ಗಂಡನ ಜೀವ ತೆಗೆದಿದ್ದ ಲಕ್ಷ್ಮೀ ಟೀಚರ್​, ಆಕೆಯ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ..

ಅದಿನ್ನೂ ವಾಟ್ಸ್​ಆ್ಯಪ್ ಹಾಗೂ ಫೇಸ್​ಬುಕ್ ಜನಪ್ರಿಯವಾಗುತ್ತಿದ್ದ ಕಾಲ. ಆ ಸಮಯದಲ್ಲಿ ಇಬ್ಬರು ಕಳ್ಳ ಪ್ರೇಮಿಗಳು ನಡೆಸಿದ ಚಾಟ್ ಒಂದು ಕೋರ್ಟ್​ಗೆ ಸಾಕ್ಷಿಯಾಗಿ ಅವರೀಗ ಮರಣದಂಡನೆಗೆ ಗುರಿಯಾಗಿದ್ದಾರೆ. 2016ರಲ್ಲಿ ಭದ್ರಾವತಿ ಟೀಚರ್​​ ಹಾಗೂ ಡ್ರೈವರ್ ಕಳ್ಳಾಟ ಗಂಡನ ಕೊ*ಲೆಯಲ್ಲಿ ಅಂತ್ಯವಾಗಿತ್ತು.

author-image
Ganesh Kerekuli
Shivamogga (1)
Advertisment

ಅದಿನ್ನೂ ವಾಟ್ಸ್​ಆ್ಯಪ್ ಹಾಗೂ ಫೇಸ್​ಬುಕ್ ಜನಪ್ರಿಯವಾಗುತ್ತಿದ್ದ ಕಾಲ. ಆ ಸಮಯದಲ್ಲಿ ಇಬ್ಬರು ಕಳ್ಳ ಪ್ರೇಮಿಗಳು ನಡೆಸಿದ ಚಾಟ್ ಒಂದು ಕೋರ್ಟ್​ಗೆ ಸಾಕ್ಷಿಯಾಗಿ ಅವರೀಗ ಮರಣದಂಡನೆಗೆ ಗುರಿಯಾಗಿದ್ದಾರೆ. 2016ರಲ್ಲಿ ಭದ್ರಾವತಿ ಟೀಚರ್​​ ಹಾಗೂ ಡ್ರೈವರ್ ಕಳ್ಳಾಟ ಗಂಡನ ಕೊ*ಲೆಯಲ್ಲಿ ಅಂತ್ಯವಾಗಿತ್ತು. ಇದೀಗ ಕೋರ್ಟ್​ ಮಹತ್ವದ ತೀರ್ಪು ನೀಡಿದೆ. 

ಏನಿದು ಪ್ರಕರಣ..?

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅನವಟ್ಟಿ ಮೂಲದ ಇಮ್ತಿಯಾಜ್ ಅನ್ನೋರು 2011ರಲ್ಲಿ ಕಲಬುರಗಿಯಲ್ಲಿ ಶಿಕ್ಷಕರಾಗಿ ನೇಮಕವಾಗಿದ್ದರು. ಇವರು ಪಾಠ ಹೇಳುತ್ತಿದ್ದ ಶಾಲೆಯಲ್ಲೇ ಲಕ್ಷ್ಮೀ ಅನ್ನೋ ಟೀಚರ್ ಇದ್ದರು. ಈ ಟೀಚರ್, ಹವ್ಯಾಸಿ ರಂಗಕಲಾವಿದೆ ಕೂಡ ಆಗಿದ್ದರು. ಒಂದೇ ಶಾಲೆಯಲ್ಲಿ ಪಾಠ ಮಾಡುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಸಾಕ್ಷಿಯಾಗಿ ಓರ್ವ ಪುತ್ರನಿದ್ದಾನೆ.

ಇದನ್ನೂ ಓದಿ:ಸಮೀರ್ ವಿಚಾರಣೆ ಅಂತ್ಯ.. ಒಟ್ಟು ಮೂರು ಕೇಸ್​​ ಬಗ್ಗೆ ಪ್ರಶ್ನೆ

ಮದುವೆ ಬಳಿಕ ತನ್ನ ತಾಯಿ ನೋಡಿಕೊಳ್ಳುವ ನೆಪದಲ್ಲಿ ಲಕ್ಷ್ಮಿ ಭದ್ರಾವತಿಗೆ ವರ್ಗಾವಣೆ ಆಗ್ತಾಳೆ. ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮೀಗೆ ಕೃಷ್ಣಮೂರ್ತಿ ಎಂಬ ಬಾಲ್ಯದ ಸ್ನೇಹಿತನಿದ್ದ. ಈತನ ಮನೆಯ ಪಕ್ಕದಲ್ಲೇ ಲಕ್ಷ್ಮೀ ಬಾಡಿಗೆ ಮನೆ ಪಡೆದು ವಾಸವಿದ್ದಳು. ಹಳೆಯ ಸ್ನೇಹ ಗಟ್ಟಿಯಾಗಿ ಲಕ್ಷ್ಮೀ ಪ್ರೇಮದ ಬಲೆಗೆ ಬಿದ್ದಿದ್ದಳು. ಈ ವಿಚಾರ ಇಮ್ತಿಯಾಜ್​ಗೆ ಗೊತ್ತಾಗಿದೆ. 

ಮುಂದೆ ಏನಾಯ್ತು..? 

ಪತ್ನಿಯ ಮತ್ತೊಂದು ಸಂಬಂಧ ಸಹಿಸದ ಗಂಡ, ಬುದ್ಧಿ ಮಾತುಗಳನ್ನ ಹೇಳುತ್ತಾನೆ. ಅದನ್ನ ಕೇಳದ ಆಕೆ ಗಂಡನನ್ನೇ ಮುಗಿಸಲು ಪ್ಲಾನ್ ಮಾಡ್ತಾಳೆ. 2016, ಜುಲೈ 7 ರಂದು ಪ್ರಿಯಕರನ ಜೊತೆ ಸೇರಿಕೊಂಡು ನಿದ್ರೆ ಬರುವ ಮಾತ್ರೆಗಳನ್ನ ಹಾಕಿ, ಹಲ್ಲೆ ಮಾಡಿದ್ದರು. ನಂತರ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಉಸಿರು ನಿಲ್ಲಿಸಿದ್ದರು. ಬಳಿಕ ಮೃತ ದೇಹವನ್ನು ಕೃಷ್ಣಮೂರ್ತಿ ಅಣ್ಣನಾದ ಶಿವರಾಜ್​ನ ಸಹಾಯದಿಂದ ಹತ್ತಿರದ ಚಾನಲ್​ನಲ್ಲಿ ಬಿಸಾಕಿಬಂದಿದ್ದರು. 

ಇದನ್ನೂ ಓದಿ: ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರ.. ಬೆಲೆ ತಿಳಿದರೆ..

Shivamogga

ಪ್ರಕರಣದ ತನಿಖೆ ನಡೆಸಿದ್ದ ನ್ಯೂಟೌನ್‌ ಠಾಣೆ ಇನ್ಸ್‌ಪೆಕ್ಟರ್‌ ಚಂದ್ರಶೇಖರ್.ಟಿ.ಕೆ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭದ್ರಾವತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕೊ*ಲೆ ಆರೋಪ ಸಾಬೀತಾಗಿದೆ. ವಾಟ್ಸ್​ಆ್ಯಪ್ ಚಾಟ್ ಮೂಲಕ ಆರೋಪಿಗಳು ಸಿಕ್ಕಿಬಿದ್ದಿದ್ದೂ ಅಲ್ಲದೇ ಗಂಡನನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತ್ನಿ ಸೇರಿ ಇಬ್ಬರಿಗೆ ಮರಣದಂಡನೆ ವಿಧಿಸಿ ಭದ್ರಾವತಿ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ:ಕಿಲ್ಲರ್​ ಬಿಎಂಟಿಸಿಗೆ ಮತ್ತೊಂದು ಮಗು‌ ಬಲಿ

ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯಾರ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ. ಈ ಹಿನ್ನೆಲೆ ಶಿಕ್ಷಕಿ ಲಕ್ಷ್ಮಿ ಮತ್ತು ಕೃಷ್ಣಮೂರ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಸಾಕ್ಷಿ ನಾಶಕ್ಕೆ ನೆರವಾದ ಶಿವರಾಜ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮೃತ ಶಿಕ್ಷಕ ಇಮ್ತಿಯಾಜ್‌ ಅವರ ತಾಯಿಗೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Shimogga news
Advertisment