/newsfirstlive-kannada/media/media_files/2025/09/22/caste-census-2025-09-22-07-43-00.jpg)
ಹಲವು ಸಮುದಾಯಗಳ ವಿರೋಧ, ಅಸಮಾಧಾನ, ಆಕ್ಷೇಪ, ಕಳವಳದ ನಡುವೆಯೇ ಇಂದಿನಿಂದ ರಾಜ್ಯದಲ್ಲಿ ಜಾತಿ ಗಣತಿ ಆರಂಭವಾಗಲಿದೆ. ವಿವಾದಿತ ಜಾತಿಗಳಿಗೆ ಕಿಕ್​ಔಟ್​​ ಮಾಡಿ ಸಮೀಕ್ಷೆಯ ಸಮರಕ್ಕೆ ರಾಜ್ಯ ಸರ್ಕಾರ ಇಳಿಯುತ್ತಿದೆ.
ಇಂದಿನಿಂದ ರಾಜ್ಯದಲ್ಲಿ 16 ದಿನಗಳ ಕಾಲ ಜಾತಿ ಗಣತಿ
ಕಾಂಟ್ರವರ್ಸಿ ಕಾಸ್ಟ್​​​ಗಳನ್ನ ಕೈಬಿಟ್ಟು ಸರ್ಕಾರ, ಇಂದಿನಿಂದ ನಿಗದಿಯಂತೆ ಜಾತಿ ಗಣತಿಗೆ ಚಾಲನೆ ಕೊಟ್ತಿದೆ. ರಾಜ್ಯಪಾಲ ಗೆಹ್ಲೋಟ್​, ಅವರ ಸಲಹೆ ಮೇರೆಗೆ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ 33 ಕ್ರಿಶ್ಚಿಯನ್ ಉಪ-ಜಾತಿಗಳನ್ನ ತೆಗೆದುಹಾಕಿದೆ. ಈ ಮೂಲಕ ಕ್ರಿಶ್ಚಿಯನ್ ಉಪ ಜಾತಿ ವಿವಾದಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್​​ ನಾಯ್ಕ್​ ಸುದ್ದಿಗೋಷ್ಠಿ ನಡೆಸಿ ಜಾತಿಗಳನ್ನ ಸೃಷ್ಟಿಸುವ ಕೆಲಸ ಆಯೋಗ ಮಾಡಲ್ಲ ಎಂದು ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧಕ್ಕೆ ತುತ್ತಾಗಿದ್ದ ಅಂಶಗಳನ್ನ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ ದೂರ ಇಟ್ಟಿದೆ.
ಇದನ್ನೂ ಓದಿ:GST 2.0 ದೇಶದಾದ್ಯಂತ ಜಾರಿ.. ಯಾವ ವಸ್ತುವಿನಿಂದ ಎಷ್ಟು ರೂಪಾಯಿ ಉಳಿತಾಯ ಆಗಲಿದೆ..?
ಹೇಗಿರುತ್ತೆ ‘ಜಾತಿ’ ಸಮೀಕ್ಷೆ?
- 1.75 ಲಕ್ಷ ಶಿಕ್ಷಕರನ್ನು ಬಳಸಿಕೊಂಡು ಜಾತಿ ಗಣತಿ ಸಮೀಕ್ಷೆ​
- ಒಬ್ಬ ಸಮೀಕ್ಷಕರು ದಿನಕ್ಕೆ ಅಂದಾಜು 7 - 8 ಮನೆಗಳ ಸಮೀಕ್ಷೆ
- ಒಟ್ಟು 16 ದಿನಗಳಲ್ಲಿ ಸುಮಾರು 2 ಕೋಟಿ ಕುಟುಂಬಗಳ ಸಮೀಕ್ಷೆ
- ಮೊಬೈಲ್​ ಆ್ಯಪ್​ನಲ್ಲಿ 2 ಕೋಟಿ ಕುಟುಂಬಗಳ ಮಾಹಿತಿ ಸಂಗ್ರಹ
- ಸರ್ವೇಗೆ ಆಧಾರ್ ನಂ. ಕಡ್ಡಾಯ, ಮನೆಯ ಮುಖ್ಯಸ್ಥರ ದೃಢೀಕರಣ
- ಜಿಯೋ ಟ್ಯಾಗ್ ಮೂಲಕ ಒಂದೊಂದು ಬ್ಲಾಕ್ ಮಾಡಲಾಗಿದೆ
- 130 ರಿಂದ 140 ಮನೆಗಳು ಸೇರಿ ಒಂದೊಂದು ಬ್ಲಾಕ್​ ಆಗಲಿದೆ
- ಎಲ್ಲ ಮನೆಗಳನ್ನೂ ಮ್ಯಾಪ್ ಮಾಡಿದ್ದು, ಸಿಸ್ಟಮ್​ನಲ್ಲಿ ಅಪ್ಲೋಡ್
- ಸಮೀಕ್ಷಾ ನಮೂನೆಯಲ್ಲಿ 60 ಪ್ರಶ್ನೆಗಳಿದ್ದು, ಮಾಹಿತಿ ನೀಡ್ಲಾಗಿದೆ
- ಜಾತಿ, ಉಪ ಜಾತಿಗಳ ಕಾಲಂ, ಪಟ್ಟಿ ನಂತರ ಗ್ರೂಪ್ ನಿರ್ಧಾರ
- ಆನ್​ಲೈನ್​ನಲ್ಲಿ ಸಮೀಕ್ಷೆಗೆ ಅವಕಾಶ, ಅಲ್ಲೂ ಆಧಾರ್ ಪರಿಶೀಲನೆ
ಇದನ್ನೂ ಓದಿ:ಇಂದು ಕಾಂತಾರ ಪ್ರೀಕ್ವೆಲ್ ಮೂವಿ ಟ್ರೈಲರ್​ ಬಿಡುಗಡೆ.. ಸ್ಪೆಷಲ್ ಏನು ಗೊತ್ತಾ..?
ಒಟ್ಟಾರೆ, ಜಾತಿ ನಮೂದಿಸುವ ವಿಚಾರದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆ ಜಾತಿ ಕಾಲಂ ನಿಷ್ಕ್ರಿಯಗೊಳಿಸಲಾಗಿದೆ.. ಧರ್ಮ, ಜಾತಿ, ಉಪಜಾತಿ ನಮೂದು ಜನರ ಆಯ್ಕೆಗೆ ಬಿಡಲಾಗಿದೆ.. ಸಮೀಕ್ಷೆ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಜಾತಿ ನಮೂದಿಸಲು ಅವಕಾಶ ನೀಡಲಾಗಿದೆ.. ಇನ್ನು ಜಾತಿ ಗಣತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ:ಮೈಸೂರು ದಸರಾ ಮಹೋತ್ಸವಕ್ಕೆ ಇವತ್ತು ಚಾಲನೆ.. ಸ್ಪೆಷಲ್ ವಿಡಿಯೋ ಹಂಚಿಕೊಂಡ ಸಿಎಂ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ