/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಇಂಡಿಯಾ A ತಂಡದಲ್ಲಿ ರೋಹಿತ್-ಕೊಹ್ಲಿ​ಗೆ ಸ್ಥಾನ ಇಲ್ಲ.. ಅರ್ಥವೇ ಆಗದ ಬಿಸಿಸಿಐ ನಡೆ..!
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮದಲ್ಲದಿರುವ ಕೆಲಸಕ್ಕೆ ಸಹಾಯ ಮಾಡಲು ಹೋಗಬೇಡಿ
- ಇಂದು ಗರ್ಭಿಣಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ
- ಕಬ್ಬಿಣದ ವಸ್ತುಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
- ಈ ದಿನ ಹಿರಿಯರನ್ನ ಗೌರವಿಸಿ ಆಶೀರ್ವಾದವನ್ನು ಪಡೆಯಿರಿ
- ಹಣದ ನಿರ್ವಹಣೆಯಲ್ಲಿ ಯಶಸ್ಸು ಕಾಣುತ್ತೀರಿ
- ರಂಗಭೂಮಿ ಕಲಾವಿದರಿಗೆ ಗೌರವ ಸನ್ಮಾನಗಳು ಸಿಗುವ ದಿನ
- ಶನೇಶ್ಚರನನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮೊಬೈಲ್​ ಬಳಸಿ ವಾಹನ ಚಲಾಯಿಸುವಾಗ ಅವಘಡ ಆಗಬಹುದು, ಎಚ್ಚರಿಕೆ ಇರಲಿ
- ನಿಮ್ಮ ಆರೋಗ್ಯದ ಏರುಪೇರಿನಿಂದಾಗಿ ಮನೆಯವರ ನೆಮ್ಮದಿ ಕೆಡಬಹುದು
- ಕಷ್ಟ ನಿರ್ಮೂಲ ಮಾಡಲು ದೇವರ ಧ್ಯಾನ ಮಾಡಿ
- ಮರಗೆಲಸ ಮಾಡುವವರಿಗೆ ಉತ್ತಮ ದಿನ
- ಯಾವುದೇ ರೀತಿಯ ಭಯ ತಾತ್ಸಾರ ಬೇಡ
- ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಯಾದಿಗಳ ಮಾತಿನಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
- ಹಳೆಯ ಜಗಳ, ವಿವಾದಗಳು ಇಂದು ರಾಜಿಯಾಗಬಹುದು
- ಹೊಸ ಸಂಬಂಧಕ್ಕೆ ಒಳ್ಳೆಯ ದಿನ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತದೆ
- ಮನೆಯಲ್ಲಿ ಉತ್ತಮ ವಾತಾವರಣ
- ನಿಮ್ಮ ವಿವಾಹದ ಮಾತುಕತೆ ಸಾಧ್ಯತೆ
- ಮನಸ್ಸಿಗೆ ಸಂಪೂರ್ಣ ನೆಮ್ಮದಿಯ ದಿನ
- ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಬಹಳ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ
- ಪ್ರಯಾಣಕ್ಕೆ ಅಡ್ಡಿ ಉಂಟಾಗಿ ಮುಂದೂಡಲ್ಪಡಬಹುದು
- ಮನೆಯಿಂದ ಹೊರಡುವಾಗ ಜಗಳವಾಗುವ ಸಾಧ್ಯತೆ ಇದೆ
- ವಿದ್ಯಾರ್ಥಿಗಳಿಗೆ ಶುಭವಾದ ದಿನ
- ಪ್ರೇಮಿಗಳಿಗೆ ಸಮಸ್ಯೆಯಾಗುವ ದಿನ
- ಗಂಡ ಹೆಂಡತಿ ನಡುವೆ ಜಗಳ ಮನಸ್ತಾಪ ಏರ್ಪಡುವ ಸಾಧ್ಯತೆ
- ಜ್ವರದ ತಾಪವೂ ನಿಮ್ಮನ್ನು ಕಾಡಬಹುದು
- ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ಥಿರಾಸ್ತಿ, ಭೂಮಿ, ವಾಹನ, ಬೆಲೆ ಬಾಳುವ ಪದಾರ್ಥಗಳ ಖರೀದಿಯಲ್ಲಿ ಮೋಸ
- ಹೆಚ್ಚು ಹಣ ಕೊಟ್ಟು ಖರೀದಿಸಿದ ವಸ್ತು ರಿಪೇರಿಗೆ ಬರಬಹುದು
- ಆಲಸ್ಯ ಮತ್ತು ಅತಿಯಾದ ನಂಬಿಕೆಯಿಂದ ಮೋಸ ಸಾಧ್ಯತೆ
- ಸಂಬಂಧಪಟ್ಟವರ ಜೊತೆ ಜಗಳವಾಗಬಹುದು
- ಕುಬೇರ ಲಕ್ಷ್ಮಿಯನ್ನು ಆರಾಧಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಇರಲಿದೆ
- ವಿದ್ಯಾರ್ಥಿಗಳಿಗೆ ಓದು ಬರಹದ ಒತ್ತಡ ಹೆಚ್ಚಾಗುವುದರಿಂದ ನಿದ್ರಾಭಂಗ ಸಾಧ್ಯತೆ
- ಆರೋಗ್ಯದಲ್ಲಿ ಏರುಪೇರು, ಬುದ್ಧಿ ಚಾಂಚಲ್ಯ, ಮಂದತ್ವ ಕಾಡಬಹುದು
- ಇಂದು ವಿದ್ಯಾರ್ಥಿಗಳಿಗೆ ಅಶುಭ ಫಲ
- ಕೋರ್ಟ್ ಕಛೇರಿಗಳಲ್ಲಿ ಜಯ ಸಿಗಲಿದೆ
- ಆಕಸ್ಮಿಕ ಬೆಂಕಿ ಅವಘಡ ಸಾಧ್ಯತೆಯಿದೆ ಎಚ್ಚರಿಕೆ ಇರಲಿ
- ಧೂಮಾವತಿಯನ್ನು ಪ್ರಾರ್ಥಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗದಲ್ಲಿ ಅನುಕೂಲ, ಸಾಲದಿಂದ ಮುಕ್ತಿ ಸಾಧ್ಯತೆ
- ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಗುರುಗಳಿಂದ ಮಾರ್ಗದರ್ಶನ ಪಡೆಯಿರಿ
- ಶತ್ರುಗಳನ್ನು ತಡೆಯಲು ನಿಮಗೆ ಮಾತಿನ ಅಸ್ತ್ರಗಳು, ಉಪಾಯಗಳು ದೊರೆಯುತ್ತವೆ
- ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
- ಮನೆಗೆ ಹೊಸ ವಸ್ತು ಖರೀದಿಸುತ್ತೀರಿ ಆದ್ರೆ ಖರೀದಿಸಿದ ವಸ್ತುವಿನಿಂದ ನಷ್ಟ ಸಾಧ್ಯತೆ
- ಭೈರವನನ್ನು ಪ್ರಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳಿಂದ ಅಥವಾ ತಮಗಿಂತ ಚಿಕ್ಕವರಿಂದ ತುಂಬಾ ಕಿರಿಕಿರಿಯಾಗಬಹುದು
- ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
- ಅಧಿಕ ಖರ್ಚು ವೆಚ್ಚದಿಂದಾಗಿ ತಾಳ್ಮೆ ಕೆಡುತ್ತದೆ
- ಕೆಲಸ ಕಾರ್ಯಗಳಲ್ಲಿ ವಿಘ್ನ ಆಗಬಹುದು
- ಸಾಮಾಜಿಕ ಜನಪ್ರಿಯತೆಯಲ್ಲಿ ಅನುಮಾನ, ಅವಮಾನ ಹುಟ್ಟಿಕೊಳ್ಳುತ್ತವೆ
- ಭುವನೇಶ್ವರಿಯನ್ನು ಆರಾಧಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮಾನಸಿಕವಾಗಿ ತುಂಬಾ ಕಿರಿಕಿರಿ ಸಾಧ್ಯತೆ
- ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯುತ್ತದೆ
- ಸರ್ಕಾರಿ ಕೆಲಸಗಳು ಮಂದಗತಿಯಿಂದ ನಡೆಯಲಿದೆ
- ಸಾಹಿತ್ಯ, ಸಂಗೀತ ಶಾಸ್ತ್ರಜ್ಞರಿಗೆ ಗೌರವ ದೊರೆಯುತ್ತದೆ
- ಸರ್ಕಾರಿ ನೌಕರರಿಗೆ ಒತ್ತಡ, ಹಿತಶತ್ರುಗಳ ಕಾಟ ಹೆಚ್ಚಾಗಿರುತ್ತದೆ
- ಅಘೋರ ರುದ್ರನನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಶುಭ ಕಾರ್ಯಗಳನ್ನು ಮುಂದೂಡುವ ಪ್ರಸಂಗ ಬರಬಹುದು
- ವ್ಯಾಪಾರದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ
- ಅನಾರೋಗ್ಯ, ಕಲುಷಿತ ವಾತಾವರಣ, ಮಕ್ಕಳಿಂದ ಬೇಸರ ಸಾಧ್ಯತೆ
- ನಿಮ್ಮ ಜಾಣ್ಮೆ, ಬುದ್ಧಿವಂತಿಕೆಗಳು ಕೆಲಸಕ್ಕೆ ಬರುವುದಿಲ್ಲ
- ಈ ದಿನ ಬಂದದ್ದನ್ನು ನೀವು ಅನುಭವಿಸಲೇ ಬೇಕಾಗುತ್ತದೆ
- ಸ್ವಯಂವರ ಪಾರ್ವತಿ ದೇವಿಯನ್ನು ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಲಬಾಧೆಯಿಂದ ಮುಕ್ತಿ ಸಾಧ್ಯತೆ
- ಹಣದ ವಿಚಾರಕ್ಕಾಗಿ ಕುಟುಂಬದಲ್ಲಿ ವಾಗ್ಯುದ್ಧ ನಡೆಯಬಹುದು
- ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಬಹುದು
- ಇಂದು ಅನಿರೀಕ್ಷಿತವಾಗಿ ಹಣ ಬರುತ್ತದೆ
- ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಕುಟುಂಬದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತವೆ
- ಮಾತು ಮಿತವಾಗಿದ್ದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
- ಚಿಕ್ಕಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ
- ಹಿರಿಯರ, ಗುರುಗಳ ಕೋಪಕ್ಕೆ ಒಳಗಾಗುವ ಸಾಧ್ಯತೆ ಇದೆ
- ಇಂದು ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
- ನೀವು ಸಂಕಲ್ಪ ಮಾಡಿದ ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ
- ದಿನದ ಕೊನೆಯಲ್ಲಿ ಶುಭ ಫಲವಿದೆ
- ಅರುಣಾಚಲೇಶ್ವರನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us