ವರ್ಷದ ಕೊನೆಯ ನಿಮ್ಮ ರಾಶಿ ಭವಿಷ್ಯ ಹೇಗಿದೆ..? ಶುಭನಾ? ಅಶುಭನಾ?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯಾ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಕೃತ್ತಿಕಾ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ:ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮಾಲೀಕನ ಕುಟುಂಬದ ವಿರುದ್ಧ ಡೌರಿ ಕೇಸ್; ನ್ಯಾಯಕ್ಕಾಗಿ ಕಣ್ಣೀರಿಟ್ಟ ಸೊಸೆ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆಸ್ತಿ ಬದಲಾವಣೆ ವಿಚಾರದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ನಿಮ್ಮ ಬಂಧುಗಳಲ್ಲಿ ಮಂಗಳ ಕಾರ್ಯದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ದೈಹಿಕವಾದ ಆಯಾಸದಿಂದ ಕೋಪ ಹೆಚ್ಚಾಗಬಹುದು
  • ಕೋರ್ಟ್ ವಿಚಾರದಲ್ಲಿ ವಿಶೇಷವಾದ ಚರ್ಚೆ ಸಾಧ್ಯತೆ
  • ಆರೋಗ್ಯ, ಹಣದ ಸಮಸ್ಯೆ ಕುರಿತು ಸರಿಯಾದ ನಿರ್ಧಾರ ಮಾಡಿದರೆ ಒಳ್ಳೆಯದು
  • ನಿಮ್ಮ ಶಕ್ತಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ
  • ಶ್ರೀರಾಮ ಪರಿವಾರ ದೇವರನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಬಹಳ ಶುಭದಿನ
  • ಮಾಧ್ಯಮದಲ್ಲಿ ಕೆಲಸ ನಿರ್ವಹಣೆ ಮಾಡುವವರಿಗೆ ತೃಪ್ತಿ, ಲಾಭವಿದೆ
  • ಸ್ವಸಾಮರ್ಥ್ಯದಿಂದ ಜನರ ಮೆಚ್ಚುಗೆ ದೊರೆಯಬಹುದು
  • ಅತಿಯಾದ ಯೋಚನೆಗಳು ಆತಂಕಕಾರಿಯಾಗಬಹುದು 
  • ನಿಮ್ಮ ಕೆಲಸದಲ್ಲಿ ಜಾಗ್ರತೆಯಿಂದಿರಿ
  • ಸಾಕು ಪ್ರಾಣಿಗಳಿಗೆ ಆಹಾರ ನೀಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಂದ ತೊಂದರೆಯಾಗಬಹುದು, ಅದರ ಬಗ್ಗೆ ಗಮನವಿರಲಿ
  • ನಿಮ್ಮ ರಹಸ್ಯ ವಿಚಾರಗಳಿಂದ ನಿಮಗೇ ತೊಂದರೆ ಅವಮಾನ ಸಾಧ್ಯತೆ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ದಿನ
  • ನಿಮ್ಮ ತಪ್ಪು ನಿಮ್ಮನ್ನು ಕಾಡಬಹುದು
  • ನಿಮ್ಮ ವ್ಯಾಪಾರ, ವ್ಯವಹಾರ ವೇಗವಾಗಿ ನಡೆಯುವ ದಿನ
  • ಸ್ವಂತ ಬುದ್ಧಿಯಿಂದ ನಿಮ್ಮ ಕೆಲಸವನ್ನು ಮಾಡಿ 
  • ಬೇರೆಯವರನ್ನು ಅನುಸರಿಸಿ ಆದರೆ ಅನುಕರಿಸಬೇಡಿ
  • ಸುಬ್ರಹ್ಮಣ್ಯನಿಗೆ ಭಸ್ಮದಿಂದ ಅರ್ಚನೆ ಮಾಡಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಂದ ಸಂತೋಷ ಸಿಗುವ ದಿನ
  • ಉದ್ಯೋಗ, ವೃತ್ತಿಯಲ್ಲಿ ಬದಲಾವಣೆಯಾಗಬಹುದು
  • ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವೇ ಮಾಡಿದರೆ ಒಳ್ಳೆಯದು
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಬೇರೆಯವರ ಸಹಾಯ ನಿರೀಕ್ಷೆಯಲ್ಲಿದ್ದರೆ ನಿರಾಸೆ ಉಂಟು ಮಾಡಬಹುದು
  • ಹಣದ ಅಭಾವ, ತುಂಬಾ ಬೇಸರ, ವೈರಾಗ್ಯದ ಮಾತು ಉಂಟಾಗಬಹುದು
  • ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲಸದಿಂದ ಆಯಾಸ, ಬೇಸರ, ಆಲಸ್ಯ ಕಾಡಬಹುದು ಜಾಗ್ರತೆವಹಿಸಿ
  • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರು ಬರದಂತೆ ಗಮನಿಸಿ
  • ಸಾಮಾಜಿಕ ಸ್ಥಾನ ಮಾನ ಅಪೇಕ್ಷಿಸುವ ದಿನ
  • ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
  • ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಬೇಡಿ
  • ವೃದ್ಧರಿಗೆ ಹಣ್ಣು ಕೊಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಲೇಖಕರಿಗೆ ಉತ್ತಮವಾದ ದಿನ
  • ಕಷ್ಟಗಳನ್ನು ನಿಮ್ಮ ಮನಸ್ಥೈರ್ಯದಿಂದ ದೂರ ಮಾಡಿಕೊಳ್ಳಬೇಕು
  • ಇಂದು ಮಕ್ಕಳಿಂದ  ಪೋಷಕರಿಗೆ ಬೇಸರ ಆಗಬಹುದು
  • ಹಳೆಯ ನೆನಪುಗಳಿಂದ ಸಂತೋಷವಾಗಲಿದೆ
  • ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಬಹುದು
  • ನೆಂಟರಿಷ್ಟರಲ್ಲಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ ಇಲ್ಲದಿದ್ದರೆ ಅಪಮಾನ ಸಾಧ್ಯತೆ
  • ಪಾರ್ವತಿ-ಪರಮೇಶ್ವರರನ್ನು ಪ್ರಾರ್ಥಿಸಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನ ಮನ್ನಣೆ, ಗೌರವ, ಪುರಸ್ಕಾರ ಸಿಗಬಹುದು
  • ಯಾವುದೇ ರೀತಿಯ ಬದಲಾವಣೆಯ ವಿಚಾರವನ್ನು ತಲೆಯಿಂದ ತೆಗೆದುಹಾಕಿ
  • ಸಾಧು-ಸಂತರ ಸಮಾಗಮನವಾಗಬಹುದು
  • ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೀರಿ
  • ವೃತ್ತಿಯಲ್ಲಿ ಲಾಭದ ಜೊತೆ ಸಾಧನೆ ಮಾಡುವ ಅವಕಾಶವಿದೆ
  • ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಮಕ್ಕಳಿಗೆ ಸಿಹಿ ಪದಾರ್ಥ ಹಂಚಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಅಪಘಾತ ಸಂಭವಿಸುವ ಸೂಚನೆಯಿದೆ ಎಚ್ಚರ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆಯಿದೆ
  • ಮನೆಯವರಿಗೆ ಬಹಳ ವಿಧೇಯರಾಗಿ ವರ್ತಿಸಿ
  • ಆರೋಗ್ಯದಲ್ಲಿ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಿ
  • ತುಂಬಾ ಗಣ್ಯ, ಶ್ರೀಮಂತ ವ್ಯಕ್ತಿಯ ಭೇಟಿಗೆ ಅವಕಾಶವಿದೆ ಲಾಭವೂ ಇದೆ
  • ನಿಮ್ಮ ಆಸೆಗಳು ಇಂದು ಈಡೇರಬಹುದು
  • ಅಘೋರ ರುದ್ರನನ್ನು ಆರಾಧಿಸಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆ ಕಟ್ಟುವ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯತೆ 
  • ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಸಾಧ್ಯತೆ
  • ಜೀವನದಲ್ಲಿ ಅಸ್ಥಿರತೆ ಕಾಡಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ ದಿನ
  • ಬಂಧುಗಳಲ್ಲಿ ವ್ಯವಹಾರಿಕ ವಿಚಾರಕ್ಕೆ ಬೇಸರ ಕಲಹ ಸಾಧ್ಯತೆ
  • ಇಂದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
  • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಆದರೆ ಸಾಯಂಕಾಲಕ್ಕೆ ಸರಿ ಹೋಗುವ ಸೂಚನೆಯಿದೆ 
  • ರಾಜಕೀಯ ವಿಚಾರಗಳಲ್ಲಿ ಸ್ವಲ್ಪ ಸಮಾಧಾನ ಸಿಗುವ ದಿನ
  • ಅಪರೂಪದ ವ್ಯಕ್ತಿಯ ಭೇಟಿ ಅಥವಾ ಆಗಮನದಿಂದ ಸಂತೋಷ ಸಾಧ್ಯತೆ
  • ರಾಜಕಾರಣಿಗಳಿಗೆ ಶುಭವಾದ ದಿನ
  • ಮನೋರಂಜನೆಗೆ ಅವಕಾಶ ಸಿಗುವ ದಿನ
  • ಮನೆ, ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವ ಕುಟುಂಬಸ್ಥರಿಂದ ನೆಮ್ಮದಿ
  • ಕುಬೇರನನ್ನು ಪ್ರಾರ್ಥನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆಯಿದೆ
  • ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
  • ಹಿರಿಯರ ಸಲಹೆ ಬಹಳ ಮುಖ್ಯವಾಗುತ್ತದೆ ತಾತ್ಸಾರ ಬೇಡ
  • ಅಪರಿಚಿತರಲ್ಲಿ ಯಾವುದೇ ರೀತಿಯ ನಂಬಿಕೆ ಬೇಡ
  • ಇಂದು ವಿನಾಕಾರಣ ಪ್ರಯಾಣ ಬೇಡವೆಂಬ ಸೂಚನೆಯಿದೆ
  • ಆರೋಗ್ಯ ಸಮಸ್ಯೆ ಆಲಸ್ಯ ಕಾಡಬಹುದು
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರತೀಕ್ಷಣವು ಜಾಗರೂಕರಾಗಿರಬೇಕಾದ ದಿನ
  • ವೃತ್ತಿ ಜೀವನ ಬದಲಾಯಿಸಲು ಈಗ ಸೂಕ್ತ ಸಮಯವಲ್ಲ
  • ಇಂದು ತುಂಬಾ ತಾಳ್ಮೆಯಿಂದ ವರ್ತಿಸಿ
  • ಗೌರವಾನ್ವಿತ ವ್ಯಕ್ತಿಗಳು ಉತ್ತಮವಾದ ಸಲಹೆಗಳನ್ನ ನೀಡಬಹುದು
  • ನಿಮ್ಮ ಯೋಜನೆಗೆ ಕುಟುಂಬದವರ ಸಂಪೂರ್ಣ ಸಹಕಾರ ಸಿಗುವ ದಿನ
  • ಇಂದು ಹಳೆಯ ಸ್ನೇಹಿತರು ಸಂಪರ್ಕಕ್ಕೆ ಬರಬಹುದು
  • ವಿಘ್ನೇಶ್ವರನ ಪ್ರಾರ್ಥನೆ ಮಾಡಿ

ಇದನ್ನೂ ಓದಿ: ಮಗಳಿಗಾಗಿ ಕೆಂಪು ಚೆಟ್ನಿ ಮಾಡ್ಕೊಂಡು ಬಂದಿದ್ದೆ, ಮನೆ ಖರೀದಿಸಲು ಮುಂದಾಗಿದ್ದೆ -ನಂದಿನಿ ಅಮ್ಮನ ನೋವಿನ ಮಾತುಗಳು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Rashi Bhavishya Horoscope
Advertisment