‘ಮಗಳೇ ಟಾರ್ಗೆಟ್​ ಆಗಿತ್ತು, ವಸಂತ್​ ನಾಯ್ಕ್​​ ಜೀವ ತೆಗೆದ ಕ್ಷಣ ಹೇಗಿತ್ತು?’ ಗಾಯಾಳು ಬಿಚ್ಚಿಟ್ಟ ಅಸಲಿ ಕತೆ..!

ಸಿದ್ದಾಪುರ ವಸಂತ್ ನಾಯ್ಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಹಾಗೂ ಆರೋಪಿ ಸುಚಿತ್ರಾ ಪತಿ ಮಹೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್, ಅಂದಿನ ಭಯಾನಕ ರಾತ್ರಿಯ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

author-image
Ganesh Kerekuli
kamalakar bhat case (1)
Advertisment

ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಹಾಗೂ ಆರೋಪಿ ಸುಚಿತ್ರಾ ಪತಿ ಮಹೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್, ಅಂದಿನ ಭಯಾನಕ ರಾತ್ರಿಯ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮಗಳ ಮುಗಿಸುವುದೇ ಉದ್ದೇಶವಾಗಿತ್ತು

ಘಟನೆ ಕುರಿತು ಮಾತನಾಡಿದ ಮಹೇಶ್, ಅವರು ಕೊಲೆ ಮಾಡಲು ಬಂದಿದ್ದು ನನ್ನನ್ನಲ್ಲ. ಅವರ ಟಾರ್ಗೆಟ್ ನನ್ನ ಮಗಳಾಗಿದ್ದಳು. ಬಂದವರೇ ನನ್ನ ಮಗಳನ್ನು ಕಳುಹಿಸಿಕೊಡುವಂತೆ ಕೇಳಿದರು. ನಿನ್ನನ್ನು ಸಾಯಿಸಿಯಾದರೂ ಸರಿ, ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದು ಸುಚಿತ್ರಾ ಬೆದರಿಕೆ ಹಾಕಿದಳು. ಆಗ ನಾನು ತಕ್ಷಣ ಮಗಳನ್ನು ಒಂದು ರೂಮ್‌ನಲ್ಲಿ ಕೂಡಿಹಾಕಿ ರಕ್ಷಣೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಳಿಗೆ ಮಾಲೀಕನಿಂದ ಕಮಲಾಕರ್ ಭಟ್​ ಬಗ್ಗೆ ಮತ್ತಷ್ಟು ಮಾಹಿತಿ; ಸುಚಿತ್ರಾ ಎಂಟ್ರಿ, ಸಂಬಂಧದ ಬಗ್ಗೆ ಹೇಳಿದ್ದೇನು?

ನಾನು ಮಗಳನ್ನು ರಕ್ಷಣೆ ಮಾಡುತ್ತಿದ್ದಂತೆ ಕಾರಿನಲ್ಲಿದ್ದ ನಾಲ್ವರು ಚಾಕುಗಳನ್ನು ಹಿಡಿದುಕೊಂಡು ಬಂದರು. ಅಷ್ಟರಲ್ಲೇ ನನ್ನ ಅಣ್ಣ (ವಸಂತ್ ನಾಯ್ಕ್) ಅಡ್ಡಬಂದಾಗ, ಅವರ ಎದೆಗೆ ಚಾಕುವಿನಿಂದ ಚುಚ್ಚಿದರು. ಅದಕ್ಕೆ ನಾನು ಇಲ್ಲಿ ರೌಡಿಸಂ ಮಾಡಲು ಬಂದಿದ್ಯಾ ಎಂದು ಕೇಳಿದೇವು. ನನ್ನ ಅಣ್ಣನನ್ನು ತಪ್ಪಿಸಲು ಹೋದಾಗ ನನಗೂ ಚಾಕು ಇರಿದರು. ಅಣ್ಣ ಕುಸಿದು ಬಿದ್ದಿದ್ದ, ನಾನೂ ಕೂಡ ಬಿದ್ದಿದ್ದೆ. ಅಷ್ಟರಲ್ಲೇ ಪಕ್ಕದ ಮನೆಯ ಕುಮಾರ್, ಯಾಕೆ ಚಾಕು ಹಿಡಿದುಕೊಂಡು ಬಂದಿದ್ದೀರಾ ಎಂದರು. ಆಗ ಆತನಿಗೂ ಇರಿದರು.  ಅವರು ಕಾರಿನಲ್ಲಿ ಶಸ್ತ್ರಾಸ್ತ್ರಗಳನ್ನು ತಂದಿದ್ದನ್ನು ನೋಡಿದರೆ, ಇದು ಮೊದಲೇ ಪ್ಲಾನ್ ಮಾಡಿಕೊಂಡು (Pre-planned) ಬಂದ ಕೃತ್ಯ ಎಂದು ಸ್ಪಷ್ಟವಾಗುತ್ತದೆ ಎಂದು ಮಹೇಶ್ ಆರೋಪಿಸಿದ್ದಾರೆ.

ಸೋಶಿಯಲ್ ಮೀಡಿಯಾ ಹುಚ್ಚು.. 

ಪತ್ನಿ ಸುಚಿತ್ರಾಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹೇಶ್, ‘ಸ್ವಾಮೀಜಿ (ಕಮಲಾಕರ್ ಭಟ್) ಅವಳಿಗೆ ಹಣ ನೀಡುತ್ತಿದ್ದ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಅವಳ ಆಟಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅರ್ಧಂಬರ್ಧ ಬಟ್ಟೆ ಹಾಕಿಕೊಂಡು, ಟೇಬಲ್ ಮೇಲೆ ದುಡ್ಡು ಇಟ್ಟುಕೊಂಡು ರೀಲ್ಸ್ ಮಾಡುತ್ತಿದ್ದಳು. ತಾಯಿಯ ಈ ವರ್ತನೆ ಸಹಿಸಲಾಗದೇ ನನ್ನ ಮಗಳು ನನ್ನ ಬಳಿ ಓಡಿ ಬಂದಿದ್ದಳು. ತಾನು ಏನು ಮಾಡುತ್ತಿದ್ದೇನೆ ಎಂಬುದು ಮಗಳಿಗೆ ಗೊತ್ತಿದೆ ಎಂಬ ಕಾರಣಕ್ಕೆ ಅವಳ ಮೇಲೆ ಹಲ್ಲೆ ಮಾಡಲು ಬಂದಿದ್ದರು’ ಎಂದು ಕಿಡಿಕಾರಿದ್ದಾರೆ.

ನನ್ನಿಂದ ಅಣ್ಣ ಸತ್ತ, ಅವರಿಗೆ ಕಠಿಣ ಶಿಕ್ಷೆಯಾಗಲಿ

ಸ್ವಂತ ಮಗಳು ಮತ್ತು ಗಂಡನನ್ನೇ ಸಾಯಿಸಲು ಬಂದಿದ್ದಾರೆ ಎಂದರೆ ಏನರ್ಥ? ಇಂದು ನನ್ನ ಅಣ್ಣನ ಐದನೇ ದಿನದ ಕಾರ್ಯ ನಡೆಯುತ್ತಿದೆ. ನನ್ನಿಂದಲೇ ನನ್ನ ಅಣ್ಣ ಸತ್ತ ಎಂಬ ನೋವು ನನ್ನನ್ನು ಕಾಡುತ್ತಿದೆ. ಆರೋಪಿಗಳ ಬಳಿ ಹಣವಿದೆ. ಹೀಗಾಗಿ ಅವರು ಹೊರಗೆ ಬಾರದಂತೆ ಜೀವಾವಧಿ ಶಿಕ್ಷೆಯಾಗಬೇಕು. ಅಮಾಯಕ ಅಣ್ಣನನ್ನು ಕೊಂದವರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಮಹೇಶ್ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ಆರ್​​ಸಿಬಿಗೆ ಮತ್ತೊಂದು ಕಿರೀಟ.. ವಿನ್ನಿಂಗ್ ಕ್ಷಣ ಹೇಗಿತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

astrologer Kamalakar bhat Siddapura
Advertisment