. ದಯವಿಟ್ಟು ಪೊಲೀಸರು ಅವರನ್ನು ಬಿಟ್ಟುಬಿಡಲಿ. ಆದರೆ ನನ್ನ ತಾಯಿ ಮತ್ತು ಆ ಗುರೂಜಿ ಸೇರಿದಂತೆ ಐವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಮಗಳು ಆಗ್ರಹಿಸಿದ್ದಾಳೆ.
ಹಿಂದೊಮ್ಮೆ ತಾಯಿ ಮೊಬೈಲ್‌ನಲ್ಲಿ ಬೇರೆ ಯುವಕರ ಜೊತೆ ಮಾತನಾಡುತ್ತಿದ್ದಾಗ ತಂದೆ ಕತ್ತಿಯಿಂದ ಹೊಡೆದು ಜೈಲಿಗೆ ಹೋಗಿದ್ದರು. ಈಗ ಅದೇ ದ್ವೇಷಕ್ಕೆ ಅಥವಾ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಗುರೂಜಿ ಜೊತೆ ಸೇರಿ ಈ ಕೃತ್ಯ ಎಸಗಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಸದ್ಯ ಪೊಲೀಸರು ಈ ಹೇಳಿಕೆಯನ್ನಾಧರಿಸಿ ತನಿಖೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us