Advertisment

ಪ್ರಯಾಣಿಕರಿಗೆ KSRTC ಶಾಕ್: ಲಗೇಜ್ 30 ಕೆ.ಜಿ ದಾಟಿದ್ರೆ ಜೇಬಿಗೆ ಕತ್ತರಿ..!

ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಸಂಸ್ಥೆ ಬಿಸಿ ಮುಟ್ಟಿಸಿದೆ. ಇಂದಿನಿಂದಲೇ (ಫೆ. 16) ಜಾರಿಗೆ ಬರುವಂತೆ ಲಗೇಜ್ ದರದಲ್ಲಿ (Luggage Rate Hike) ಏರಿಕೆ ಮಾಡಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

author-image
Ganesh Kerekuli
KSRTC
Advertisment

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಸಂಸ್ಥೆ ಬಿಸಿ ಮುಟ್ಟಿಸಿದೆ. ಇಂದಿನಿಂದಲೇ (ಫೆ. 16) ಜಾರಿಗೆ ಬರುವಂತೆ ಲಗೇಜ್ ದರದಲ್ಲಿ (Luggage Rate Hike) ಏರಿಕೆ ಮಾಡಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

Advertisment

ಬಸ್ ಟಿಕೆಟ್ ದರ ಏರಿಕೆಯಾದಾಗಲೆಲ್ಲಾ ಸಾಮಾನ್ಯವಾಗಿ ಲಗೇಜ್ ದರವನ್ನೂ ಹೆಚ್ಚಿಸಲಾಗುತ್ತದೆ. ಆದರೆ, ಕಳೆದ ವರ್ಷ ಜನವರಿ 2025ರಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಿದ್ದರೂ, ಲಗೇಜ್ ದರವನ್ನು ಪರಿಷ್ಕರಿಸಿರಲಿಲ್ಲ. ಇದೀಗ ಬಾಕಿ ಉಳಿದಿದ್ದ ಆ ಏರಿಕೆಯನ್ನು ಜಾರಿಗೊಳಿಸಲಾಗಿದೆ.

ದರ ಏರಿಕೆಗೆ ಕಾರಣವೇನು?

ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಡೀಸೆಲ್ ದರ, ಸಿಬ್ಬಂದಿ ವೇತನ ಹಾಗೂ ಇತರೆ ನಿರ್ವಹಣಾ ವೆಚ್ಚಗಳು ಹೆಚ್ಚಾಗಿವೆ. ಕಳೆದ ಬಾರಿ (ಜನವರಿ 2025) ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಲಾಗಿತ್ತು. ನಿಯಮದ ಪ್ರಕಾರ ಬಸ್ ದರ ಎಷ್ಟು ಹೆಚ್ಚಾಗುತ್ತದೆಯೋ, ಲಗೇಜ್ ದರವೂ ಅಷ್ಟೇ ಪ್ರಮಾಣದಲ್ಲಿ (15%) ಹೆಚ್ಚಾಗಬೇಕು. ಹೀಗಾಗಿ ಈ ದರ ಪರಿಷ್ಕರಣೆ ಅನಿವಾರ್ಯವಾಗಿದೆ," ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ವಿರುದ್ಧ ಗೆದ್ದರೂ ಕುಲ್ದೀಪ್ ಮೇಲೆ ಹಾರ್ದಿಕ್, ಸೂರ್ಯ ಗರಂ! ಮೈದಾನದಲ್ಲಿ ಆಗಿದ್ದೇನು..? VIDEO

Advertisment

ಕೊನೆಯದಾಗಿ ಡಿಸೆಂಬರ್ 2021ರಲ್ಲಿ ಲಗೇಜ್ ದರವನ್ನು ಹೆಚ್ಚಿಸಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಮತ್ತೆ ದರ ಏರಿಕೆಯಾಗಿದೆ.

ಪರಿಷ್ಕೃತ ಲಗೇಜ್ ದರ ಪಟ್ಟಿ ಹೀಗಿದೆ

  • ಪ್ರಯಾಣಿಕರ ಸಹಿತ ಮತ್ತು ರಹಿತವಾಗಿ ಸಾಗಿಸುವ ಲಗೇಜ್‌ಗಳ ದರವನ್ನು ಪರಿಷ್ಕರಿಸಲಾಗಿದೆ.
  • 1 ರಿಂದ 5 ಹಂತದವರೆಗೆ (Stage): ಈ ಹಿಂದೆ ಇದ್ದ 5 ರೂ. ದರವನ್ನು 6 ರೂ.ಗೆ ಏರಿಸಲಾಗಿದೆ.
  • 6 ರಿಂದ 12 ಹಂತದವರೆಗೆ: ಈ ಹಿಂದೆ ಇದ್ದ 10 ರೂ. ದರವನ್ನು 12 ರೂ.ಗೆ ಏರಿಸಲಾಗಿದೆ.
  • ದೂರದ ಪ್ರಯಾಣ (156 ರಿಂದ 160 ಹಂತ): ಈ ಹಿಂದೆ ಇದ್ದ 123 ರೂ. ದರವನ್ನು ಬರೋಬ್ಬರಿ 145 ರೂ.ಗೆ ಏರಿಸಲಾಗಿದೆ.

ಪ್ರಯಾಣಿಕರಿಗೆ ರಿಲೀಫ್ ಏನು?

ಲಗೇಜ್ ದರ ಏರಿಕೆಯಾಗಿದ್ದರೂ, ಪ್ರಯಾಣಿಕರಿಗೆ ಒಂದು ಸಮಾಧಾನದ ಸಂಗತಿಯೆಂದರೆ 30 ಕೆ.ಜಿ (30 KG) ತೂಕದವರೆಗಿನ ಲಗೇಜ್‌ಗೆ ಯಾವುದೇ ಶುಲ್ಕವಿರುವುದಿಲ್ಲ. ಅದು ಸಂಪೂರ್ಣ ಉಚಿತವಾಗಿರುತ್ತದೆ. 30 ಕೆ.ಜಿ ಮೀರಿದ ಲಗೇಜ್‌ಗೆ ಮಾತ್ರ ಪರಿಷ್ಕೃತ ದರ ಅನ್ವಯವಾಗಲಿದೆ.

Advertisment

ಇದನ್ನೂ ಓದಿ: ಇಶಾನ್ ಕಿಶನ್ ಹೊಗಳಿದ ಪಾಕ್ ಕೋಚ್​; ಪಾಕಿಸ್ತಾನ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ ಹೆಸ್ಸನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC BUS KSRTC
Advertisment
Advertisment
Advertisment