/newsfirstlive-kannada/media/media_files/2025/10/20/arecanut-2025-10-20-19-59-55.jpg)
ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯು (WHO) ಅಡಕೆ ಬೆಳಗಾರರಿಗೆ ಬಿಗ್ ಶಾಕ್ ನೀಡಿದೆ. ಕ್ಯಾನ್ಸರ್​ ಕಾರಕ ನೆಪ ಹೇಳಿ ಅಡಕೆಯನ್ನು ನಿಷೇಧಿಸುವಂತೆ ಕರೆ ನೀಡಿದೆ.
ಅಡಕೆ ವಿಚಾರದಲ್ಲಿ ಕಳೆದ 7 ದಶಕಗಳಿಂದ ಒಂದಲ್ಲ ಒಂದು ತಗಾದೆ ತೆಗೆಯುತ್ತಲೇ ಇರುವ ಡಬ್ಲ್ಯುಎಚ್‌ಒ ಮತ್ತೊಂದು ಸುತ್ತಿನ ಕಿತಾಪತಿ ಆರಂಭಿಸಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೆಯ ಏಷ್ಯಾ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಕೆ ಬಗ್ಗೆ ಕೆಲವು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಭಾರತ, ಬಾಂಗ್ಲಾ, ಭೂತಾನ್, ಉತ್ತರ ಕೊರಿಯಾ, ಮಾಲೀಪ್ಸ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಟೀಮೋರ್ ಲೆಸ್ಟೆ ರಾಷ್ಟ್ರಗಳು ಭಾಗವಹಿಸಿದ್ದವು. ಅಡಕೆ ಕ್ಯಾನ್ಸರ್‌ಕಾರಕ ವಸ್ತುಗಳ ವಿಚಾರದಲ್ಲಿ ಚರ್ಚೆ ನಡೆಸಲಾಗಿದೆ.
ಏಷ್ಯಾ ಒಕ್ಕೂಟದ ಎಲ್ಲ ರಾಷ್ಟ್ರಗಳಲ್ಲಿ ಒಟ್ಟಾಗಿ 28 ಕೋಟಿ ವಯಸ್ಕರು ಮತ್ತು 1.1 ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು, ನಿಕೋಟಿನ್ ವ್ಯಸನಿಗಳಿದ್ದಾರೆ. ಇದು ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಗೆ ಕಾರಣ. ಇವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ. ಈ ಉತ್ಪನ್ನಗಳ ಸಾಲಿನಲ್ಲಿ ಅಡಕೆಯನ್ನೂ ಸೇರಿಸಿದೆ.
ಸಾರ್ವಜನಿಕ ಆರೋಗ್ಯ, ಮರಣ ಪ್ರಮಾಣ ಇಳಿಕೆ ಮತ್ತು ಸಾಮಾಜಿಕ- ಆರ್ಥಿಕ ಹೊರೆಯನ್ನು ಈ ಉತ್ಪನ್ನಗಳ ಬಳಕೆಯಿಂದ ತಪ್ಪಿಸಲು ಆಗ್ನೆಯ ಏಷ್ಯಾದ ರಾಷ್ಟ್ರಗಳು ರಾಷ್ಟ್ರೀಯ ಕ್ರಿಯಾ ಯೋಜನೆ, ನೀತಿ ಆಧರಿತ ಕಾರ್ಯತಂತ್ರ ರೂಪಿಸಲು ವಿಶ್ವ ಆರೋಗ್ಯ ಸಂಸ್ಥೆ ಕೋರಿಕೆಗೆ ಇವು ಸಹಮತ ಸೂಚಿಸಿವೆ ಎಂದು ವರದಿಯಾಗಿದೆ.
ಅಡಕೆ ನಿಷೇಧ ಬಗ್ಗೆ ಆರೇಳು ದಶಕಗಳಿಂದ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಲೇ ಬಂದಿದೆ. 2006ರ ಸಮಯದಲ್ಲಿ ಪಶ್ಚಿಮ ಪೆಸಿಫಿಕ್ ರಾಷ್ಟ್ರಗಳಿಗೆ ಈ ಬಗ್ಗೆ ಸೂಚಿಸಿದರೂ, ಅನುಷ್ಠಾನಗೊಂಡಿಲ್ಲ. ಭಾರತದಲ್ಲಿ ಅಡಕೆ ಗುಣ ಬಗ್ಗೆ ಅಧ್ಯಯನ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ