/newsfirstlive-kannada/media/media_files/2026/01/29/python-2026-01-29-11-06-40.jpg)
ಶಿವಮೊಗ್ಗ: ಮನೆಯ ಬಾತ್‌ರೂಂಗೆ ಹೋದಾಗ ಅಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕುಳಿತಿದ್ದರೆ ಹೇಗಿರಬೇಡ? ಇಂತದ್ದೊಂದು ಭಯಾನಕ ಘಟನೆ ಶಿವಮೊಗ್ಗ ನಗರದ ಗೋಪಾಳದ ತುಳಸಿ ಬಡಾವಣೆಯಲ್ಲಿ ನಡೆದಿದೆ. ಮನೆಯ ಬಾತ್‌ರೂಂನಲ್ಲಿ ಏಕಾಏಕಿ ಹೆಬ್ಬಾವು ಕಾಣಿಸಿಕೊಂಡಿದ್ದರಿಂದ ಮನೆಯವರು ಕೆಲಕಾಲ ದಿಗಿಲುಗೊಂಡಿದ್ದಾರೆ.
ನಡೆದಿದ್ದೇನು?
ಗೋಪಾಳದ ತುಳಸಿ ಬಡಾವಣೆಯ ನಿವಾಸಿ ವಿನಯ್ ಎಂಬುವರ ಮನೆಯಲ್ಲಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಮನೆಯೊಳಗೆ ನುಸುಳಿದ ಹೆಬ್ಬಾವು ನೇರವಾಗಿ ಬಾತ್‌ರೂಂ ಸೇರಿಕೊಂಡಿದೆ. ಬಾತ್‌ರೂಂಗೆ ಹೋದ ಮನೆಯವರು ಅಲ್ಲಿ ಸುರುಳಿ ಸುತ್ತಿ ಕುಳಿತಿದ್ದ ಬೃಹತ್ ಹೆಬ್ಬಾವನ್ನು ಕಂಡು ಶಾಕ್ ಆಗಿದ್ದಾರೆ. ಆತಂಕಗೊಂಡ ಕುಟುಂಬಸ್ಥರು ಕೂಡಲೇ ಮನೆಯಿಂದ ಹೊರಗೆ ಬಂದು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಲೋಕ್ ಕುಮಾರ್ ಎಂಟ್ರಿ, ಅಧಿಕಾರಿಗಳ ಕಳ್ಳಾಟ ಬಯಲು.. ದರ್ಶನ್ ವಿಚಾರದಲ್ಲಿ ಮತ್ತೇನಾಯ್ತು..?
/filters:format(webp)/newsfirstlive-kannada/media/media_files/2026/01/29/python-1-2026-01-29-11-06-54.jpg)
ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್
ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗದ ಹೆಸರಾಂತ ಉರಗ ತಜ್ಞ ಸ್ನೇಕ್ ಕಿರಣ್ ಸ್ಥಳಕ್ಕೆ ಆಗಮಿಸಿದ್ದಾರೆ. ಬಾತ್‌ರೂಂನಲ್ಲಿ ಅವಿತು ಕುಳಿತಿದ್ದ ಹೆಬ್ಬಾವನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿದು ರಕ್ಷಣೆ ಮಾಡಿದ್ದಾರೆ. ಬಳಿಕ ಆ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ನಿಟ್ಟುಸಿರು ಬಿಟ್ಟ ಕುಟುಂಬ
ಮನೆಯೊಳಗೆ ಹೆಬ್ಬಾವು ಬಂದಿದ್ದರಿಂದ ಭಯಭೀತರಾಗಿದ್ದ ವಿನಯ್ ಮತ್ತು ಅವರ ಕುಟುಂಬಸ್ಥರು, ಹಾವು ರಕ್ಷಣೆಯಾದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ದರಿಂದ ಜನರು ಜಾಗರೂಕರಾಗಿರಬೇಕು ಎಂದು ಉರಗ ತಜ್ಞರು ಸಲಹೆ ನೀಡಿದ್ದಾರೆ. ಈ ಕಾರ್ಯಾಚರಣೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ತವರು ಮನೆಯಲ್ಲಿದ್ದ ಗರ್ಭಿಣಿ ಸೊಸೆಯ ಕತ್ತು ಸೀಳಿದ ಪಾಪಿ ಮಾವ! ಕರುಳು ಹಿಂಡುವಂತಿದೆ ಕೊನೆಯ ಕ್ಷಣಗಳು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us