/newsfirstlive-kannada/media/media_files/2025/10/04/servey-2025-10-04-07-04-47.jpg)
ಸೆಪ್ಟೆಂಬರ್ 22ರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದೆಲ್ಲೆಡೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೀತಿದೆ. ಶಿಕ್ಷಕರು ಮನೆ ಮನೆಗೆ ಸಮೀಕ್ಷೆಯ ಯಾತ್ರೆ ಮಾಡ್ತಿದ್ದಾರೆ. ಇದೀಗ ಬೆಂಗಳೂರಿನಲ್ಲೂ ಕಾಸ್ಟ್ ಸೆನ್ಸಸ್ ಸರ್ವೆ ಇವತ್ತಿನಿಂದ ಆರಂಭವಾಗಲಿದೆ. ಸಮೀಕ್ಷಕರಿಗೆ ಜಿಬಿಎ ತರಬೇತಿ ನೀಡಿದ್ದು, 17 ಸಾವಿರ ಸಿಬ್ಬಂದಿ ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ನಡೆಸಲಿದ್ದಾರೆ.
ಜಾತಿಗಣತಿ.. ಕಾಂಗ್ರೆಸ್ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಗಣತಿ.. ಹಲವು ಅಡೆತಡೆ.. ವಿಘ್ನಗಳ ಮಧ್ಯೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಸ್ಟ್ ಸೆನ್ಸಸ್ ಸೆಪ್ಟೆಂಬರ್ 22ರಿಂದ ನಡೆಯುತ್ತಿದೆ. ಶಿಕ್ಷಕರು ಮನೆ ಮನಗೆ ತೆರಳಿ 60 ಪ್ರಶ್ನೆಗಳ ಮಳೆಗರೆಯುತ್ತಿದ್ದಾರೆ. ಇದೀಗ ಬೆಂಗಳೂರಿಗರೂ ಜಾತಿಗಣತಿ ಸರ್ವೆಗೆ ಮಾಹಿತಿ ಕೊಡಬೇಕಾದ ಸಮಯ ಬಂದಿದೆ.
ಸಮೀಕ್ಷೆಗೆ 17 ಸಾವಿರ ಸಿಬ್ಬಂದಿ ಬಳಕೆ.. 2 ವಾರ ಡೆಡ್‌ಲೈನ್
ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಇವತ್ತಿನಿಂದ ಕಾಂಗ್ರೆಸ್ ಸರ್ಕಾರದ ಮಹತ್ವದ ಜಾತಿಗಣತಿ ಸರ್ವೆ ಆರಂಭವಾಗಲಿದೆ. ನಿನ್ನೆಯಿಂದಲೇ ಸರ್ವೆ ಆರಂಭವಾಗಬೇಕಿತ್ತು. ದಸರಾ ಹಿನ್ನೆಲೆಯಲ್ಲಿ ಇವತ್ತಿನಿಂದ ಪೂರ್ಣಪ್ರಮಾಣದ ಸರ್ವೆ ನಡೆಯಲಿದೆ. ಸಮೀಕ್ಷೆ ನಡೆಸೋಕೆ ಜಿಬಿಎ ತಯಾರಿ ನಡೆಸಿದ್ದು, ನಿನ್ನೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಸಾವಿರಾರು ಸಿಬ್ಬಂದಿಗೆ ತರಬೇತಿಯನ್ನೂ ನೀಡಿದೆ.
ಜಿಬಿಎ ವ್ಯಾಪ್ತಿ ಜಾತಿಗಣತಿ
- ವಿವಿಧ ಇಲಾಖೆಯ ಸುಮಾರು 17 ಸಾವಿರ ಸಿಬ್ಬಂದಿ ಸರ್ವೆಗೆ ಬಳಕೆ
- ಪ್ರತಿ ವಾರ್ಡ್‌ಗೆ ತಲಾ 70 ರಿಂದ 80 ಸಮೀಕ್ಷಕರ ನೇಮಕಕ್ಕೆ ಪ್ಲಾನ್
- ಬೆಸ್ಕಾಂ ಸಿಬ್ಬಂದಿ ಮಾಡಿರೋ ಜಿಯೋಟ್ಯಾಗ್ ಆಧರಿಸಿ ಸಮೀಕ್ಷೆ
- ಆರೋಗ್ಯ ಸಮಸ್ಯೆ ಇರುವವರು, ವಿಶೇಷಚೇತನರಿಗೆ ವಿನಾಯಿತಿ
- ಸೂಕ್ತ ದಾಖಲೆಗಳ ಸಲ್ಲಿಕೆ ಮಾಡಿದ್ರೆ ವಿನಾಯಿಕಿ ನೀಡಲಿರೋ GBA
- ಅನಾವಶ್ಯಕವಾಗಿ ಗೈರಾದ್ರೆ ಕ್ರಮ ಕೈಗೊಳ್ಳಲು GBAಗೆ ಅಧಿಕಾರ
ಇದನ್ನೂ ಓದಿ:ಒಳ್ಳೆ ಕೆಲಸಕ್ಕೆ ಕೈ ಹಾಕಿದ್ರೆ ಶುಭ ಫಲ.. ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳಲ್ಲೂ ಯಶಸ್ಸು; ಇಲ್ಲಿದೆ ಇಂದಿನಿ ಭವಿಷ್ಯ!
ಬೆಂಗಳೂರಿನಲ್ಲಿ ಜಾತಿ ಸಮೀಕ್ಷೆಗೆ ಮುಕ್ತಾಯಕ್ಕೆ ಎರಡು ವಾರಗಳ ಕಾಲ ಡೆಡ್‌ಲೈನ್ ನೀಡಲಾಗಿದೆ. ಎರಡು ವಾರಗಳ ಒಳಗೆ ಸಮೀಕ್ಷೆ ಮುಗಿಸಲು ಜಿಬಿಎ ಆಯುಕ್ತರು ಸೂಚನೆ ನೀಡಿದ್ದಾರೆ. ಸಮೀಕ್ಷೆಗೆ ಕೆಎಎಸ್ ಅಧಿಕಾರಿಗಳನ್ನ ಸೂಪರ್ ವೈಸರ್ ಆಗಿ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿನಲ್ಲೂ ಇವತ್ತು ಜಾತಿಗಣತಿ ಸರ್ವೆ ಆರಂಭವಾಗುತ್ತಿದೆ. ಯಾವುದೇ ರೀತಿಯ ತಾಂತ್ರಿಕ ತೊಂದರೆ ಇಲ್ಲದೇ ಸರ್ವೆ ಕಾರ್ಯ ನಡೆಯಬೇಕಿದೆ. ಈಗಾಗಲೇ ಟೆಕ್ನಿಕಲ್ ಸವಾಲುಗಳನ್ನ ಸರ್ಕಾರ ಬಗೆಹರಿಸಿದ್ದು, 2 ವಾರಗಳಲ್ಲಿ ಸರ್ವೆ ಮುಗಿಯುತ್ತಾ? ಕಾದುನೋಡಬೇಕಿದೆ.
ಇದನ್ನೂ ಓದಿ:ನೋಡುತ.. ನೋಡುತ ಚಿನ್ನಾಭರಣ ಕದ್ದ ದಪಂತಿ.. ಆ ಬ್ಯೂಟಿಫುಲ್ ನೆಕ್ಲೇಸ್ ಬೆಲೆ ಎಷ್ಟು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ