Advertisment

ವಿವಾಹದ ಬಳಿಕ ಸುಹಾನ ದಂಪತಿ ಫಸ್ಟ್ ರಿಯಾಕ್ಷನ್..! ಏನಂದ್ರು..?

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಅಂದ್ರೆ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಸೂತ್ರದ ಮೂಲಕ ಮದುವೆಯಾಗಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್​ಗೆ ನವಜೋಡಿ ಸುಹಾನ-ನಿತಿನ್ ಪ್ರತಿಕ್ರಿಯೆ ನೀಡಿದ್ದಾರೆ.

author-image
Ganesh Kerekuli
ss1
Advertisment

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ (Suhaana Syed) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಅಂದ್ರೆ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಸೂತ್ರದ ಮೂಲಕ ಮದುವೆಯಾಗಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್​ಗೆ ನವಜೋಡಿ ಸುಹಾನ-ನಿತಿನ್ ಪ್ರತಿಕ್ರಿಯೆ ನೀಡಿದ್ದಾರೆ.

Advertisment

ಇದನ್ನೂ ಓದಿ:ರಘು ದೀಕ್ಷಿತ್‌ ಕೈ ಹಿಡಿಯುತ್ತಿರುವ ವಾರಿಜಶ್ರೀ ಯಾರು? ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟು?

Singer Suhana

ವಿಶ್ವ ಮಾನವ ಸಂದೇಶ ಉದ್ದೇಶ..

ನ್ಯೂಸ್ ಫಸ್ಟ್​ಗೆ ಪ್ರತಿಕ್ರಿಯಿಸಿದ ಸುಹಾನ ಹಾಗು ನಿತಿನ್, ಮಂತ್ರ ಮಾಂಗಲ್ಯ ವಿಚಾರ ಓದಿದಾಗಿನಿಂದ ನಮಗೆ ಅದರ ಬಗ್ಗೆ ಕುತೂಹಲವಿತ್ತು. ಇದೇ ರೀತಿ ಮದುವೆ ಆಗ್ಬೇಕು ಅನ್ನೋದು ನಮ್ಮ ಆಶಯವಾಗಿತ್ತು.  ವಿಶ್ವಮಾನವತವಾದ ಅನ್ನೋದು ಸುಮ್ಮನೇ ಅಲ್ಲ. ಹೀಗಾಗಿ ಮಾದರಿ ಮದುವೆ ಆಗಿದ್ದೇವೆ. ನಾವಿಬ್ಬರು ಹೈ ಸ್ಕೂಲ್​ ಸ್ನೇಹಿತರು, ಆಗಿನಿಂದಲೂ ಪರಿಚಯ. ಇಬ್ಬರು ಮನೆ ಕಡೆಯಿಂದ ಒಪ್ಪಿಗೆ ಪಡೆದು ಮದುವೆ ಆಗ್ತಿದ್ದೇವೆ. ಆಗ ಸ್ನೇಹವೋ, ಪ್ರೀತಿಯೋ ಗೊತ್ತಿರಲಿಲ್ಲ. ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀವಿ. ಕರ್ನಾಟಕದ ಜನತೆ ಪ್ರೀತಿಯಿಂದ ನಮ್ಮನ್ನು ಹರಸಿದ್ದಾರೆ. ನಾವು ಮಾದರಿಯಾಗಿ ಬದುಕುತ್ತೇವೆ ಎಂದು ಹೇಳಿದ್ದಾರೆ. 

ಮಾದರಿಯಾದ ಸುಹಾನ-ನಿತಿನ್ ಜೋಡಿ..

ಆಡಂಬರ ಹಾಗು ಸಾಲ ಸೂಲ ಮಾಡಿಕೊಂಡು ಮದುವೆಯಾಗುವ ಈ ಕಾಲದಲ್ಲಿ, ಮದುವೆಯೆಂಬುದು ಎರಡು ಮನಸ್ಸುಗಳು ಒಂದಾಗುವುದೇ ಹೊರತು ತೋರುವಿಕೆಗಲ್ಲ ಎಂಬುವುದನ್ನು, ವಿಶ್ವಮಾನವ ಕುವೆಂಪುರವರ ಆಶಯದ ಮಂತ್ರ ಮಾಂಗಲ್ಯ ಸೂತ್ರದ ಪ್ರಕಾರ ಮದುವೆಯಾಗಿ ಯುವಕರಿಗೆ ಮಾದರಿಯಾಗಿದ್ದಾರೆ.  

Advertisment

ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ.. ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News marriage suhaana syed
Advertisment
Advertisment
Advertisment